Composer : Shri Vijayadasaru , Raga:Shanmukhapriya , Tala: Adi
ಗಿರಿಯ ತಿಮ್ಮಪ್ಪ ವಾಹನಗಳೇರಿ ನಿತ್ಯಾ |
ಮೆರೆದು ಚತುರ ಬೀದಿ ತಿರುಗಿ ಬಪ್ಪದು ನೋಡೆ || ಪ ||
ಸರಸಿಜಭವ ಭವಾಗ್ರಜರುಳಿದವರು |
ವರ ಸಕಲ ಮನೋಭೀಷ್ಟ ಕೈಕೊಳುತಾ ||
ನೆರೆದು ಸುತ್ತಲು ತಮ್ಮ ಭಕುತಿಯಲಿ ಸೂಸುತ್ತ |
ಹರುಷ ವಾರಿಧಿಯಾಳು ಮುಳಗಿ ದಟ್ಟಿಡಿಯಿಂದಾ || ೧ ||
ಎತ್ತಿದ ಸತ್ತಿಗೆಯಿಂದ ಪೀಯೂಷ |
ಸುತ್ತಲುದರೆ ಬಿಂದುಗಳೊಂದೊಂದು ||
ಮುತ್ತಿನ ಸೂರ್ಯಪಾನಾ ಪತಾಕೆಗಳು ಬೀ – |
ಸುತ್ತಲಿಪ್ಪದು ಚಾಮರ ಪಂಜುಗಳೆಸೆಯೆ || ೨ ||
ದಂಡಿಗೆ ತಾಳ ಬೆತ್ತವ ಪಿಡಿದು ನಿಂದು |
ತಂಡ ತಂಡದಲಿಂದ ಮಹಿಮೆಯನ್ನು ||
ಕೊಂಡಾಡುತ ಮನ ಉಬ್ಬಿ ಮಹೋತ್ಸವದಲ್ಲಿ |
ತೊಂಡರು ಹರಿದಾಡಿ ಹಾಡಿ ಪಾಡುತಲಿರೆ || ೩ ||
ಪವನ ಗರುಡ ಶೇಷ ಸಿಂಹ ಮಂಟಪ ಮತ್ತೆ |
ರವಿ ಶಶಿ ತುರಗ ಅಂದಣ ಮಿಕ್ಕಾದ ||
ನವರಾತ್ರಿಯೊಳಗೆಲ್ಲ ವಾಹನನಾದ ಅಂ – |
ದವನಾರು ಬಣ್ಣಿಪರು ಸಕಲ ಭೂಷಿತವಾಗೆ || ೪ ||
ಚಿನುಮಯ ರೂಪ ವಿಚಿತ್ರ ಮಹಿಮ ದೇವ |
ನೆನೆದವರ ಹಂಗಿಗೆ ಸಿಲುಕುವಾ ||
ಘನಗಿರಿ ತಿರ್ಮಲ ವಿಜಯವಿಠ್ಠಲರೇಯಾ |
ದನುಜದಲ್ಲಣನೆಂಬೊ ಬಿರಿದು ಪೊಗಳಿಸುತ್ತ || ೫ ||
giriya timmappa vAhanagaLEri nityA |
meredu catura bIdi tirugi bappadu nODe || pa ||
sarasijaBava BavAgrajaruLidavaru |
vara sakala manOBIShTa kaikoLutA ||
neredu suttalu tamma Bakutiyali sUsutta |
haruSha vAridhiyALu muLagi daTTiDiyiMdA || 1 ||
ettida sattigeyiMda pIyUSha |
suttaludare biMdugaLoMdoMdu ||
muttina sUryapAnA patAkegaLu bI – |
suttalippadu cAmara paMjugaLeseye || 2 ||
daMDige tALa bettava piDidu niMdu |
taMDa taMDadaliMda mahimeyannu ||
koMDADuta mana ubbi mahOtsavadalli |
toMDaru haridADi hADi pADutalire || 3 ||
pavana garuDa SESha siMha maMTapa matte |
ravi SaSi turaga aMdaNa mikkAda ||
navarAtriyoLagella vAhananAda aM – |
davanAru baNNiparu sakala BUShitavAge || 4 ||
cinumaya rUpa vicitra mahima dEva |
nenedavara haMgige silukuvA ||
Ganagiri tirmala vijayaviThThalarEyA |
danujadallaNaneMbo biridu pogaLisutta || 5 ||
Leave a Reply