Shesha Mooruti

Composer : Shri Vishwendra Tirtharu

By Smt.Shubhalakshmi Rao

ಶೇಷಮೂರುತಿ ಪೋಷಿಸೆನ್ನ
ಹಾಸಿಗೆಯಾಗಿ ನೀ ಹರಿಯ ಪೊತ್ತಿರುವಿ ||ಪ||

ಶ್ವೇತದ್ವೀಪದ ಮಧ್ಯದಲ್ಲಿ
ದೇವನರಸಿಯ ಕೂಡುತ್ತಲಿರಲು
ಭಕ್ತಿಯಿಂದಲಿ ಕಂಗಳಿಂದ
ಬಿಡದೆ ನೋಡುತ್ತಲಿಪ್ಪ ಸಮಯ [೧]

ಮಗಳ ಲಜ್ಜೆಯ ಕಂಡು ಪಿತನು
ಹಾಲಿನ ತೆರೆಯಿಂದ ಕಣ್ಣನೆ ಮುಚ್ಚಿಸಿಹನು
ಮಗಳ ಮೇಲಿನ ಪ್ರೀತಿ ಪಿತಗೆ
ಯೆಣಿಸಲಾಗದು ಲೋಕದೊಳಗೆ [೨]

ರಾಜೇಶ ಹಯಮುಖ ಹರಿಗೆ
ಮಂಚವೆಂದರೆ ನೀನೆ ಖರೆಯು
ರಾಜರಾಜರಿಗಿಂಥ ಮಂಚ
ದೊರಕದೆಂದೆಂದಿಗೂ ದೇವ [೩]


SEShamUruti pOShisenna
hAsigeyAgi nI hariya pottiruvi ||pa||

SvEtadvIpada madhyadalli
dEvanarasiya kUDuttaliralu
BaktiyiMdali kaMgaLiMda
biDade nODuttalippa samaya [1]

magaLa lajjeya kaMDu pitanu
hAlina tereyiMda kaNNane muccisihanu
magaLa mElina prIti pitage
yeNisalAgadu lOkadoLage [2]

rAjESa hayamuKa harige
maMcaveMdare nIne Kareyu
rAjarAjarigiMtha maMca
dorakadeMdeMdigU dEva [3]

Leave a Reply

Your email address will not be published. Required fields are marked *

You might also like

error: Content is protected !!