Composer : Shri Vishwendra Teertharu
ಏಳಯ್ಯ ಮಹಾರಾಜ ಬೆಳಗಾಯಿತೇಳಯ್ಯ ರಂಗ ಬಾ (ಪ)
ಬಾಗಿಲಲಿ ಕೂಗುವರು ಸನಕಾದಿ ಮುನಿವರರು
ನಾಗಭೂಷಣನು ಕೈಮುಗಿದು ನಿಂತ |
ಜಾಗರವ ಮಾಡಿರ್ಪ ಸುರರೆಲ್ಲ ಬಂದಾಯ್ತು
ಯೋಗಿಗಳು ಪೊಗಳುವರು ನಿನ್ನಂಘ್ರಿಯ (೧)
ಲಂಕೆಯನು ಬಿಟ್ಟು ವಿಭೀಷಣನು ನಿಂತಿರ್ದ
ಗಂಗೆಯನು ಬಿಟ್ಟೇಳು ಜಗದೀಶನೆ |
ತಂಗಿಯನು ಬೇಡುವರೆ ಭಾವ ಪಾರ್ಥನು ಬಂದ
ಮಂಗಳದ ನುಡಿ ನಿನಗೆ ಕೇಳಲಿಲ್ಲವೊ ಹರಿಯೆ (೨)
ಪುಟ್ಟಾದ ಮುನಿ ಬಂದನಿಷ್ಟ ಭೀಮನು ಬಂದ
ಥಟ್ಟನೆ ಏಳು ಯಾದವರಿಗರಸ |
ಸೃಷ್ಟಿಗೊಡೆಯನೆ ಕೇಳು ಭೂಸುರನು ರುಕ್ಮಿಣಿಯ
ಪುಟ್ಟ ವಾಲೆಯ ತಂದ ನೀ ನೋಡು ನೋಡು (೩)
ಕೋಪಿಗಳರಸಾದಿ ದುರ್ವಾಸ ಮುನಿ ಬಂದ |
ಇಂಪಾಗಿ ಪಾಡುತಿಹ ಸುರಮುನಿಯು ಬಂದ |
ಕೋಪದೊಳೊದೆದ ಮುನಿ ಬಂದ ಬೇಗೇಳು
ಪುಷ್ಪಶರ ಮಗ ಬಂದ ಬೇಗೇಳು ರಂಗ (೪)
ಸಿರಿದೇವಿ ನಿನ್ನಂಘ್ರಿಗಳನೊತ್ತ ಬಿಡಳೇನೊ |
ಮಾರುತಿಯ ಜಪವಿನ್ನು ಮುಗಿಯಲಿಲ್ಲೊ |
ಕರುಣದಿಂದಲಿ ಕಾಯೋ ರಾಜೇಶ ಹಯಮುಖನೆ
ನರರೆಲ್ಲ ನಗುವಂತೆ ಮಾಡದಿರೊ ರಂಗ (೫)
ELayya mahArAja beLagAyitELayya raMga bA (pa)
bAgilali kUguvaru sanakAdi munivararu
nAgaBUShaNanu kaimugidu niMta |
jAgarava mADirpa surarella baMdAytu
yOgigaLu pogaLuvaru ninnaMGriya (1)
laMkeyanu biTTu viBIShaNanu niMtirda
gaMgeyanu biTTELu jagadISane |
taMgiyanu bEDuvare BAva pArthanu baMda
maMgaLada nuDi ninage kELalillavo hariye (2)
puTTAda muni baMdaniShTa BImanu baMda
thaTTane ELu yAdavarigarasa |
sRuShTigoDeyane kELu BUsuranu rukmiNiya
puTTa vAleya taMda nI nODu nODu (3)
kOpigaLarasAdi durvAsa muni baMda |
iMpAgi pADutiha suramuniyu baMda |
kOpadoLodeda muni baMda bEgELu
puShpaSara maga baMda bEgELu raMga (4)
siridEvi ninnaMGrigaLanotta biDaLEno |
mArutiya japavinnu mugiyalillo |
karuNadiMdali kAyO rAjESa hayamuKane
nararella naguvaMte mADadiro raMga (5)
Leave a Reply