Prarthana Suladi – Sheshadasaru

Raga: Bhairavi

By Smt.Nandini Sripad , Blore..

ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ
(ಗುರುವಿಜಯವಿಟ್ಠಲ ಅಂಕಿತ)
ಪ್ರಾರ್ಥನಾ ಸುಳಾದಿ
( ಶ್ರೀಹರಿಯ ಅಪರೋಕ್ಷ ಬಿಂಬ
ದರ್ಶನವೆ ಸಕಲ ಸಂಪತ್ತು.
ಶ್ರೀಹರಿಯನ್ನು ನೋಡದಿಪ್ಪದೆ ದುರ್ದಿನ.
ಕಲ್ಯಾದಿ ದೈತ್ಯರಿಗೆ ಪ್ರೇರಿಸಿ ಎನ್ನ
ಜ್ಞಾನ ತಿರೋಧಾನ ಮಾಡಿಸಿದಿ,
ಒಂದು ಕ್ಷಣ ಬ್ರಹ್ಮಕಲ್ಪವಾಗಿ
ದುಃಖದಿಂದ ಕಳೆವೆ. ನಿನ್ನ
ಕಾಣದಿಪ್ಪ ಸತ್ಯಲೋಕದ ಸೌಖ್ಯವಾದರು ಒಲ್ಲೆ.
ನಿನ್ನ ಕಾಣುವ ನರಕವಾದರು ಲೇಸು.
ಕ್ರೂರರ ಬಾಧೆ ಪರಿಹರಿಸಿ ಗೋಚರನಾಗು ಎಂದು ಪ್ರಾರ್ಥನಾ.)
ರಾಗ ಭೈರವಿ

ಧ್ರುವತಾಳ
ಇಂದಿರಾಪತಿ ನಿನ್ನ ನಿಗ್ರಹಕೆ ಪಾತ್ರರೆನಿಪ
ಕುಂದು ಜನರಾದ ಕಲ್ಯಾದಿಗಳಿಗೆ
ಒಂದೆ ದೇಹದಿಂದ ಸಾಧನ ಪೂರ್ಣವಾಹ –
ದೆಂದು ಬಾಹುಳ್ಯವಾದ ದೇಹವಿತ್ತು
ವೃಂದ ಅಘಗಳ ಮಾಡಿಸಿದಿ ಅಹರಹ
ಛಂದ ಛಂದದ ದುಃಖ ಉಣಸಿದಂತೆ
ಇಂದು ಎನಗೆ ಪ್ರಾಪ್ತವಾದ ದೇಹ ಕ್ಲಿಪ್ತ –
ದಿಂದನುಭವಿಸಿದ ಸುಖ ದುಃಖ –
ದಿಂದ ಪೂರ್ವ ಕೃತ ಕರ್ಮವು ತೀರಿಸದೆ
ಮಂದಿ ಆಯುಷ್ಯ ಎನಗೆ ಯುಕುತಿಯಿಂದ
ತಂದು ಹಾಕಿ ನಿಬಿಡ ಅಜ್ಞಾನ ಪಾಶದಿಂದ
ಬಂಧನ ಮಾಡಿ ಎನ್ನ ಭವದಿ ನಿಲಿಸಿ
ಒಂದು ನಿಮಿಷ ಒಂದು ಕಲ್ಪ ಕಳೆದ ತೆರದಿ
ನಿಂದು ಉಂಬುವ ದುಃಖಕ್ಕೆಣೆ ಯಾವದು
ಹಿಂದೆ ಮಾಡಿದ ಉಪಕಾರವೇನೊ ನಿನಗೆ
ಇಂದು ನಾ ಮಾಡಿದ ಅನುಪಕಾರವೇನೊ
ಬಂಧು ನೀನಲ್ಲವೆ ಇನಿತು ಮಾಡುವದಕ್ಕೆ
ತಂದೆ ನಿನಗೆ ನಾನು ಅಲ್ಲದವನೇ
ಮಂದರೋದ್ಧರ ಗುರುವಿಜಯವಿಟ್ಠಲರೇಯ
ಎಂದೆಂದು ಮಾಡಿದದ್ದು ಮಾಡಿದಿಯಾ || ೧ ||

ಮಟ್ಟತಾಳ

ಧ್ರುವ ಋಷಿ ಮೊದಲಾದ ಸುಜನರ ಸಂತತಿಗೆ
ಅವನಿಯೊಳಗೆ ಬಹು ಕಾಲಾವಧಿಯಾಗಿ
ಜೀವಿಸುವ ಬಗೆ ಅನುಗ್ರಹ ಮಾಡಿದರು
ನವನವವಾದಂಥ ಜ್ಞಾನ ಭಕುತಿಯಿಂದ
ಸುವಿಮಲವಾದ ಆನಂದದಿ ಮುಣುಗಿ
ಅವನಿಯ ಪತಿ ನಿನ್ನ ಕಾಣುತ ಸುಖಿಸುವರು
ಜೀವಿತವಾದದಕೆ ಇದೇ ಸಾರ್ಥಕವಯ್ಯಾ
” ಜೀವಿತಂ ವಿಷ್ಣು ಭಕ್ತಸ್ಯ ವರಂ ಪಂಚದಿನಾನ್ಯಪಿ”
ಈ ವಿಧವನ್ನು ಬಿಟ್ಟು ಅಜ್ಞಾನಾಂಧದಲಿ
ಭವದಲ್ಲಿ ಮುಣಿಗಿ ಕ್ಷಣ ಕ್ಷಣಕೆ ದುಃಖ
ತ್ರಿವಿಧ ತಾಪದಿ ಬಳಲಿ ಜ್ಞಾನರಹಿತನಾಗಿ
ಈ ವಸುಧಿಯಲ್ಲಿಪ್ಪ ಮನಜರಿಗಿಂದಲ್ಲಿ
ಕೇವಲ ನರಕ ಸ್ಥಾನವೆ ಲೇಸು ಹರಿಯೇ
” ನತು ಕಲ್ಪ ಸಹಸ್ರಸ್ತು ಭಕ್ತಿ ಹೀನಸ್ತು ಕೇಶವೆ” ಇಂತೆಂ –
ಬ ವಿಧದಿ ಈ ಅವನಿಯ ಮೇಲೆನಗೆ ನಿನ್ನಿಂದಲಿ ಅಗಲಿ ಇ –
ರುವದಕಿಂತಲ್ಲಿ ಯಮ ಸದನದಲ್ಲಿ
ನಿವಾಸವು ಎನಗೆ ಬಹು ಲೇಸು ನಿನ್ನಾಣೆ
ಶಿವ ಮೂರುತಿ ಗುರುವಿಜಯವಿಟ್ಠಲರೇಯ
ತ್ರಿವಿಧ ಕರಣದಿಂದ ಇದೆ ಮಾತು ನುಡಿವೆ || ೨ ||

ತ್ರಿವಿಡಿತಾಳ

ಕ್ರೂರ ದೈತ್ಯರನ್ನ ಘೋರ ತಮಸಿನಲ್ಲಿ
ಪಾರುಗಾಣದೆ ಇದ್ದು ದುಃಖ ಉಂಬ
ಕಾರಣದಿಂದ ದೇಹ ಛೇದ ಭೇದಾದಿಗಳು
ತೋರಗೊಡದೆ ಜನಾರ್ದನನ ನಾಮದಿಂದ
ಸಂರಕ್ಷಣ ಮಾಡುವದು ನಿನ್ನ ಕರುಣವೆಂದು
ಆರಾದರೆಂಬುವರೆ ಅವನಿನಾಥ
ಧಾರುಣಿ ಮಧ್ಯದಲ್ಲಿ ಕೇವಲ ದುಃಖ ಉಣಿಪ
ಕಾರಣದಿಂದ ಎನ್ನ ಉಳಿಸಿದದಕೆ
ಕಾರುಣ್ಯ ಮಾಡಿದೆಂಬ ಸಂಜ್ಞವಾಗದು ಎನಗೆ
ನೀರಜಾಕ್ಷನೆ ನಿನ್ನ ಪಾದದಾಣೆ
ಪರಮ ಪ್ರೀಯ ನಿನ್ನ ಕಾಣದ ದಿನ ಒಂದು
ಪರಮೇಷ್ಠಿ ಕಲ್ಪದ ನಿತ್ಯ ಕಳಿವೆ
ಕಾರಣ ಸ್ಠಿತನಿಗೆ ಪ್ರತ್ಯೇಕ ಪೇಳುವದೇನೊ
ಆರಿಗುಸರಲಿ ಎನ್ನ ಸುಖಾ ದುಃಖ
ದೂರು ಕೇಳುವರಿಲ್ಲ ಎಷ್ಟು ಕೂಗಿದರು
ಆರೆನ್ನ ವೊಹಿಸುವರು ಆರಿಗಾರು ಅ –
ಪಾರ ದಾರಿದ್ರನ ಕರೆದು ಮನ್ನಿಸಿ ಮನ್ನಿಸಿ ಸಕಲ
ವಾರಣಾಂತದಿ ಸಂಪದವನಿತ್ತು
ವರಣ ನಾಲ್ಕರಿಂದ ಮಾನ್ಯನೆನೆಸಿ ಕೊನೆಗೆ
ತಿರಕಿಯ ಮನೆ ಮನೆ ತಿರಗುವಂಥ
ತೆರದಿ ಮಾಡಿಸಿದ ಮಹಿಮೆಗೆ ಯೇನೆಂಬೆ
ನೀರಧಿ ಪೋಲ್ವ ಕರುಣಿ ನಿರ್ಮಲಾತ್ಮಾ
ಸಾರಿ ಸಾರಿಗೆ ನಿನಗೆ ವೈಶೇಷ ಪೇಳುದ್ಯಾಕೆ
ನಾರಾಯಣ ನಿನ್ನ ವಿರಹಿತದಿ
ನೀರಜಾಸನ ಲೋಕವಾದರು ಎನಗೆ
ಮೀರಿದ ನರಕವೆಂದು ಮನದಿ ತಿಳಿವೆ
ವಾರವಾರಕೆ ಎನ್ನ ಬರಿದೆ ಬಳಲಿಪದೇಕೆ
ಭಾರಕರ್ತನಾದ ಸಖನೆ ಕೇಳು
ಮಾರಜನಕ ಗುರುವಿಜಯವಿಟ್ಠಲರೇಯ
ಶಾರೀರದಲ್ಲಿದ್ದು ಸಾಕ್ಷಿ ನೀನೆ || ೩ ||

ಅಟ್ಟತಾಳ

ವೈಕುಂಠ ವಿಶೇಷ ಸಾಕಾರ ನೀನಿಂದು
ಭಕುತ ಸಮೂಹಕೆ ಬೇಕಾದ ಸುಖಗಳ –
ನೇಕವಾಗಿ ಯಿತ್ತು ಸಾಕುವೆನೆಂತೆಂಬ ಕಾರಣ ಸುಜನರು
ಬೇಕೆಂದು ಬಯಸಿ ಸಾಧನ ಮಾಳ್ಪರು
ಕಾಕುದರನಯ್ಯಾ ನಿನ್ನ ವಿರಹಿತವಾದ
ವೈಕುಂಠವಾದರೂ ಬಯಸರೊಬ್ಬರನ್ನ
ಈ ಕುಂಭಿಣಿ ವಿಷಯ ಪೇಳ್ವದೇತಕಿನ್ನು
ವೈಖಾನಸ ವಂದ್ಯ ಗುರುವಿಜಯವಿಟ್ಠಲರೇಯ
ಯಾಕೆ ಎನ್ನ ವ್ಯರ್ಥ ಬಳಲಿಸಿ ನೋಡುವಿ || ೪ ||

ಆದಿತಾಳ

ರಾಜಾಧಿರಾಜನೆನೆಸಿ ಸಕಲವಾದ ಜನರಿಂದ
ಪೂಜ್ಯನಾಗುವದು ಆನೊಲ್ಲೆ ನಿನ್ನ ಸಾಕ್ಷಿ
ಮೂರ್ಜಗದೊಳಗಿದ್ದ ಧನ ಮೊದಲಾದ ವಸ್ತು
ನಿರ್ವ್ಯಾಜದಿ ಎನಗೆ ಪ್ರಾಪ್ತವಾದರು ನಾನೊಲ್ಲೆ
ಭೋಜಕುಲೋತ್ತಮ ಇದು ಸತ್ಯ ಇದು ಸತ್ಯ
ಈ ಜೀವಿಗಳ ಮಧ್ಯ ಅಲ್ಪನಾದರು ಆಗೆ
ಹೃತ್ಸರಸಿಜದಲ್ಲಿ ಕಾಂಬುವದು ಎನಗೆ ಬೇಕು
ರಾಜೀವನೇತ್ರ ಎನಗೆ ನೈಜವಾದ ಕಾಮವಿದೆ
ವ್ಯಾಜದಿಂದ ಯಿದಕ್ಕೆ ಯೋಗ್ಯನ್ನ ಮಾಡದಲೆ ದುಃಖ
ಭಾಜನ ರೂಪವಾದ ಈ ಭೂಮಿಯಲ್ಲಿ ವ್ಯರ್ಥ
ನೀ ಜೀವಿಸೆಂದು ಪೇಳ್ವ ವಚನವು ನುಡಿವದೇಕೆ
ತೈಜಸ ರೂಪ ಗುರುವಿಜಯವಿಟ್ಠಲರೇಯಾ
ಸೋಜಿಗವೇನೆಂಬೆ ನಿನ್ನಯ ಕರುಣಕ್ಕೆ || ೫ ||

ಜತೆ

ನಿನ್ನ ನೋಡದಲಿಪ್ಪ ದಿನವೆ ದುರ್ದಿನವಯ್ಯಾ
ಮುನ್ನದಿ ನಿಜವಿದು ಗುರುವಿಜಯವಿಟ್ಠಲರೇಯಾ ||

[ ನಳನಾಮ ಸಂವತ್ಸರ ವೈಶಾಖ
ಬಹುಳ ೧೧ ಶುಕ್ರವಾರ ]

ಕಾಕುದರನಯ್ಯಾ = ಶೇಷನ ಅಯ್ಯಾ-
ಅಧಿಪತಿ = ಶೇಷಶಾಯಿ ;
ವೈಖಾನಸ ವಂದ್ಯ = ಬ್ರಹ್ಮಾದಿ
ದೇವತೆಗಳಿಂದ ವಂದ್ಯ ;


SrImodalakallu SEShadAsArya viracita
(guruvijayaviTThala aMkita)
prArthanA suLAdi
( SrIhariya aparOkSha biMba
darSanave sakala saMpattu.
SrIhariyannu nODadippade durdina.
kalyAdi daityarige prErisi enna
j~jAna tirOdhAna mADisidi,
oMdu kShaNa brahmakalpavAgi
duHKadiMda kaLeve. ninna
kANadippa satyalOkada sauKyavAdaru olle.
ninna kANuva narakavAdaru lEsu.
krUrara bAdhe pariharisi gOcaranAgu eMdu prArthanA.)
rAga Bairavi

dhruvatALa
iMdirApati ninna nigrahake pAtrarenipa
kuMdu janarAda kalyAdigaLige
oMde dEhadiMda sAdhana pUrNavAha –
deMdu bAhuLyavAda dEhavittu
vRuMda aGagaLa mADisidi aharaha
CaMda CaMdada duHKa uNasidaMte
iMdu enage prAptavAda dEha klipta –
diMdanuBavisida suKa duHKa –
diMda pUrva kRuta karmavu tIrisade
maMdi AyuShya enage yukutiyiMda
taMdu hAki nibiDa aj~jAna pASadiMda
baMdhana mADi enna Bavadi nilisi
oMdu nimiSha oMdu kalpa kaLeda teradi
niMdu uMbuva duHKakkeNe yAvadu
hiMde mADida upakAravEno ninage
iMdu nA mADida anupakAravEno
baMdhu nInallave initu mADuvadakke
taMde ninage nAnu alladavanE
maMdarOddhara guruvijayaviTThalarEya
eMdeMdu mADidaddu mADidiyA || 1 ||

maTTatALa

dhruva RuShi modalAda sujanara saMtatige
avaniyoLage bahu kAlAvadhiyAgi
jIvisuva bage anugraha mADidaru
navanavavAdaMtha j~jAna BakutiyiMda
suvimalavAda AnaMdadi muNugi
avaniya pati ninna kANuta suKisuvaru
jIvitavAdadake idE sArthakavayyA
” jIvitaM viShNu Baktasya varaM paMcadinAnyapi”
I vidhavannu biTTu aj~jAnAMdhadali
Bavadalli muNigi kShaNa kShaNake duHKa
trividha tApadi baLali j~jAnarahitanAgi
I vasudhiyallippa manajarigiMdalli
kEvala naraka sthAnave lEsu hariyE
” natu kalpa sahasrastu Bakti hInastu kESave” iMteM –
ba vidhadi I avaniya mElenage ninniMdali agali i –
ruvadakiMtalli yama sadanadalli
nivAsavu enage bahu lEsu ninnANe
Siva mUruti guruvijayaviTThalarEya
trividha karaNadiMda ide mAtu nuDive || 2 ||

triviDitALa

krUra daityaranna GOra tamasinalli
pArugANade iddu duHKa uMba
kAraNadiMda dEha CEda BEdAdigaLu
tOragoDade janArdanana nAmadiMda
saMrakShaNa mADuvadu ninna karuNaveMdu
ArAdareMbuvare avaninAtha
dhAruNi madhyadalli kEvala duHKa uNipa
kAraNadiMda enna uLisidadake
kAruNya mADideMba saMj~javAgadu enage
nIrajAkShane ninna pAdadANe
parama prIya ninna kANada dina oMdu
paramEShThi kalpada nitya kaLive
kAraNa sThitanige pratyEka pELuvadEno
Arigusarali enna suKA duHKa
dUru kELuvarilla eShTu kUgidaru
Arenna vohisuvaru ArigAru a –
pAra dAridrana karedu mannisi mannisi sakala
vAraNAMtadi saMpadavanittu
varaNa nAlkariMda mAnyanenesi konege
tirakiya mane mane tiraguvaMtha
teradi mADisida mahimege yEneMbe
nIradhi pOlva karuNi nirmalAtmA
sAri sArige ninage vaiSESha pELudyAke
nArAyaNa ninna virahitadi
nIrajAsana lOkavAdaru enage
mIrida narakaveMdu manadi tiLive
vAravArake enna baride baLalipadEke
BArakartanAda saKane kELu
mArajanaka guruvijayaviTThalarEya
SArIradalliddu sAkShi nIne || 3 ||

aTTatALa

vaikuMTha viSESha sAkAra nIniMdu
Bakuta samUhake bEkAda suKagaLa –
nEkavAgi yittu sAkuveneMteMba kAraNa sujanaru
bEkeMdu bayasi sAdhana mALparu
kAkudaranayyA ninna virahitavAda
vaikuMThavAdarU bayasarobbaranna
I kuMBiNi viShaya pELvadEtakinnu
vaiKAnasa vaMdya guruvijayaviTThalarEya
yAke enna vyartha baLalisi nODuvi || 4 ||

AditALa

rAjAdhirAjanenesi sakalavAda janariMda
pUjyanAguvadu Anolle ninna sAkShi
mUrjagadoLagidda dhana modalAda vastu
nirvyAjadi enage prAptavAdaru nAnolle
BOjakulOttama idu satya idu satya
I jIvigaLa madhya alpanAdaru Age
hRutsarasijadalli kAMbuvadu enage bEku
rAjIvanEtra enage naijavAda kAmavide
vyAjadiMda yidakke yOgyanna mADadale duHKa
BAjana rUpavAda I BUmiyalli vyartha
nI jIviseMdu pELva vacanavu nuDivadEke
taijasa rUpa guruvijayaviTThalarEyA
sOjigavEneMbe ninnaya karuNakke || 5 ||

jate

ninna nODadalippa dinave durdinavayyA
munnadi nijavidu guruvijayaviTThalarEyA ||

[ naLanAma saMvatsara vaiSAKa
bahuLa 11 SukravAra ]

kAkudaranayyA = SEShana ayyA-
adhipati = SEShaSAyi ;
vaiKAnasa vaMdya = brahmAdi
dEvategaLiMda vaMdya ;

Leave a Reply

Your email address will not be published. Required fields are marked *

You might also like

error: Content is protected !!