Composer : Shrikara Vittala
ಸ್ವಾಗತಂ ಕೃಷ್ಣ ಸ್ವಾಗತಂ ಕೃಷ್ಣ
ಸ್ವಾಗತಂ ಕೃಷ್ಣ ಸ್ವಾಗತಂ
ಸಪ್ತಸಾಗರವ ದಾಟುತ ಬಂದನು
ಉಡುಪಿಯಿಂದಲೇ ಶ್ರೀ ಕೃಷ್ಣ
ಕ್ಲಪ್ತ ಸಮಯದಲಿ ಶ್ರೀ ಸುಗುಣೇಂದ್ರರು
ಕರುಣಿಸಿಹರೆಮಗೆ ಶ್ರೀ ಕೃಷ್ಣ ||೧||
ಸ್ವಾಗತಂ ಕೃಷ್ಣ…..
ದ್ವಾರಕೆಯಲಿ ರುಕ್ಮಿಣಿಯರ್ಚಿಸಿರುವ
ಕಡೆಗೋಲು ಪಿಡಿದ ಶ್ರೀ ಕೃಷ್ಣ
ತೀರಕೆ ಸೆಳೆದಿಹ ಶ್ರೀಮದಾನಂದ ತೀರ್ಥರು
ಪೂಜಿಸಿರುವ ಕೃಷ್ಣ ||೨||
ಸ್ವಾಗತಂ ಕೃಷ್ಣ…..
ದ್ವಾಪರದಲಿ ಅವತರಿಸುತ ಬುವಿಯಲಿ
ಧರ್ಮದ ಸಂಸ್ಥಾಪಕ ಕೃಷ್ಣ
ತಾಪತ್ರಯಗಳ ಪರಿಹರಿಸುವ ಕಲಿಯುಗದಲಿ
ವಿಶ್ವದಗಲ ಕೃಷ್ಣ||೩||
ಸ್ವಾಗತಂ ಕೃಷ್ಣ…..
ಅಷ್ಟ ಮಠಗಳಾ ಯತಿವರೇಣ್ಯರೆಲ್ಲರಿಗು
ಕೃಪೆಯ ತೋರಿದ ಕೃಷ್ಣ
ಇಷ್ಟವ ಪೂರೈಸಲು ಬಂದಿಹನಿಲ್ಲಿಗೆ
ಶ್ರೀಗಳ ಜೊತೆ ಶ್ರೀ ಕೃಷ್ಣ ||೪||
ಸ್ವಾಗತಂ ಕೃಷ್ಣ…..
ಶ್ರೀ ಕರವಿಠ್ಠಲದಾಸನ ಹೃನನದಲಿ
ವಿರಾಜಿಸಿಹ ಶ್ರೀಕೃಷ್ಣ
ಸ್ವೀಕರಿಸುತಲೆಮ್ಮಯ ಭಕ್ತಿಯ ನೀ
ನೆಮ್ಮದಿ ಕರುಣಿಸು ಶ್ರೀ ಕೃಷ್ಣ ||೫||
ಸ್ವಾಗತಂ ಕೃಷ್ಣ….
svAgataM kRuShNa svAgataM kRuShNa
svAgataM kRuShNa svAgataM
saptasAgarava dATuta baMdanu
uDupiyiMdalE SrI kRuShNa
klapta samayadali SrI suguNEMdraru
karuNisiharemage SrI kRuShNa ||1||
svAgataM kRuShNa…..
dvArakeyali rukmiNiyarcisiruva
kaDegOlu piDida SrI kRuShNa
tIrake seLediha SrImadAnaMda tIrtharu
pUjisiruva kRuShNa ||2||
svAgataM kRuShNa…..
dvAparadali avatarisuta buviyali
dharmada saMsthApaka kRuShNa
tApatrayagaLa pariharisuva kaliyugadali
viSvadagala kRuShNa||3||
svAgataM kRuShNa…..
aShTa maThagaLA yativarENyarellarigu
kRupeya tOrida kRuShNa
iShTava pUraisalu baMdihanillige
SrIgaLa jote SrI kRuShNa ||4||
svAgataM kRuShNa…..
SrI karaviThThaladAsana hRunanadali
virAjisiha SrIkRuShNa
svIkarisutalemmaya Baktiya nI
nemmadi karuNisu SrI kRuShNa ||5||
svAgataM kRuShNa….
Leave a Reply