Anjikyak enaganjiki

Composer : Shri Prasannavenkata dasaru

By Smt.Shubhalakshmi Rao

ಅಂಜಿಕ್ಯಾಕ್-ಎನಗಂಜಿಕಿ
ಕಂಜನಾಭ ಶ್ರೀನಿವಾಸನ ದಯವಿರಲು ||ಪ||

ಅಶನವಸನವನ್ನು ಕುಳಿತಲ್ಲೆ ನಡಿಸುವ
ನಿಶಿದಿನ ನೀಚರಾಧೀನ ಮಾಡದೆ
ಹಸನಾಗಿ ತನ್ನಂಘ್ರಿ ನೆಳಳೊಳು ಬಚ್ಚಿಟ್ಟು
ಕುಶಲದಿ ಸಾಕುವ ಧೊರೆಯ ನಂಬಿದ ಬಳಿಕ ||೧||

ಹಲ್ಲು ಕಚ್ಚಿ ಕಲ್ಲು ಹೊತ್ತು ಧನವನುಳ್ಳ
ಕ್ಷುಲ್ಲಕ ಚಿತ್ತರ ಕಾಯುವಾಸಕ್ತಿ
ಎಲ್ಲ ವ್ಯವಹಾರವ ಮಾಡುವ ಬಲ ನನ-
ಗಿಲ್ಲೆಂದು ಆಯಾಸಬಡಲೀಸದವನಿರೆ ||೨||

ಆವಾವ ದೇಶದಲೀರೆ ಆವ ಕಾಲದಲೀರೆ
ಸೇವೆಗೆ ನಾ ತಪ್ಪೆ ಕೃಪೆ ತಪ್ಪಿಸ
ಭಾವಿಕರೊಡೆಯ ಶ್ರಿ ಪ್ರಸನ್ವೆಂಕಟಾದ್ರೀಶ
ಸಾವು ಕಳೆದು ಜೀವಕಾಶ್ರಯನಾಗಿರೆ ||೩||


aMjikyAk-enagaMjiki
kaMjanABa SrInivAsana dayaviralu ||pa||

aSanavasanavannu kuLitalle naDisuva
niSidina nIcarAdhIna mADade
hasanAgi tannaMGri neLaLoLu bacciTTu
kuSaladi sAkuva dhoreya naMbida baLika ||1||

hallu kacci kallu hottu dhanavanuLLa
kShullaka chittara kAyuvAsakti
ella vyavahArava mADuva bala nana-
gilleMdu AyAsabaDalIsadavanire ||2||

AvAva dESadalIre Ava kAladalIre
sEvege nA tappe kRupe tappisa
BAvikaroDeya Sri prasanveMkaTAdrISa
sAvu kaLedu jIvakASrayanAgire ||3||

Leave a Reply

Your email address will not be published. Required fields are marked *

You might also like

error: Content is protected !!