Baare draupadi

Composer : Shri Harapanahalli Bheemavva

By Smt.Shubhalakshmi Rao

ಬಾರೆ ದ್ರೌಪದಿ ಭಾಳ ಹರುಷದಿಂದ ಸುಂದರಿ
ರಾಜ ಧರ್ಮರಾಯರಿದ್ದ ಹಸೆಗೆ ಒಯ್ಯಾರಿ [ಪ]

ಅರಸು ಧರ್ಮಜ ಭೀಮ ಪಾರ್ಥ ನಕುಲ ಸಾದೇವ
ಸರಸವಾಡಿ ಕುಳಿತಾರೆ ಸಂತೋಷದಿಂದಲಿ (೧)

ಹೇಮ ಮಾಣಿಕ್ಯ ಪುತ್ಥಳಿ ಚಂದ್ರಹಾರ ಪದಕವು
ಆಣಿ ಮುತ್ತಿನ ಸರಗಳು ಕಟ್ಟಾಣಿ ಹೊಳೆಯುತ (೨)

ವಂಕಿ ನಾಗಮುರಿಗೆ ಸರಿಗೆ ಕಂಕಣ ದ್ವಾರ್ಯವು
ಕುಂಕುಮ ಗಂಧ ಪರಿಮಳ ಅಲಂಕಾರವಾಗಿ (೩)

ಹೆರಳು ಬಂಗಾರ ಚೌರಿ ಚಂದ್ರ ಗೊಂಡ್ಯ ರಾಗಟೆಯು
ಅರಳು ಮಲ್ಲಿಗೆ ಪಾರಿಜಾತ ಮುಡಿಯಲ್-ಹೊಳೆಯುತ (೪)

ಗೆಜ್ಜೆ ಅಡ್ಡಿಗೆ ವಜ್ರದೋಲೆ ಬುಗುಡಿ ಬುಲಾಕು
ಮುದ್ದು ಮೋರೆಗೆ ಮುತ್ತುಕೆಂಪಿನ ಮುಕುರ್ಯ ಜಾಣೆ (೫)

ಜರದ ನಿರಿಗ್ವಜ್ಜರದ ಪಟ್ಟಿ ಥಳಕೆಂದ್ಹೊಳೆಯುತ
ಚರಣದುಂಗುರ ಪೈಜಣ ರುಳಿಯು ಘಲುಘಲೆನ್ನುತ (೬)

ಕೋಮಲಾಂಗಿ ಬಂದು ಭೀಮೇಶಕೃಷ್ಣನ ತಂಗಿ
ಭೀಮ ಧರ್ಮರ ಮುಂದೆ ಕುಳಿತಳು ಪಾರ್ಥನರ್ಧಾಂಗಿ (೭)


bAre draupadi BALa haruShadiMda suMdari
rAja dharmarAyaridda hasege oyyAri [pa]

arasu dharmaja BIma pArtha nakula sAdEva
sarasavADi kuLitAre saMtOShadiMdali (1)

hEma mANikya putthaLi caMdrahAra padakavu
ANi muttina saragaLu kaTTANi hoLeyuta (2)

vaMki nAgamurige sarige kaMkaNa dvAryavu
kuMkuma gaMdha parimaLa alaMkAravAgi (3)

heraLu baMgAra cauri caMdra goMDya rAgaTeyu
araLu mallige pArijAta muDiyal-hoLeyuta (4)

gejje aDDige vajradOle buguDi bulAku
muddu mOrege muttukeMpina mukurya jANe (5)

jarada nirigvajjarada paTTi thaLakeMd~hoLeyuta
caraNaduMgura paijaNa ruLiyu GaluGalennuta (6)

kOmalAMgi baMdu BImESakRuShNana taMgi
BIma dharmara muMde kuLitaLu pArthanardhAMgi (7)

Leave a Reply

Your email address will not be published. Required fields are marked *

You might also like

error: Content is protected !!