Composer : Shri Vijayadasaru
ರಾಗ: ಆನಂದಭೈರವಿ , ಆದಿತಾಳ
ಗಿರಿರಾಜ ಚಿತ್ತ ಉದಾರ ಜೀಯಾ । ನಾ ನಿನ್ನ ಪಾದ – ।
ಕ್ಕೆರಗಿ ಯಾಚಿಸುತಲೆ ಮುಗಿವೆನು ಕೈಯ್ಯಾ । ನೆರೆ ನಂಬಿದವರನು ।
ಎರವು ಮಾಡಲು ನಿನಗೊಳಿತೇನಯ್ಯಾ । ಪಿಡಿ ಬೇಗನೆ ಕೈಯ್ಯ ॥
ಕರುಣಿಗಳರಸನೆ ಕಾಮಿತ ಫಲದನೆ ।
ಕರಿರಾಜನ ಭೀಕರ ಹರ , ವೇಂಕಟ ॥ ಪ ॥
ಆಪಾರ ಮಹಿಮಾ ಆಪದ್ಬಂಧೋ । ಆಪನ್ನರ ಪಾಲಿಪ ।
ವ್ಯಾಪಾರ ನಿನಗಲ್ಲದೆ ಮತ್ತೊಂದು । ಕಾಣೆನು ಜಗದೀ ।
ಭೂಪಾನೆ ಭೂಮ್ನಾ ಗುಣಗಣಸಿಂಧೋ । ಸ್ವಾಮಿಯೆ ಎನಗಿಂದು ॥
ಪಾಪಾದ ಪರ್ವತ ಲೇಪವಾಗದಂ –
ತೀ ಪರಿಪಾಲಿಸು ಶ್ರೀಪತಿ ಅಂಜನ ॥ 1 ॥
ಕಲಿಯುಗದೊಳಗೀ ಪರ್ವತಕೆಲ್ಲಿ । ಸರಿಗಾಣೆನು ಯೆಂದು ।
ನೆಲಸಿದೆ ನೀನೆ ಈ ಸ್ಥಳದಲ್ಲಿ । ವೈಕುಂಠಕಿಂತ ।
ನೆಲೆಯು ವೆಗ್ಗಳವೆಂದು ನೀ ಬಲ್ಲೀ । ಆದ ಕಾರಣ ಇಲ್ಲೀ ॥
ಜಲಜ ಭವಾದ್ಯರು ಒಲಿದೊಲಿದೊಲಿಯುತ
ತಲೆದೂಗುವರಯ್ಯಾ ಭಳಿರೆ ಕಾಂಚನ ॥ 2 ॥
ತರುಜಾತಿ ಮೃಗಪಕ್ಷಿಗಳಾಕಾರ । ಮೊದಲಾದ ರೂಪದಿ |
ಸುರರು ಕಿನ್ನರರು ತಮ್ಮ ಪರಿವಾರ । ಒಡಗೂಡಿ ನಿನ್ನ ।
ಚರಣಾರಾಧನೆ ಮಾಡಿದ ವಿಸ್ತಾರ । ಈ ಬಗೆ ಶೃಂಗಾರ ॥
ದೊರೆತನ ಠೀವಿಗೆ ಧರಣಿ ಮಂಡಲದಿ
ಸರಿಗಾಣೆನೊ ಹೇ ತಿರುಪತಿ ವೇಂಕಟ ॥ 3 ॥
ಹದಿನಾಲ್ಕು ಲೋಕದ ಭಾಗ್ಯಗಳೆಲ್ಲ । ಅಮರರ ತತಿಗೆ ಕೊಟ್ಟ ।
ವಿಧವೆಲ್ಲಾ ಪ್ರತ್ಯಕ್ಷವು ಪುಸಿಯೆಲ್ಲ । ನಾನವರ ನೋಡೆ ।
ಅಧಮಾಧಮನು ನೀನೆ ಬಲ್ಲೆಲ್ಲಾ । ಎನ್ನ ಯೋಗ್ಯತದ ॥
ಹದುಳವೇನಿಹುದು ಒಡಗೂಡಿಸದಲೆ
ಒದಗಿ ಪಾಲಿಸೋ ವಸುಮತಿ ಧರ ಫಣಿ ॥ 4 ॥
ಸುವರ್ಣಮುಖರೀ ತೀರನಿವಾಸ । ನವರಾತ್ರಿಯಲ್ಲೀ ।
ಅವ ಬ್ರಹ್ಮೋತ್ಸವ ನೋಡಲು ಶ್ರೀಶ । ಸಂಪದವನಿತ್ತು ಪೊ – ।
ರೆವಾನು ಕಲುಷದ ಭಯ ಬರಲೀಸ । ಶ್ರೀ ಶ್ರೀನಿವಾಸ ॥
ಶ್ರೀವರ ಭೂಧರ ವಿಜಯವಿಠಲ ಪ –
ರಾವರೇಶ ಭೂದೇವರ ವರದ ॥ 5 ॥
girirAja citta udAra jIyA | nA ninna pAda – |
kkeragi yAcisutale mugivenu kaiyyA | nere naMbidavaranu |
eravu mADalu ninagoLitEnayyA | piDi bEgane kaiyya ||
karuNigaLarasane kAmita Paladane |
karirAjana BIkara hara , vEMkaTa || pa ||
ApAra mahimA ApadbaMdhO | Apannara pAlipa |
vyApAra ninagallade mattoMdu | kANenu jagadI |
BUpAne BUmnA guNagaNasiMdhO | svAmiye enagiMdu ||
pApAda parvata lEpavAgadaM –
tI paripAlisu SrIpati aMjana || 1 ||
kaliyugadoLagI parvatakelli | sarigANenu yeMdu |
nelaside nIne I sthaLadalli | vaikuMThakiMta |
neleyu veggaLaveMdu nI ballI | Ada kAraNa illI ||
jalaja BavAdyaru olidolidoliyuta
taledUguvarayyA BaLire kAMcana || 2 ||
tarujAti mRugapakShigaLAkAra | modalAda rUpadi |
suraru kinnararu tamma parivAra | oDagUDi ninna |
caraNArAdhane mADida vistAra | I bage SRuMgAra ||
doretana ThIvige dharaNi maMDaladi
sarigANeno hE tirupati vEMkaTa || 3 ||
hadinAlku lOkada BAgyagaLella | amarara tatige koTTa |
vidhavellA pratyakShavu pusiyella | nAnavara nODe |
adhamAdhamanu nIne ballellA | enna yOgyatada ||
haduLavEnihudu oDagUDisadale
odagi pAlisO vasumati dhara PaNi || 4 ||
suvarNamuKarI tIranivAsa | navarAtriyallI |
ava brahmOtsava nODalu SrISa | saMpadavanittu po – |
revAnu kaluShada Baya baralIsa | SrI SrInivAsa ||
SrIvara BUdhara vijayaviThala pa –
rAvarESa BUdEvara varada || 5 ||
Leave a Reply