Bandevayya Govinda shetty

Composer : Shri Kanakadasaru

Smt.Shweta & Shri Kiran

ಬಂದೆವಯ್ಯಾ ಗೋವಿಂದಶೆಟ್ಟಿ |
ಇಂದು ನಿಮ್ಮ ಹರಿವಾಣ ಪ್ರಸಾದವುಂಟೆನಲಾಗಿ ||
ಬಂದೆವಯ್ಯ ಗೋವಿಂದ ಶೆಟ್ಟಿ |ಅ.ಪ.|

ಅಪ್ಪವು ಅತಿರಸ ತುಪ್ಪವು ಬಿಸಿ ಹಾಲು
ಒಪ್ಪುವ ಸಕ್ಕರೆ ಯಾಲಕ್ಕಿಯು
ಅಪರೂಪವಾದ ಕಜ್ಜಾಯಗಳನೆಲ್ಲ
ಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ |೧|

ಒಡೆದ ಮಡಕೆ ತಂದು ಅರೆದು ನಾಮವ ಮಾಡಿ
ಕೊಡುವೆನು ಕಾಸಿಗೆ ಒಂದೊಂದನು
ಒಡಲ ತುಂಬಿ ಮಿಕ್ಕ ವೋಗರ ಮಾರಿಸಿ
ಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ |೨|

ಶೇಷಗಿರಿಯಮೇಲೆ ವಾಸವಾಗಿಹ ಶೆಟ್ಟಿ
ದೇಶ ದೇಶಕ್ಕೆ ಹೆಸರಾದ ಶೆಟ್ಟಿ
ಕಾಸು ಕಾಸಿಗೆ ಬಡ್ಡಿ ಗಳಿಸಿಕೊಂಬ ಶೆಟ್ಟಿ
ಆದಿಕೇಶವ ನಾರಾಯಣ ತಿಮ್ಮ ಶೆಟ್ಟಿ |೩|


baMdevayyA gOviMdaSeTTi |
iMdu nimma harivANa prasAdavuMTenalAgi ||
baMdevayya gOviMda SeTTi |a.pa.|

appavu atirasa tuppavu bisi hAlu
oppuva sakkare yAlakkiyu
aparUpavAda kajjAyagaLanella
Cappanna dESakke mAruva SeTTi |1|

oDeda maDake taMdu aredu nAmava mADi
koDuvenu kAsige oMdoMdanu
oDala tuMbi mikka vOgara mArisi
oDaveya gaLisuva kaDulOBi SeTTi |2|

SEShagiriyamEle vAsavAgiha SeTTi
dEsha dESakke hesarAda SeTTi
kAsu kAsige baDDi gaLisikoMba SeTTi
AdikESava nArAyaNa timma SeTTi |3|

Leave a Reply

Your email address will not be published. Required fields are marked *

You might also like

error: Content is protected !!