Composer : Shri Gururama vittala
ಪರಶುರಾಮದೇವಾ ನೀನೆ ದುರಿತ ವಿಪಿನ ದಾವಾ [ಪ]
ದರುಶನ ಮಾತ್ರದಿ ಭವರೋಗವಪರಿ
ಹರಿಸಿ ಕೈಪಿಡಿವ ಕರುಣಾನಿಧಿಯೆ [ಅ.ಪ]
ಜಮದಗ್ನಿ ಕುಮಾರಾ ನಿನ್ನನು
ಕ್ರಮದಿ ಭಜಿಸುವವರಾ
ಸಮವಿರಹಿತ ಉತ್ತಮ ಪದವಿಯೊಳಿ
ಟ್ಟಮಿತ ಸುಖಪಡಿಸಿ ಆದರಿಸುವೆ ಸದಾ [೧]
ನಿನ್ನ ಮಹಿಮೆಯನ್ನು ಅರಿಯದ
ಕುನ್ನಿ ಪಾಮರನಾನು
ಬನ್ನ ಬಡುವೆನು ಭವಾರ್ಣವದೊಳು ಯೆನ್ನ
ಜನ್ಮ ಜನ್ಮದಘವನ್ನು ಬಿಡಿಸಿ ಕಾಯೊ [೨]
ಗರಳಪುರದ ದೊರಿಯೆ ನಿನ್ನ ಸಂ
ಸ್ಮರಣೆ ಕೊಡೊ ಹರಿಯೆ
ಸರಸಿಜಭವ ಶಿವ ಮುಖ ಸುರವಂದಿತ
ಪರಮ ಪುರುಷ ಶ್ರೀ ಗುರುರಾಮ ವಿಠಲ [೩]
paraSurAmadEvA nIne durita vipina dAvA [pa]
daruSana mAtradi BavarOgavapari
harisi kaipiDiva karuNAnidhiye [a.pa]
jamadagni kumArA ninnanu
kramadi BajisuvavarA
samavirahita uttama padaviyoLi
TTamita suKapaDisi Adarisuve sadA [1]
ninna mahimeyannu ariyada
kunni pAmaranAnu
banna baDuvenu BavArNavadoLu yenna
janma janmadaGavannu biDisi kAyo [2]
garaLapurada doriye ninna saM
smaraNe koDo hariye
sarasijaBava Siva muKa suravaMdita
parama puruSha SrI gururAma viThala [3]
Leave a Reply