Composer : Shri Purandara dasaru
ಎನ್ನ ಬಿಟ್ಟು ನೀನು ಅಗಲದಿರೊ ಶ್ರೀನಿವಾಸ ||ಪ||
ನಿನ್ನ ನಂಬಿದ ದಾಸನಲ್ಲವೇನೋ ||ಅ||
ತನುವೆಂಬೊ ಮಂಟಪದಿ
ಮನವೆಂಬೊ ಹಸೆ ಮಂಚ ,
ಘನವಾದ ಸುಜ್ಞಾನ ದೀಪದ ಬೆಳಕಲ್ಲಿ,
ಸನಕಾದಿ ವಂದ್ಯ ನೀ ಬೇಗ ಬಾರೋ |೧|
ಪಂಚರಿವರು ಯಾವಾಗಲೂ,
ಹೊಂಚ್ಹಾಕಿ ನೋಡುತಾರೆ
ಕೊಂಚಗಾರರು ಆರು ಮಂದಿ ಅವರು,
ಹಿಂಚು ಮುಂಚಿಲ್ಲದೆ ಎಳೆಯುತಾರೆ |೨|
ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ,
ಇನ್ನಾದರು ನೀ ಎನ್ನ ಕಾಯೊ
ಘನ್ನ ಮಹಿಮ ಶ್ರೀ ಪುರಂದರವಿಠಲ,
ಮನ್ನಿಸಿ ಮಮತೆ ಎನ್ನಲ್ಲಿ ತೋರೊ |೩|
enna biTTu nInu agaladiro SrInivAsa ||pa||
ninna naMbida dAsanallavEnO ||a||
tanuveMbo maMTapadi
manaveMbo hase maMca ,
GanavAda suj~jAna dIpada beLakalli,
sanakAdi vaMdya nI bEga bArO |1|
paMcarivaru yAvAgalU,
hoMc~hAki nODutAre
koMcagAraru Aru maMdi avaru,
hiMcu muMcillade eLeyutAre |2|
munna mADida duShkarmadi baLalide,
innAdaru nI enna kAyo
Ganna mahima SrI puraMdaraviThala,
mannisi mamate ennalli tOro |3|
Leave a Reply