Composer : Shri Gurugovinda dasaru
ಟೀಕಾರ್ಯ-ಟೀಕಾರ್ಯ [ಪ]
ಕಾಕು ಮತಗಳ ವಿ | ವೇಕದಿ ಖಂಡನ [ಅ.ಪ]
ಎತ್ತಾಗಿರುತಿರೆ | ಶಾಸ್ತ್ರ ಬೋಧ ಶ್ರುತ
ಉತ್ತಮ ಸಂಸ್ಕೃತಿ | ಪೊತ್ತು ಜನಿಸಿದೆ [೧]
ಲಕ್ಷವಿತ್ತ ನೀ | ಲಕ್ಷಿಸದಲೆ ಮುನಿ
ತ್ರಯಕ್ಷನಂಶರಿಂ | ಭಿಕ್ಷುಕನಾದವ [೨]
ಮಧ್ವ ಶಾಸ್ತ್ರ ದು | ಗ್ದಾಬ್ಧಿ ಮಥಿಸಿ ಬಹು
ಶುದ್ಧ ಸುಧೆಯ ನೀ | ಮೆದ್ದು ಉಣಿಸಿದ [೩]
ಮೌನಿ ಮಧ್ವ ಕೃತ | ಮಾನ ಲಕ್ಷಣಕೆ
ಗಾನ ಮಾಡ್ದೆ ಪ್ರ | ಮಾಣ ಪದ್ಧತಿಯ [೪]
ಪದ್ಧತಿಯಿಂದಲಿ | ವಿದ್ಯಾರಣ್ಯರ
ಸದ್ದಡಗಿಸಿದೆಯೊ | ಬುದ್ಧಿ ಚಾತುರ್ಯ [೫]
ನಾಗಾವೇಶಿತ | ಯೋಗಿವರೇಣ್ಯನೆ
ಕಾಗಿನಿ ತೀರಗ | ಭಾಗವತರ ಪ್ರಿಯ [೬]
ಮಾವಿನೋದಿ ಗುರು | ಗೋವಿಂದ ವಿಠಲನ
ಭಾವ ಕುಸುಮದಿಂ | ದೋವಿ ಪೂಜಿಸುವ [೭]
TIkArya-TIkArya [pa]
kAku matagaLa vi | vEkadi KaMDana [a.pa]
ettAgirutire | SAstra bOdha Sruta
uttama saMskRuti | pottu janiside [1]
lakShavitta nI | lakShisadale muni
trayakShanaMSariM | BikShukanAdava [2]
madhva SAstra du | gdAbdhi mathisi bahu
Suddha sudheya nI | meddu uNisida [3]
mauni madhva kRuta | mAna lakShaNake
gAna mADde pra | mANa paddhatiya [4]
paddhatiyiMdali | vidyAraNyara
saddaDagisideyo | buddhi cAturya [5]
nAgAvESita | yOgivarENyane
kAgini tIraga | BAgavatara priya [6]
mAvinOdi guru | gOviMda viThalana
BAva kusumadiM | dOvi pUjisuva [7]
Leave a Reply