Bideno ninnanghri

Composer : Shri Prasannavenkata dasaru

ಬಿಡೆನೋ ನಿನ್ನಂಘ್ರಿ ಶ್ರೀನಿವಾಸ,
ಎನ್ನ ದುಡಿಸಿಕೊಳ್ಳೆಲೋ ಶ್ರೀನಿವಾಸ
ನಿನ್ನುಡಿಯೇ ಜಿತಲ್ಲೋ ಶ್ರೀನಿವಾಸ,
ಎನ್ನ ನಡೆ ತಪ್ಪು ಕಾಯೋ ಶ್ರೀನಿವಾಸ ||ಪ||

ಬಡಿಯೋ ಬೆನ್ನಲ್ಲಿ ಶ್ರೀನಿವಾಸ
ನನ್ನೊಡಲ ಹೊಯ್ಯದಿರೊ ಶ್ರೀನಿವಾಸ
ನಾ-ಬಡವ ಕಾಣೆಲೋ ಶ್ರೀನಿವಾಸ,
ನಿನ್ನೊಡಲ ಹೊಕ್ಕೆನೊ ಶ್ರೀನಿವಾಸ || ೧ ||

ಪಂಜು ವಿಡಿವೆನೊ ಶ್ರೀನಿವಾಸ ನಿನ್-
ಎಂಜಲ ಬಳಿದುಂಬೆ ಶ್ರೀನಿವಾಸ
ನಾಸಂಜೆ ಉದಯಕೆ ಶ್ರೀನಿವಾಸ ,
ಕಾಳಂಜೆಯ ಪಿಡಿವೆ ಶ್ರೀನಿವಾಸ || ೨ ||

ಸತ್ತಿಗೆ ಚಾಮರ ಶ್ರೀನಿವಾಸ ನಾ-
ನೆತ್ತಿ ಕುಣಿವೆನೋ ಶ್ರೀನಿವಾಸ
ನಿನ್ನ -ರತ್ನದ ಹಾವಿಗೆ ಶ್ರೀನಿವಾಸ ,
ನಾ-ಹೊತ್ತು ನಲಿವೆನೋ ಶ್ರೀನಿವಾಸ || ೩ ||

ಹೇಳಿದಂತಾಲಿಹೆ ಶ್ರೀನಿವಾಸ
ನಿನ್ನಾಳಿಗಳಾಗಿಹೆ ಶ್ರೀನಿವಾಸ
ಅವ-ರೂಳಿಗವ ಮಾಳ್ಪೆ ಶ್ರೀನಿವಾಸ,
ನನ್ನ ಪಾಲಿಸೋ ಬಿಡದೆ ಶ್ರೀನಿವಾಸ || ೪ ||

ನಿನ್ನ ನಾಮ ಹೋಳಿಗೆ ಶ್ರೀನಿವಾಸ |
ಕಳ್ಳ- ಕುನ್ನಿ ನಾನಾಗಿಹೆ ಶ್ರೀನಿವಾಸ
ಕಟ್ಟಿ-ನಿನ್ನವರೊದ್ದರೆ ಶ್ರೀನಿವಾಸ ,
ನನಗಿನ್ನು ಲಜ್ಜೇತಕೆ ಶ್ರೀನಿವಾಸ || ೫ ||

ಬೀಸಿ ಕೊಳ್ಳಲವರೆ ಶ್ರೀನಿವಾಸ,
ಮುದ್ರೆ ಕಾಸಿ ಚುಚ್ಚಲವರೆ ಶ್ರೀನಿವಾಸ
ಮಿಕ್ಕ ಘಾಸಿಗೆ ನಾನಂಜೆನಯ್ಯ ಶ್ರೀನಿವಾಸ
ಎಂಜಲಾಸೆಯ ಭಂಟ ನಾ ಶ್ರೀನಿವಾಸ || ೬||

ಹೇಸಿ ನಾನಾಧರೆ ಶ್ರೀನಿವಾಸ ,ಹರಿ-
ದಾಸರೊಳು ಪೊಕ್ಕೆ ಶ್ರೀನಿವಾಸ
ಅವರ-ಭಾಷೆಯ ಕೇಳಿಹೆ ಶ್ರೀನಿವಾಸ ,
ಆವಾಸಿಯ ಸೈರಿಸೊ ಶ್ರೀನಿವಾಸ || ೭ ||

ತಿಂಗಳವನಲ್ಲ ಶ್ರೀನಿವಾಸ , ವತ್ಸ-
ರಂಗಳವನಲ್ಲ ಶ್ರೀನಿವಾಸ
ರಾಜಂಗಳ ಸವದಿಪೆ ಶ್ರೀನಿವಾಸ ,
ಭವಂಗಳ ಧಾಟುವೆ ಶ್ರೀನಿವಾಸ || ೮ ||

ನಿನ್ನವ ನಿನ್ನವ ಶ್ರೀನಿವಾಸ,
ನಾನನ್ಯರನರಿಯೆನೊ ಶ್ರೀನಿವಾಸ
ಅಯ್ಯ- ಮನ್ನಿಸೋ ತಾಯ್ತಂದೆ ಶ್ರೀನಿವಾಸ
ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ || ೯ ||


biDenO ninnaMghri shrInivAsa,
enna duDisikoLLelO shrInivAsa
ninnuDiyE jitallO shrInivAsa,
enna naDe tappu kAyO shrInivAsa ||pa||

baDiyO bennalli shrInivAsa
nannoDala hoyyadiro shrInivAsa
nA-baDava kANelO shrInivAsa,
ninnoDala hokkeno shrInivAsa || 1 ||

paMju viDiveno shrInivAsa nin-
eMjala baLiduMbe shrInivAsa
nAsaMje udayake shrInivAsa ,
kALaMjeya piDive shrInivAsa || 2 ||

sattige cAmara shrInivAsa nA-
netti kuNivenO shrInivAsa
ninna -ratnada hAvige shrInivAsa ,
nA-hottu nalivenO shrInivAsa || 3 ||

hELidaMtAlihe shrInivAsa
ninnALigaLAgihe shrInivAsa
ava-rULigava mALpe shrInivAsa,
nanna pAlisO biDade shrInivAsa || 4 ||

ninna nAma hOLige shrInivAsa |
kaLLa- kunni nAnAgihe shrInivAsa
kaTTi-ninnavaroddare shrInivAsa ,
nanaginnu lajjEtake shrInivAsa || 5 ||

bIsi koLLalavare shrInivAsa,
mudre kAsi cuccalavare shrInivAsa
mikka ghAsige nAnaMjenayya shrInivAsa
eMjalAseya BaMTa nA shrInivAsa || 6||

hEsi nAnAdhare shrInivAsa ,hari-
dAsaroLu pokke shrInivAsa
avara-BASheya kELihe shrInivAsa ,
AvAsiya sairiso shrInivAsa || 7 ||

tiMgaLavanalla shrInivAsa , vatsa-
raMgaLavanalla shrInivAsa
rAjaMgaLa savadipe shrInivAsa ,
BavaMgaLa dhATuve shrInivAsa || 8 ||

ninnava ninnava shrInivAsa,
nAnanyaranariyeno shrInivAsa
ayya- mannisO tAytaMde shrInivAsa
prasanna veMkaTAdri shrInivAsa || 9 ||

Leave a Reply

Your email address will not be published. Required fields are marked *

You might also like

error: Content is protected !!