Composer : Shri Jagannatha dasaru
ಬಲು ರಮ್ಯವಾಗಿದೆ ಶ್ರೀ ಹರಿಯ ಮಂಚ ||ಪ||
ಯಲರುಣಿ ಕುಲರಾಜ ರಾಜೇಶ್ವರನ ಮಂಚ ||ಅ.ಪ||
ಪವನತನಯ ನೆನಿಪ ಪಾವನತರ ಮಂಚ
ಭುವನತ್ರಯವ ಪೊತ್ತ ಭಾರಿ ಮಂಚ
ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ
ಶಿವರೂಪದಲ್ಲಿ ಶ್ರೀ ಹರಿಯ ಒಲಿಸಿದ ಮಂಚ ||೧||
ನೀಲಾಂಬರವನುಟ್ಟು ನಳನಳಿಸುವ ಮಂಚ
ನಾಲಿಗೆ ಎರಡುಳ್ಳ ನೈಜ ಮಂಚ
ನಾಲ್ವತ್ತು ಕಲ್ಪದಿ ತಪವ ಮಾಡಿದ ಮಂಚ
ಫಾಲ ಮುಸಲ ಹಲವ ಪಿಡಿದಿಹ ಮಂಚ ||೨||
ರಾಮನನುಜನಾಗಿ ರಣವ ಜಯಿಸಿದ ಮಂಚ
ತಾಮಸರುದ್ರನ ಪಡೆದ ಮಂಚ
ಭೀಮನನುಜನೊಳು ಆವೇಶಿಸಿದ ಮಂಚ
ಜೀಮೂತ ಮಲ್ಲರನು ಕುಟ್ಟಿದ ಮಂಚ ||೩||
ಜೀವ ನಾಮಕನಾಗಿ ವ್ಯಾಪ್ತನಾದ ಹರಿಯ
ಸೇವಿಸಿ ಸುಖಿಸುವ ದಿವ್ಯ ಮಂಚ
ಸಾವಿರ ಮುಖದಿಂದ ತುತಿಸಿ ಹಿಗ್ಗುವ ಮಂಚ
ದೇವಕೀಯ ಜಠರದಿ ಜನಿಸಿದ ಮಂಚ ||೪||
ವಾರುಣೀದೇವಿಗೆ ವರನೆನಿಸಿದ ಮಂಚ
ಸಾರುವ ಭಕ್ತರ ಪೊರೆವ ಮಂಚ
ಕಾರುಣ್ಯನಿಧಿ ಜಗನ್ನಾಥ ವಿಠ್ಠಲನ ವಿ-
ಹಾರಕ್ಕೆ ಯೋಗ್ಯವಾದ ಶೇಷ ಮಂಚ ||೫||
balu ramyavAgide shree hariya maMca ||pa||
yalaruNi kularAja rAjESvarana maMca ||a.pa||
pavanatanaya nenipa pAvanatara maMca
Buvanatrayava potta BAri maMca
kivigaLillada maMca SrInikEtana maMca
SivarUpadalli shrI hariya olisida maMca ||1||
nIlAMbaravanuTTu naLanaLisuva maMca
nAlige eraDuLLa naija maMca
nAlvattu kalpadi tapava mADida maMca
phAla musala halava piDidiha maMca ||2||
rAmananujanAgi raNava jayisida maMca
tAmasarudrana paDeda maMca
BImananujanoLu AvESisida maMca
jImUta mallaranu kuTTida maMca ||3||
jIva nAmakanAgi vyAptanAda hariya
sEvisi suKisuva divya maMca
sAvira muKadiMda tutisi higguva maMca
dEvakIya jaTharadi janisida maMca ||4||
vAruNIdEvige varanenisida maMca
sAruva Baktara poreva maMca
kAruNyanidhi jagannAtha viThThalana vi-
hArakke yOgyavAda SESha maMca ||5||
Leave a Reply