Composer : Shri Prasannavenkata dasaru
ತುತಿಸಲಳವೆ ದ್ವಿಜಕುಲೇಂದ್ರ |
ಕ್ಷಿತಿಗೆ ಇಂದ್ರ ಸುಗುಣ ಸಾಂದ್ರ ದಶ |
ಮತಿ ಮತಾಬ್ಧಿ ಪೂರ್ಣ ಚಂದ್ರ |
ಯತಿ ಮೃಗೇಂದ್ರ ಜಯ ಮುನೀಂದ್ರನಾ |
ತುತಿಸಲಳವೆ ಜಯ ಮುನೀಂದ್ರನಾ [ಪ]
ಚಾರುವೇದಕ್ಷೀರ ನಿಧಿಗೆ ಭಾರ
ಸೂತ್ರ ಮಂದಾರವಿಟ್ಟು |
ಧೀರ ಮಧ್ವ ಶಾಸ್ತ್ರ ವಾಸುಕಿ
ಥೋರ ನೇಣ ಸುತ್ತಿ ಕಡದು
ಸಾರ ನ್ಯಾಯಸುಧಾರಸವನು ವಿಬುಧರೊಡನೆ |
ಶ್ರೀರಮಣಗೆ ಅರ್ಪಿಸಿ ನಲಿವನಾ |
ಇದಕ್ಕೆ ತಾಳ | ಲಾರದಸುರ ಮಾಯಿಗಳೊದದನಾ
ಜಯ ಮುನೀಂದ್ರನಾ [೧]
ಅಶ್ರುತ ಜ್ಞಾನ ಪ್ರಭೆಯ ಕಿರಣ |
ಆಶ್ರಿತ ಚಕೋರಗಳಿಗೆ ಉಣಿಸಿ |
ಸುಶ್ರುತಿಯಾರ್ಥ ಚೋರ ಗಣಕೆ |
ಜಸವು ನಿರಾಶ್ರಯನ ತೋರಿ |
ಅಶ್ರದ್ಧವಾದಿಖಳ ಮುಖಾಬ್ಜಪಾ
ಕ್ರಂದಿಸಿ ದಂಶ ನಾಶ್ರಿತ ತತ್ವ
ಕುಮುದವ ವಿಕಸವಾ ಮಾಡಿ ನಿಜರ |
ಸಂಸ್ಕೃತಿ ತಾಪಗಳನ್ನು ಬಿಡಿಸುವಾ
ಜಯಮುನೀಂದ್ರನಾ [೨]
ಕ್ರೂರದರಶನದಿ ಪ್ರಮತ್ತ
ವಾರಣಗಳು ಚರಿಸುತಿರಲು |
ಚಾರುಪೂರ್ಣಪ್ರಮತಿ ವಾಗ್ಗಭೀರವನದಿ
ಘರ್ಜಿಸುತಲಿ | ಕ್ರೂರಯುಕುತಿ ನಖದಿ ಸೀಳಿದಾ |
ಶ್ವಸನಮತದ ವೀರರಿಗೆ ವಿಜಯವ
ಒಲಿಸಿದಾ | ಅಕ್ಶೋಭ್ಯ ಗುರು ಕುಮಾರ
ಪ್ರಸನ್ನ ವೇಂಕಟನೊಲಿಸಿದಾ
ಜಯ ಮುನೀಂದ್ರನಾ [೩]
tutisalaLave dvijakulEMdra |
kShitige iMdra suguNa sAMdra daSa |
mati matAbdhi pUrNa caMdra |
yati mRugEMdra jaya munIMdranA |
tutisalaLave jaya munIMdranA [pa]
cAruvEdakShIra nidhige BAra
sUtra maMdAraviTTu |
dhIra madhva SAstra vAsuki
thOra nENa sutti kaDadu
sAra nyAyasudhArasavanu vibudharoDane |
SrIramaNage arpisi nalivanA |
idakke tALa | lAradasura mAyigaLodadanA
jaya munIMdranA [1]
aSruta j~jAna praBeya kiraNa |
ASrita cakOragaLige uNisi |
suSrutiyArtha cOra gaNake |
jasavu nirASrayana tOri |
aSraddhavAdiKaLa muKAbjapA
kraMdisi daMSa nASrita tatva
kumudava vikasavA mADi nijara |
saMskRuti tApagaLannu biDisuvA
jayamunIMdranA [2]
krUradaraSanadi pramatta
vAraNagaLu carisutiralu |
cArupUrNapramati vAggaBIravanadi
Garjisutali | krUrayukuti naKadi sILidA |
Svasanamatada vIrarige vijayava
olisidA | akSOBya guru kumAra
prasanna vEMkaTanolisidA
jaya munIMdranA [3]
Leave a Reply