Shivane na ninna

Composer : Shri Shrida vittala

By Smt.Shubhalakshmi Rao

ಶಿವನೇ ನಾ ನಿನ್ನ ಸೇವಕನಯ್ಯಾ,
ದುರ್ಮನ ಬಿಡಿಸಯ್ಯ, ಕರುಣದಿ ಪಿಡಿ ಕೈಯ್ಯಾ || ಪ ||
ಭವಮೋಚಕ ಭಾಗವತಶಾಸ್ತ್ರವ
ಅವನೀಶಗೆ ಪೇಳ್ದವ ನೀನಲ್ಲವೆ || ಅ.ಪ ||

ವೈಕಾರಿಕ ತೈಜಸ ತಾಮಸವೆಂಬ
ತ್ರೈತತ್ತ್ವಗಳೆಂಬ,
ಸಾಕಾರಿ ಶಾರ್ವರಿಧವಧರ ಸಾಂಬ,
ಸುರಪಾದ್ಯರ ಬಿಂಬ [೨],
ವೈಕಲ್ಯಾಸ್ಪದವಾ ಕಳೆದೊಮ್ಮಿಗೆ
ವೈಕುಂಠಕೆ ಕರೆದೊಯ್ ಕರಿಗೊರಳಾ || ೧ ||

ಮೃತ್ಯುಂಜಯ ಮುಪ್ಪುರಹರ ಮಹದೇವ,
ದೇವರ್ಕಳಕಾವ,
ಸ್ತುತ್ಯಾದ್ರಿಜ ದಿತಿಜತತೀವನದಾವಾ,
ದುರಿತಾಂಬುಧಿನಾವ [೨],
ಕೃತ್ತಿವಾಸ ಎನ್ನತ್ಯಪರಾಧಗಳ್
ಎತ್ತಿಣಿಸದೆ ಕೃತಕೃತ್ಯನ ಮಾಡೈ || ೨ ||

ಗಂಗಾಧರ ಷಣ್ಮುಖ ಗಣಪರ ತಾತ,
ತ್ರೈಲೋಕ್ಯತ್ರಾತ,
ಲಿಂಗಾಹ್ವಯ ತಾರಕಹರ ನಿರ್ಭೀತ,
ಭುವನಾಧಿನಾಥ [೨],
ತುಂಗ ಮಹಿಮ ನಿಸ್ಸಂಗ ಹರಿಯ ದ್ವಿತಿ
ಯಂಗ ಡಮರು ಶೂಲಂಗಳ ಪಿಡಿದಿಹ || ೩ ||

ಪಂಚಾನನ ಪನ್ನಗ ಭೂಷಣ ಭೀಮ,
ಭುವನಾಭಿರಾಮ,
ಸಂಚಿಂತನ ಸಂತತ ಮಾಡುವ ನೇಮ,
ಶ್ರೀರಾಮನಾಮ [೨],
ಪಂಚಶರಾರಿ ವಿರಿಂಚಿಕುವರ ನಿ
ಷ್ಕಿಂಚನ-ರೊಡೆಯನ ಮಂಚ ಪದಾರ್ಹನೆ || ೪ ||

ಸ್ಫಟಿಕಾಂಭ ಕಪಾರಿ ಕಾಮಿತ ಫಲದಾ
ಫಲ್ಗುಣಸಖ ಶ್ರೀದ
ವಿಠ್ಠಲ ವಿತ್ತಪಮಿತ್ರ ದ್ವಿರದ,
ಚರ್ಮಾಂಬರನಾದ [೨],
ಕುಟಿಲರಹಿತ ಧೂರ್ಜಟಿ ವೃಷಭಧ್ವಜ
ನಿಟಿಲನಯನ ಸಂಕಟವ ನಿವಾರಿಸೊ || ೫ ||


SivanE nA ninna sEvakanayyA,
durmana biDisayya, karuNadi piDi kaiyyA || pa ||
BavamOcaka BAgavataSAstrava
avanISage pELdava nInallave || a.pa ||

vaikArika taijasa tAmasaveMba
traitattvagaLeMba,
sAkAri SArvaridhavadhara sAMba,
surapAdyara biMba [2],
vaikalyAspadavA kaLedommige
vaikuMThake karedoy karigoraLA || 1 ||

mRutyuMjaya muppurahara mahadEva,
dEvarkaLakAva,
stutyAdrija ditijatatIvanadAvA,
duritAMbudhinAva [2],
kRuttivAsa ennatyaparAdhagaL
ettiNisade kRutakRutyana mADai || 2 ||

gaMgAdhara ShaNmuKa gaNapara tAta,
trailOkyatrAta,
liMgAhvaya tArakahara nirBIta,
BuvanAdhinAtha [2],
tuMga mahima nissaMga hariya dviti
yaMga Damaru SUlaMgaLa piDidiha || 3 ||

paMcAnana pannaga BUShaNa BIma,
BuvanABirAma,
saMciMtana saMtata mADuva nEma,
SrIrAmanAma [2],
paMcaSarAri viriMcikuvara ni
ShkiMcana-roDeyana maMca padArhane || 4 ||

sPaTikAMBa kapAri kAmita PaladA
PalguNasaKa SrIda
viThThala vittapamitra dvirada,
carmAMbaranAda [2],
kuTilarahita dhUrjaTi vRuShaBadhvaja
niTilanayana saMkaTava nivAriso || 5 ||

Leave a Reply

Your email address will not be published. Required fields are marked *

You might also like

error: Content is protected !!