Hari Bakta vatsalya suLadi – Venugopala dasaru

ಶ್ರೀವೇಣುಗೋಪಾಲದಾಸಾರ್ಯ ವಿರಚಿತ
ಶ್ರೀಹರಿ ಭಕ್ತವಾತ್ಸಲ್ಯ ಸುಳಾದಿ

ಧ್ರುವತಾಳ

ಏನಯ್ಯಾ ಸಿರಿಪತಿ ನಾ ನಿನ್ನ ನಂಬಿ ಇತರ
ಜ್ಞಾನವೇ ಮರೆದು ತನು ನಿನಗೊಪ್ಪಿಸಿ
ಹಾನಿ ವೃದ್ಧಿಗಳೆರಡು ಏನಾದರನ್ನ ನಿನ್ನ –
ಧೀನವೆಂದು ನಿತ್ಯ ನಿಧಾನದಲ್ಲಿ
ನಾನಿಳಿ ಇತ್ತ ವಿಷಯ ಕಾನನಕ್ಕೆನ್ನೊಪ್ಪಿಸಿ
ನೀ ನಗುತಲಿಪ್ಪುದು ಸೋಜಿಗವೋ
ಆನಂದ ಶರಧಿಯಲ್ಲಿ ನಾನಾಗಿದ್ದ ಮನುಜ
ಹೀನ ಪೂಯಾವ ಸೇರಿದಂತಾಯಿತೋ
ಅನಘ ರಾಶಿಗಳು ಆವಾವ ಜನುಮದಲ್ಲಿ
ಏನೇನು ಮಾಡಿಸಿದ್ದು ಒದಗಿಸಿದಿಯೊ
ನಾನು ನಿನಗೆರವಾದ ದೇನಯ್ಯಾ ಕಾವನಯ್ಯಾ
ಭಾನುತೇಜನೆ ಭಕ್ತಾಧೀನ ಪ್ರೀಯಾ
ಆ ನಳಿನಭವ ರುದ್ರ ಇಂದ್ರಾದಿ ದಿವಿಜರಿಗೆ
ನೀನಲ್ಲದೆ ಎನಗಾರು ಗತಿಯೊ
ಶ್ರೀನಾಥನಾದ ವೇಣುಗೋಪಾಲವಿಠಲರೇಯಾ
ಅನಾದಿಯಿಂದ ನೋಡು ನಿನ್ನಾಧೀನವೆ ಸಿದ್ಧಾ || ೧ ||

ಮಟ್ಟತಾಳ

ತಾಯಿ ತನ್ನ ಶಿಶುವ ತವಕದಿಂದಲಿ ಎತ್ತಿ
ಬಾಯಿಲೆ ಕೊಂಡಾಡಿ ಮುದ್ದಿಸಿ ಮೊಲೆಗೊಟ್ಟು
ಕಾಯವ ಪೋಷಿಸುತ ಕರುಣವ ತಪ್ಪಿ ಒಮ್ಮೆ
ನೋಯದಾ ನುಡಿಯಿಂದ ನುಡಿದು ಬಡಿದು ನೂಕೆ
ಆ ಎಂದಬ್ಬರಿಸಿ ಅಳುವದಲ್ಲದೆ ಒಮ್ಮೆ
ಛೀ ಎನ್ನಲಾಪದೆ ಚಿತ್ತ ಪಲ್ಲಟ ಮಾಡಿ
ಕಾಯಜ ಪಿತ ನೀನು ಜನನಿಯ
ಮಾಯದ ಗುಣ ಮೂರು ಮೀರಿದ ಮಹಾ ಮಹಿಮ
ತಾಯಿ ನೀನು ಸಕಲ ಜಗಕೆ ಜನಕನಾಗಿ
ತಂದೆ ನೀನು ಜಗಕೆ ಪೋಷಣೆ ಭಿಷೆಯಿಂದ
ಈಯಬಲ್ಲವರೊಡಿಯ ವೇಣುಗೋಪಾಲವಿಠಲ
ಧೇಯ ನೀನು ಸತ್ಯ ನಿನ್ನ ಬಿಡೆನೊ ನಾನ್ತು || ೨ ||

ತ್ರಿವಿಡಿತಾಳ

ಭಕುತರ ಸಲಹುವಿ ಭಕುತರಗಲಿ ಸೂವಿ
ಭಕುತರ ವಶದಿ ಸಂಚರಿಸುವೆ ಅಯ್ಯ ನೀನು
ಭಕುತರೆ ನಿನ್ನ ಬಳಗ ಭಕುತರೆ ನಿನ್ನ ಬಂಧು
ಭಕುತರೆ ನಿನ್ನ ಶಳದು ಬದಿಗೆ ತಾಹರಯ್ಯ
ಭಕುತರು ಇಲ್ಲದಿರೆ ಏಕಾನಲ್ಲವೆ ನೀನು
ಉಕುತಿ ಶಕುತಿಗಳು ಆರಗೋಸುಗವಯ್ಯಾ
ಭಕುತರೊಡಿಯನಾಗಿ ಅನಾದಿಯಿಂದ ಮೆರೆವ
ಲಕುಮಿವಲ್ಲಭ ವೇಣುಗೋಪಾಲವಿಠ್ಠಲ
ಭಕುತರೊಳ್ಕೇವಲ ಶಕಲನ ಸಲಹಯ್ಯಾ || ೩ ||

ಅಟ್ಟತಾಳ

ಮಂಗಳಾಂಗನೆ ಶ್ರೀರಂಗಾಂಬುಧಿ
ತಿಂಗಳನ ಪ್ರಭೆ ಪಿಂಗೊಳಿಸುವ ನಖ
ಅಂಗುಲಿಯ ಸನ್ನೆ ಪೊಂಗೊಳಲ ನಾದ
ಸಂಗೀತದಿ ಗೋಪ ಅಂಗನಿಯರಸಾ
ಕಂಗೊಳಿಸಿದ ಶುಭಾಂಗಾ ರಿಪುಕುಲ
ಭಂಗ ಮಾಡಿದ ಭವ್ಯ ಮೂರುತಿಯೆ
ತುಂಗ ವೇಣುಗೋಪಾಲವಿಠ್ಠಲ
ಹಂಗಿಸುವದೇಕಾಪಾಂಗಾದಲಿ ನೋಡೊ || ೪ ||

ಆದಿತಾಳ

ಸುಖವಾದರೆ ಬಿಡೆ ದುಃಖವಾದರೆ ಬಿಡೆ
ಅಖಿಳವು ಒದಗಿಸಿದರೆ ನಾ ನಿನ್ನ ಬಿಡೆನೈಯ್ಯಾ
ಸಖ ನೀ ಎನಗೆ ಅನಾದಿ ಕಾಲದಲಿಂದ
ಮುಖತಾ ಪೇಳುವದೇಕೆ ಪ್ರಕಟವಾದ ಪರಿ
ಸುಖ ಗುಣಗಣಪೂರ್ಣ ವೇಣುಗೋಪಾಲವಿಠ್ಠಲ
ಮಖಜ ಮಿಕ್ಕಾದವರ ಯುಕುತಿಯಿಂದಲಿ ಪೊರದೆ || ೫ ||

ಜತೆ

ಆವದಾದರು ನಿನ್ನ ಸೇವಕ ನಾ ಸತ್ಯ
ದೇವ ವೇಣುಗೋಪಾಲವಿಠಲ ನೀ ಬಿಡು ಮಾಯಾ ||


SrIvENugOpAladAsArya viracita
SrIhari BaktavAtsalya suLAdi

dhruvatALa

EnayyA siripati nA ninna naMbi itara
j~jAnavE maredu tanu ninagoppisi
hAni vRuddhigaLeraDu EnAdaranna ninna –
dhInaveMdu nitya nidhAnadalli
nAniLi itta viShaya kAnanakkennoppisi
nI nagutalippudu sOjigavO
AnaMda Saradhiyalli nAnAgidda manuja
hIna pUyAva sEridaMtAyitO
anaGa rASigaLu AvAva janumadalli
EnEnu mADisiddu odagisidiyo
nAnu ninageravAda dEnayyA kAvanayyA
BAnutEjane BaktAdhIna prIyA
A naLinaBava rudra iMdrAdi divijarige
nInallade enagAru gatiyo
SrInAthanAda vENugOpAlaviThalarEyA
anAdiyiMda nODu ninnAdhInave siddhA || 1 ||

maTTatALa

tAyi tanna SiSuva tavakadiMdali etti
bAyile koMDADi muddisi molegoTTu
kAyava pOShisuta karuNava tappi omme
nOyadA nuDiyiMda nuDidu baDidu nUke
A eMdabbarisi aLuvadallade omme
CI ennalApade citta pallaTa mADi
kAyaja pita nInu jananiya
mAyada guNa mUru mIrida mahA mahima
tAyi nInu sakala jagake janakanAgi
taMde nInu jagake pOShaNe BiSheyiMda
IyaballavaroDiya vENugOpAlaviThala
dhEya nInu satya ninna biDeno nAntu || 2 ||

triviDitALa

Bakutara salahuvi Bakutaragali sUvi
Bakutara vaSadi saMcarisuve ayya nInu
Bakutare ninna baLaga Bakutare ninna baMdhu
Bakutare ninna SaLadu badige tAharayya
Bakutaru illadire EkAnallave nInu
ukuti SakutigaLu AragOsugavayyA
BakutaroDiyanAgi anAdiyiMda mereva
lakumivallaBa vENugOpAlaviThThala
BakutaroLkEvala Sakalana salahayyA || 3 ||

aTTatALa

maMgaLAMgane SrIraMgAMbudhi
tiMgaLana praBe piMgoLisuva naKa
aMguliya sanne poMgoLala nAda
saMgItadi gOpa aMganiyarasA
kaMgoLisida SuBAMgA ripukula
BaMga mADida Bavya mUrutiye
tuMga vENugOpAlaviThThala
haMgisuvadEkApAMgAdali nODo || 4 ||

AditALa

suKavAdare biDe duHKavAdare biDe
aKiLavu odagisidare nA ninna biDenaiyyA
saKa nI enage anAdi kAladaliMda
muKatA pELuvadEke prakaTavAda pari
suKa guNagaNapUrNa vENugOpAlaviThThala
maKaja mikkAdavara yukutiyiMdali porade || 5 ||

jate

AvadAdaru ninna sEvaka nA satya
dEva vENugOpAlaviThala nI biDu mAyA ||

Leave a Reply

Your email address will not be published. Required fields are marked *

You might also like

error: Content is protected !!