Raga: Mohana
ಮೊದಲಕಲ್ಲು ಶೇಷದಾಸರ ರಚನೆ
ಶ್ರೀವಾಯುದೇವರ ಸುಳಾದಿ
ರಾಗ: ಮೋಹನ
ಧ್ರುವತಾಳ
ಘನ ದಯಾನಿಧಿಯಾದ ಪವನರಾಯನೆ ನಮೊ
ಪುನರಪಿ ನಮೋ ನಿನ್ನ ಪಾದ ಸರಸಿರುಹಕೆ
ಮಣಿದು ಬೇಡಿಕೊಂಬೆ ನೀನೇವೆ ಗತಿ ಎಂದು
ನಿನಗಿಂತ ಹಿತರಾರು ಜೀವನಕೆ
ಸನಕಾದಿ ವಂದ್ಯನ ಆಜ್ಞಾದಿಂದಲಿ ಪರಮ
ಅಣುಗಳಲ್ಲಿ ವ್ಯಾಪ್ತನಾಗಿ ಬಿಡದೆ
ಅಣುರೂಪಗಳಿಂದ ನಿಂದು ಮಾಡಿದ ಕೃತ್ಯ
ಮನಸಿಜ ವೈರಿಯಿಂದ ತಿಳಿಯಲೊಶವೆ
ಹೀನ ಮನಸಿನಿಂದ ಬದ್ಧನಾದವ ನಾನು
ಗುಣರೂಪ ಕ್ರಿಯೆಗಳ ವಿದಿತವೇನೋ
ತನುವಿನೊಳಗೆ ಮೂರು ಕೋಟ್ಯಧಿಕ ಎಪ್ಪತ್ತೆರಡು
ಎನಿಪ ಸಾಸಿರ ರೂಪದಿಂದ ಸತಿಯ ಸಹಿತ
ತೃಣ ಮೊದಲಾದ ಜೀವ ಪ್ರಕೃತಿ ಕಾಲಕರ್ಮ
ಅನುಸಾರವಾಗಿ ಕ್ರಿಯೆಗಳನೇ ಮಾಡಿ
ಅನಿಮಿತ್ತ ಬಾಂಧವನೆನಿಸಿ ಸಜ್ಜನರಿಗೆ
ಜ್ಞಾನಭಕ್ತ್ಯಾದಿಗಳು ನೀನೇ ಇತ್ತು
ಮನದಲ್ಲಿ ಹರಿರೂಪ ಸಂದರುಶನವಿತ್ತು
ಘನಿಭೂತವಾದ ಆನಂದದಿಂದ
ವಿನಯದಿಂದಲ್ಲಿ ಪೊರೆವ ಉಪಕಾರ-
-ವನು ಸ್ಮರಿಸಲಾಪೆನೆ ಎಂದಿಗೂ ಗುಣನಿಧಿಯೆ
ಇನಕೋಟಿತೇಜ ಗುರುವಿಜಯವಿಠ್ಠಲರೇಯ
ಇನಿತು ನಿನ್ನೊಳು ಲೀಲೆ ಮಾಡುವ ಆವಕಾಲ || ೧ ||
ಮಟ್ಟತಾಳ
ಮಿನುಗುವ ಕಂಠದಲಿ , ಎರಡು ದಳದ ಕಮಲ
ಕರ್ಣಿಕೆ ಮಧ್ಯದಲಿ , ಸತಿಸಹಿತ ಇದ್ದು
ವನಜಾಸನ ವಿಡಿದು ತೃಣ ಜೀವರ ತನಕ
ತನುವಿನೊಳಗೆ ವಿಹಿತವಾದ ಶಬ್ದಗಳನ್ನು
ನೀನೇವೆ ಮಾಡಿ ಅವರವರಿಗೆ ಕೀರ್ತಿ
ಘನತೆಯನೇ ಇತ್ತು ಕಾಣಿಸಿಕೊಳ್ಳದಲೆ
ಮನುಜಾಧಮರಿಗೆ ಮಾಯವ ಮಸಗಿಸಿ
ಕೊನೆಗುಣದವರನ್ನ ನಿತ್ಯ ದುಃಖಗಳಿಂದ
ದಣಿಸುವಿ ಪ್ರಾಂತ್ಯದಲಿ ಕೊನೆಮೊದಲಿಲ್ಲದಲೆ
ದನುಜಮರ್ದನ ಗುರುವಿಜಯವಿಠ್ಠಲರೇಯ
ನಿನಗಿತ್ತನು ಈ ಪರಿ ಸ್ವತಂತ್ರ ಮಹಿಮೆಯನು || ೨ ||
ರೂಪಕತಾಳ
ನಾಶಿಕ ಎಡದಲ್ಲಿ ಭಾರತಿ ತಾನಧೋ –
ಶ್ವಾಸ ಬಿಡಿಸುವಳು ನಿನ್ನಾಜ್ಞದೀ
ನಾಶಿಕ ಬಲದಲ್ಲಿ ಈಶನಾಜ್ಞದಿ ಊಧ್ರ್ವ-
ಶ್ವಾಸ ಬಿಡಿಸಿ ಪೊರೆವಿ ಜೀವರನ್ನು
ತಾಸಿಗೊಂಭೈನೂರು ಕ್ರಮದಿಂದ ಇಪ್ಪತ್ತೊಂದು
ಸಾಸಿರದಾರು ಶತ ದಿನ ಒಂದರಲಿ
ಭೂ ಶಬ್ದದಿಂದಲಿ ಹರಿಯನ್ನೇ ಪೂಜಿಸುತ್ತ
ಆಶೀತಿ ನಾಲ್ಕುಲಕ್ಷ ಜೀವರಿಗೆ
ಲೇಸು ಮಿಶ್ರಗಳೆಲ್ಲ ಅದರಂತೆ ನಿರ್ದೇಶ
ವಾಸಗೈಸುವಿ ನೀನೆ ಪ್ರಾಂತ್ಯದಲ್ಲಿ
ಈ ಸುಜ್ಞಾನವ ತಿಳಿದುಪಾಸನೆ ಮಾಳ್ಪರಿಗೆ
ಶ್ವಾಸಮಂತ್ರದ ಫಲವ ಶೇಷವೀವ
ಕಾಸಿನಿಂದಲಿ ಕೋಟಿ ದ್ರವ್ಯ ಪ್ರಾಪುತದಂತೆ
ವಾಸುದೇವನು ಇದಕೆ ತುಷ್ಟನಾಗೀ
ಈ ಶರೀರದಿ ಪೊಳೆದು ಕ್ಲೇಶವ ಪರಿಹರಿಪ
ಈ ಸಂಜ್ಞದಿಂದಲ್ಲಿ ದಿವಿಜರೆಲ್ಲ
ದಾಸರಾಗಿಹರಯ್ಯಾ ನಿನ್ನ ಪಾದವ ಬಿಡದೆ
ಕ್ಲೇಶಾನಂದಗಳೆಲ್ಲ ನಿನ್ನಾಧೀನ
ದೇಶ ಕಾಲ ಪೂರ್ಣ ಗುರುವಿಜಯವಿಠ್ಠಲರೇಯ
ಭಾಸುರ ಜ್ಞಾನ ನಿನ್ನಿಂದನೀವ || ೩ ||
ಝಂಪೆತಾಳ
ಪಂಚದ್ವಾರಗಳಲ್ಲಿ ಪಂಚವಪುಷಗಳಿಂದ
ಪಂಚರೂಪನ ಧ್ಯಾನ ಮಾಳ್ಪ ನಿನ್ನ
ಪಂಚಮುಖ ಮೊದಲಾದ ಅಮರರೆಲ್ಲರು ನಿ-
ಶ್ಚಂಚಲದಿ ಭಜಿಸುತಿರೆ ಅವರವರ
ವಾಂಛಿತಗಳನಿತ್ತು ಪರಮ ಮುಖ್ಯಪ್ರಾಣ ದ್ವಿ-
ಪಂಚಕರಣಕೆ ಮುಖ್ಯ ಮಾನಿ ನೀನೆ
ಪಂಚರೂಪಗಳಿಂದ ಪಂಚಾಗ್ನಿಗತನಾಗಿ
ಪಂಚವ್ಯಾಪಾರಗಳ ಮಾಳ್ಪ ದೇವ
ಪಂಚಪರ್ವದಲಿಪ್ಪ ಪಂಚ ಪಂಚಮರರು
ಸಂಚರಿಸುವರಯ್ಯಾ ನಿನ್ನಿಂದಲಿ
ಪಂಚಭೇದಗಳರುಹಿ ಶುದ್ಧ ಶಾಸ್ತ್ರಗಳಿಂದ ಪ್ರ-
ಪಂಚ ಸಲಹಿದ ವಿಮಲ ಉಪಕಾರಿಯೇ ನಿ-
ಷ್ಕಿಂಚನಪ್ರಿಯ ಗುರುವಿಜಯವಿಠ್ಠಲರೇಯನ
ಮಿಂಚಿನಂದದಿ ಎನ್ನ ಮನದಿ ನಿಲಿಸು || ೪ ||
ತ್ರಿವಿಡಿತಾಳ
ದಳ ಅಷ್ಟವುಳ್ಳ ರಕ್ತಾಂಬುಜದ ಮಧ್ಯ
ಪೊಳೆವ ಕರ್ಣಿಕೆಯಲ್ಲಿ ಶೋಭಿಸುವ
ಮೂಲೇಶನ ಪಾದ ಪಂಕಜದಲಿ ನಿಂದು
ಸಲೆ ಭಕುತಿಯಿಂದ ಭಜಿಸುವ ನಿನ್ನ ಚರಣ
ಮೂಲದಲ್ಲಿ ಜೀವ ಆಶ್ರಯಿಸಿ ಇಪ್ಪನಾಗಿ
ಸ್ಥಳವ ಸೇರಿಪ ಭಾರ ನಿನ್ನದಯ್ಯಾ
ಒಲ್ಲೆನೆಂದರೆ ಬಿಡದು ಭಕುತರ ಅಭಿಮಾನ
ಒಲಿದು ಪಾಲಿಸಬೇಕು ಘನ ಮಹಿಮಾ
ಖಳದರ್ಪಭಂಜನ ಗುರುವಿಜಯವಿಠ್ಠಲರೇಯ
ಒಲಿವ ನಿಮ್ಮಯ ಕೃಪೆಗೆ ವಿಮಲ ಚರಿತ || ೫ ||
ಅಟ್ಟತಾಳ
ಜಾಗೃತಿ ಸ್ವಪ್ನ ಸುಷುಪ್ತಿಯಲ್ಲಿ ನೀನು
ಜಾಗರೂಕನಾಗಿ ಜೀವರ ಪಾಲಿಸಿ
ಭಾಗತ್ರಯದಲ್ಲಿ ವಿಭಾಗ ಮಾಡುವಿ
ನಾಗಭೂಷಣಾದಿ ಸುರರಿಗೆ ಜೀವನ
ಸಾಗರ ಮೊದಲಾದ ಸಕಲರಲ್ಲಿ ವ್ಯಾಪ್ತ
ನಾಗರಾಜನ ಅಂಗುಟದಿ ಮೀಟಿದ ಶಕ್ತ
ಯುಗಾದಿ ಕೃತುನಾಮ ಗುರುವಿಜಯವಿಠ್ಠಲರೇಯನ
ಯೋಗವ ಪಾಲಿಸಿ ಭವದೂರ ಮಾಡೋದು || ೬ ||
ಆದಿತಾಳ
ಅಸುರರ ಪುಣ್ಯವನ್ನು ಭಕುತರಿಗಿತ್ತವರ
ಅಸಮೀಚೀನ ಕರ್ಮ ದನುಜರಿಗುಣಿಸುವಿ
ಈಶನೆ ಗತಿಯೆಂದು ನೆರೆ ನಂಬಿದವರಿಗೆ
ಸುಸಮೀಚೀನವಾದ ಮೋದಗಳೀವಿ ನಿತ್ಯ
ವಸುಧಿಯ ಭಾರವನ್ನು ಧರಿಸಿ ತ್ರಿಕೋಟಿಯ
ಸುಶರೀರಗಳಿಂದ ಬಹಿರಾವರಣದಲ್ಲಿ
ವಾಸವಾಗಿ ಸಕಲ ಭೂತ ಹೃತ್ಕಮಲದಲ್ಲಿ ನಿಂದು
ಬಿಸಜಜಾಂಡವನ್ನು ಪೊರೆವ ಕರುಣಿ ನೀನು
ಅಸಮನೆನಿಪ ಗುರುವಿಜಯವಿಠ್ಠಲರೇಯ
ವಶವಾಗುವನು ನಿನ್ನ ಕರುಣದಿ ಆವಕಾಲ || ೭ ||
ಜತೆ
ಹರಿಯ ವಿಹಾರಕ್ಕೆ ಆವಾಸನೆನಿಸುವಿ
ಗುರುವಿಜಯವಿಠ್ಠಲನ್ನ ಸುಪ್ರೀತ ಘನದೂತ ||೮||
modalakallu SEShadAsara racane
SrIvAyudEvara suLAdi
rAga: mOhana
dhruvatALa
Gana dayAnidhiyAda pavanarAyane namo
punarapi namO ninna pAda sarasiruhake
maNidu bEDikoMbe nInEve gati eMdu
ninagiMta hitarAru jIvanake
sanakAdi vaMdyana Aj~jAdiMdali parama
aNugaLalli vyAptanAgi biDade
aNurUpagaLiMda niMdu mADida kRutya
manasija vairiyiMda tiLiyaloSave
hIna manasiniMda baddhanAdava nAnu
guNarUpa kriyegaLa viditavEnO
tanuvinoLage mUru kOTyadhika eppatteraDu
enipa sAsira rUpadiMda satiya sahita
tRuNa modalAda jIva prakRuti kAlakarma
anusAravAgi kriyegaLanE mADi
animitta bAMdhavanenisi sajjanarige
j~jAnaBaktyAdigaLu nInE ittu
manadalli harirUpa saMdaruSanavittu
GaniBUtavAda AnaMdadiMda
vinayadiMdalli poreva upakAra-
-vanu smarisalApene eMdigU guNanidhiye
inakOTitEja guruvijayaviThThalarEya
initu ninnoLu lIle mADuva AvakAla || 1 ||
maTTatALa
minuguva kaMThadali , eraDu daLada kamala
karNike madhyadali , satisahita iddu
vanajAsana viDidu tRuNa jIvara tanaka
tanuvinoLage vihitavAda SabdagaLannu
nInEve mADi avaravarige kIrti
GanateyanE ittu kANisikoLLadale
manujAdhamarige mAyava masagisi
koneguNadavaranna nitya duHKagaLiMda
daNisuvi prAMtyadali konemodalilladale
danujamardana guruvijayaviThThalarEya
ninagittanu I pari svataMtra mahimeyanu || 2 ||
rUpakatALa
nASika eDadalli BArati tAnadhO –
SvAsa biDisuvaLu ninnAj~jadI
nASika baladalli ISanAj~jadi Udhrva-
SvAsa biDisi porevi jIvarannu
tAsigoMBainUru kramadiMda ippattoMdu
sAsiradAru Sata dina oMdarali
BU SabdadiMdali hariyannE pUjisutta
ASIti nAlkulakSha jIvarige
lEsu miSragaLella adaraMte nirdESa
vAsagaisuvi nIne prAMtyadalli
I suj~jAnava tiLidupAsane mALparige
SvAsamaMtrada Palava SEShavIva
kAsiniMdali kOTi dravya prAputadaMte
vAsudEvanu idake tuShTanAgI
I SarIradi poLedu klESava pariharipa
I saMj~jadiMdalli divijarella
dAsarAgiharayyA ninna pAdava biDade
klESAnaMdagaLella ninnAdhIna
dESa kAla pUrNa guruvijayaviThThalarEya
BAsura j~jAna ninniMdanIva || 3 ||
JaMpetALa
paMcadvAragaLalli paMcavapuShagaLiMda
paMcarUpana dhyAna mALpa ninna
paMcamuKa modalAda amararellaru ni-
ScaMcaladi Bajisutire avaravara
vAMCitagaLanittu parama muKyaprANa dvi-
paMcakaraNake muKya mAni nIne
paMcarUpagaLiMda paMcAgnigatanAgi
paMcavyApAragaLa mALpa dEva
paMcaparvadalippa paMca paMcamararu
saMcarisuvarayyA ninniMdali
paMcaBEdagaLaruhi Suddha SAstragaLiMda pra-
paMca salahida vimala upakAriyE ni-
ShkiMcanapriya guruvijayaviThThalarEyana
miMcinaMdadi enna manadi nilisu || 4 ||
triviDitALa
daLa aShTavuLLa raktAMbujada madhya
poLeva karNikeyalli SOBisuva
mUlESana pAda paMkajadali niMdu
sale BakutiyiMda Bajisuva ninna caraNa
mUladalli jIva ASrayisi ippanAgi
sthaLava sEripa BAra ninnadayyA
olleneMdare biDadu Bakutara aBimAna
olidu pAlisabEku Gana mahimA
KaLadarpaBaMjana guruvijayaviThThalarEya
oliva nimmaya kRupege vimala carita || 5 ||
aTTatALa
jAgRuti svapna suShuptiyalli nInu
jAgarUkanAgi jIvara pAlisi
BAgatrayadalli viBAga mADuvi
nAgaBUShaNAdi surarige jIvana
sAgara modalAda sakalaralli vyApta
nAgarAjana aMguTadi mITida Sakta
yugAdi kRutunAma guruvijayaviThThalarEyana
yOgava pAlisi BavadUra mADOdu || 6 ||
AditALa
asurara puNyavannu Bakutarigittavara
asamIcIna karma danujariguNisuvi
ISane gatiyeMdu nere naMbidavarige
susamIcInavAda mOdagaLIvi nitya
vasudhiya BAravannu dharisi trikOTiya
suSarIragaLiMda bahirAvaraNadalli
vAsavAgi sakala BUta hRutkamaladalli niMdu
bisajajAMDavannu poreva karuNi nInu
asamanenipa guruvijayaviThThalarEya
vaSavAguvanu ninna karuNadi AvakAla || 7 ||
jate
hariya vihArakke AvAsanenisuvi
guruvijayaviThThalanna suprIta GanadUta ||8||
Leave a Reply