Composer : Shri Purandara dasaru
ಅನುಗಾಲವು ಚಿಂತೆ ಜೀವಕ್ಕೆ |
ಮನವು ಶ್ರೀರಂಗನೊಳ್ ಮೆಚ್ಚುವ ತನಕ ||ಪ||
ಸತಿಯಿದ್ದರೆ ಚಿಂತೆ , ಸತಿಯಿಲ್ಲದ ಚಿಂತೆ
ಮತಿಹೀನ ಸತಿಯಾದರು ಚಿಂತೆ
ಪೃಥಿವಿಯೊಳು ಸತಿ ಕಡು ಚೆಲ್ವೆಯಾದರೆ
ಮಿತಿಮೀರಿದ ಮೋಹದ ಚಿಂತೆ |೧|
ಮಕ್ಕಳ್ಳಿದರು ಚಿಂತೆ ಮಕ್ಕಳಿಲ್ಲದ ಚಿಂತೆ ,
ಅತ್ತು ಹಾಲ್ ಕಾಡುವ ಚಿಂತೆಯು
ತುತ್ತಿನ ಆಸೆಗೆ ತುರುಗಳ ಕಾಯ್ದರು
ಕಕ್ಕುಲತೆಯ ಬಿಟ್ಟು ಹೋಗದ ಚಿಂತೆ |೨|
ಬಡವನಾದರು ಚಿಂತೆ , ಬಲ್ಲಿದನಾದರು ಚಿಂತೆ
ಹಿಡಿಹೊನ್ನು ಕೈಯೊಳಿದ್ದರು ಚಿಂತೆಯು
ಪೊಡವಿಯೊಳಗೆ ಸಿರಿ ಪುರಂದರವಿಠಲನ
ಬಿಡದೆ ಚಿಂತಿಸಿದರೆ ಚಿಂತೆ ನಿಶ್ಚಿಂತೆ |೩|
anugAlavu ciMte jIvakke |
manavu SrIraMganoL meccuva tanaka ||pa||
satiyiddare ciMte , satiyillada ciMte
matihIna satiyAdaru ciMte
pRuthiviyoLu sati kaDu celveyAdare
mitimIrida mOhada ciMte |1|
makkaLLidaru ciMte makkaLillada ciMte ,
attu haal kADuva ciMteyu
tuttina Asege turugaLa kAydaru
kakkulateya biTTu hOgada ciMte |2|
baDavanAdaru ciMte , ballidanAdaru ciMte
hiDihonnu kaiyoLiddaru ciMteyu
poDaviyoLage siri puraMdaraviThalana
biDade chiMtisidare ciMte niSciMte |3|
Leave a Reply