Composer : Shri Purandara dasaru
ಸತ್ಯ ಜಗತಿದು ಪಂಚ ಭೇದವು , ನಿತ್ಯ ಶ್ರೀ ಗೋವಿಂದನ
ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ [ಪ]
ಜೀವ ಈಶಗೆ ಭೇದ ಸರ್ವತ್ರ
ಜೀವ ಜೀವಕೆ ಭೇದವು
ಜೀವ ಜಡ ಜಡ ಜಡಕೆ ಭೇದ
ಜೀವ ಜಡ ಪರಮಾತ್ಮಗೆ [೧]
ಮಾನುಷೋತ್ತಮಗಧಿಕ ಕ್ಷಿತಿಪರು
ಮನುಜ ದೇವ ಗಂಧರ್ವರು
ಜ್ಞಾನಿ ಪಿತ ಅಜಾನಜ ಕರ್ಮಜ
ದಾನವಾರಿ ಸತ್ವಾತ್ಮರು [೨]
ಗಣಪ ಮಿತ್ರರು ಸಪ್ತ ಋಷಿಗಳು
ವಹ್ನಿ ನಾರದ ವರುಣನು
ಇನಜಗೆ ಸಮ ಸೂರ್ಯ ಚಂದ್ರರು
ಮನುಸತಿಯು ಹೆಚ್ಚು ಪ್ರವಹನು [೩]
ದಕ್ಷ ಸಮ ಅನಿರುದ್ಧ ಗುರು ಶಚಿ
ರತಿ ಸ್ವಾಯಂಭುವರಾರ್ವರು
ಪಕ್ಷ ಪ್ರಾಣನಿಗಿಂತ ಕಾಮನು
ಕಿಂಚಿದಧಿಕನು ಇಂದ್ರನು [೪]
ದೇವ ಇಂದ್ರನಿಗಧಿಕ ಮಹರುದ್ರ
ದೇವ ಸಮ ಶೇಷಗರುಡರು
ಕೇವಲಧಿಕರು ಶೇಶ ಗರುಡಗೆ
ದೇವಿ ಭಾರತಿ ಸರಸ್ವತಿ [೫]
ವಾಯುವಿಗೆ ಸಮರಿಲ್ಲ ಜಗದೊಳು
ವಾಯು ದೇವರೆ ಬ್ರಹ್ಮರು
ವಾಯು ಬ್ರಹ್ಮಗೆ ಕೋಟಿ ಗುಣದಿಂದ
ಅಧಿಕ ಶಕ್ತಳು ಶ್ರೀ ರಮಾ [೫]
ಅನಂತ ಗುಣದಿಂ ಲಕುಮಿಗಧಿಕನು
ಶ್ರೀ ಪುರಂದರವಿಠಲನು
ಘನ ಸಮರು ಇವಗಿಲ್ಲ ಜಗದೊಳು
ಹನುಮ ಹೃತ್ಪದ್ಮ ವಾಸಿಗೆ [೬]
satya jagatidu paMca BEdavu , nitya SrI gOviMdana
kRutyavaritu tAratamyadi kRuShNanadhikeMdu sArirai [pa]
jIva ISage BEda sarvatra
jIva jIvake BEdavu
jIva jaDa jaDa jaDake BEda
jIva jaDa paramAtmage [1]
mAnuShOttamagadhika kShitiparu
manuja dEva gaMdharvaru
j~jAni pita ajAnaja karmaja
dAnavAri satvAtmaru [2]
gaNapa mitraru sapta RuShigaLu
vahni nArada varuNanu
inajage sama sUrya caMdraru
manusatiyu heccu pravahanu [3]
dakSha sama aniruddha guru Saci
rati svAyaMBuvarArvaru
pakSha prANanigiMta kAmanu
kiMcidadhikanu iMdranu [4]
dEva iMdranigadhika maharudra
dEva sama SEShagaruDaru
kEvaladhikaru shEsha garuDage
dEvi BArati sarasvati [5]
vAyuvige samarilla jagadoLu
vAyu dEvare brahmaru
vAyu brahmage kOTi guNadiMda
adhika SaktaLu SrI ramA [5]
anaMta guNadiM lakumigadhikanu
shrI puraMdaraviThalanu
Gana samaru ivagilla jagadoLu
hanuma hRutpadma vAsige [6]
Leave a Reply