Yellig hodal en sukhavil

Composer : Shri Raghuvaryaru [Nadupuresha ankita]

By Smt.Shubhalakshmi Rao

ಯೆಲ್ಲಿಗ್ ಹೋದಲ್ಲೇನ್ ಸುಖವಿಲ್ಲಿಲ್ಲೆ ಪಾಡೈತೆ |
ಬಲ್ಲಿದನರ ಮನೆಗೊಂಭತ್ತು ಕದಗಳು ಕಿಲ್ಲೆವು ಪಾಡೈತೆ [ಪ]

ಇರುವಿ ಎಂಭತ್ತು ನಾಲ್ಕು ಲಕ್ಷ ಯೋನಿ ತಿರುಗಿ ಬಂದೈತೆ |
ಗುರುವಿನ ದಯದಿಂ ನರವಿನ ಜನುಮವು ಸರಿಯಾಗಿ ದೊರತೈತೆ |
ಘಟ್ಟಿ ಮುಟ್ಟಿ ಕೈ ಕಾಲು ಕಣ್ಣು ಮೂಗು ನೆಟ್ಟಗೆ ಸಿಕ್ಕೈತೆ |
ಶಿಷ್ಠರ ಸೇವಾ ವಿಠ್ಠಲ ಪೂಜಾ ಮಾಡಾಕೆ ಬರತೈತೆ [೧]

ಎಪ್ಪತ್ತೆರಡು ಸಾವಿರ ದಂಡು ಜಪ್ಪಿಸಿ ಕುಂತೈತೆ |
ಇಪ್ಪತ್ನಾಲ್ಕರ ತತ್ವದ ಅಧಿಪತಿ ಅಪ್ಪಣೆ ಮ್ಯಾಗೈತೆ |
ಆರು ಮಂದಿ ವೈರಿಗಳನು ಊರ್ ಹೊರಗ್ ಹಾಕೈತೆ |
ಊರ ಮುಂದಿಂ ತಳವರ ನಾಯ್ಕನ ಗಸ್ತಿ ಪಾರೈತೆ [೨]

ಕತ್ತಿ ಹಿಡಕೊಂಡ್ ಎಡಗಡೆ ಭಾಗದಿ ಕರಿ ಬಂಟ ನಿಂತೈತೆ |
ಸುತ್ತಿಸಿದ್ವಾಯುವಿನ್ ಹೊತ್ತಿಸಿದಗ್ನಿಗೆ ಸತ್ತೋ ಹೋಗ್ತೈತೆ |
ಮೈಲಿಗೆ ಮುಡಿ ಚಟ್ಟಾಗಲು ಬಲಗಡೆ ನದಿ ಸೂಸಿ ಹರಿತೈತೆ |
ಮ್ಯಾಗಳ ಕೋಣೀ ವರುಣದಲಮೃತದ ಸೋನೆಯು ಸುರಿತೈತೆ [೩]

ಇಡ ಪಿಂಗಳವೆಂ ಎಡ ಬಲ ಬೀದಿಯ ಬಾಜಾರ ನೆರದೈತೆ |
ನಡು ಗಡೆ ನೋಡಲು ಒಡೆಯನ ಗುಡಿ ಬಲು ಸಿಂಗಾರಾಗೈತೆ |
ಶಂಖ ಚಕ್ರ ಗಧೆ ಊರ್ಧ್ವಪುಂಡ್ರದಿಂ ಅನ್ಕಿತವಾಗೈತೆ |
ಶಂಖೆಯಿಲ್ಲ ಯಮ ಕಿಂಕರರಿಗೆ ಭಯಂಕರ ತೋರೈತೆ [೪]

ಶ್ವಾಸಾ ಮಂತ್ರದಿಂ ಈಶನ ಪೂಜೆಯು ಬೇಶಾಗಿ ನೆರದೈತೆ |
ಭಾಸುರ ತೇಜದಿ ಸೂಸುವ ಬಿಂಬ ಪ್ರಕಾಶವ ತೋರೈತೆ |
ನದುಪುರಿ ಹನುಮನ ನಂಬಿದ ಭಕುತಗೆ ಬಡತನವೆಲ್ಲೈತೆ |
ಬಿಡದೆ ಭಕುತರ ಸಲಹುವೆನೆಂಬುದು ಭೇರಿ ಹೊಡಿತೈತೆ [೫]


yellig hOdallEn sukhavillille pADaite |
ballidanara manegoMbhattu kadagaLu killevu pADaite [pa]

iruvi eMbhattu nAlku lakSha yOni tirugi baMdaite |
guruvina dayadiM naravina janumavu sariyAgi dorataite |
ghaTTi muTTi kai kaalu kaNNu mUgu neTTage sikkaite |
shiShThara sEvA viThThala pUjA mADAke barataite [1]

eppatteraDu sAvira daMDu jappisi kuMtaite |
ippatnAlkara tatvada adhipati appaNe myAgaite |
Aru maMdi vairigaLanu oor horag hAkaite |
oora muMdiM taLavara nAykana gasti pAraite [2]

katti hiDakoMD eDagaDe bhAgadi kari baMTa niMtaite |
suttisidvAyuvin hottisidagnige sattO hOgtaite |
mailige muDi chaTTAgalu balagaDe nadi soosi haritaite |
myAgaLa kONI varuNadalamRutada sOneyu suritaite [3]

iDa piMgaLaveM eDa bala beediya bAjAra neradaite |
naDu gaDe nODalu oDeyana guDi balu siMgArAgaite |
shaMkha chakra gadhe UrdhvapuMDradiM ankitavAgaite |
shaMkheyilla yama kiMkararige bhayaMkara tOraite [4]

shvAsA maMtradiM Ishana pUjeyu bEshAgi neradaite |
bhAsura tEjadi sUsuva biMba prakAshava tOraite |
nadupuri hanumana naMbida bhakutage baDatanavellaite |
biDade bhakutara salahuveneMbudu bhEri hoDitaite [5]

Leave a Reply

Your email address will not be published. Required fields are marked *

You might also like

error: Content is protected !!