Sharanu Sharanu Jaya Muniraya

Composer : Shri Prasannavenkata dasaru

By Smt.Shubhalakshmi Rao

ಶರಣು ಶರಣು ಜಯ ಮುನಿರಾಯ ಸ್ವಾಮಿ,
ಶರಣಾಗತ ತಾತ್ವಿಕ ಪ್ರಿಯ | ಪ |

ಶ್ರೀ ಮಧ್ವಗುರು ದಯವನು ಪಡೆದು |
ಅದೇ ಮಹಿಮನ ಮನೆಯೊಳು ಬಂದು |
ನೇಮದಿ ತುರ್ಯಾಶ್ರಮ ವಲಿದೆ ಈ
ಭೂಮಿಯೊಳಗೆ ಇಂದ್ರನ ಪರಿಯಲ್ಲಿ | ೧ |

ಅಶೃತ ಪ್ರಭೆ ಬುಧರೊಳು ಬೀರಿ
ನಾನಾ, ಶೃತಿಯರ್ಥ ಪ್ರಕಟದೋರಿ |
ಶಾಶ್ವತದ್ಯಕ್ಷಾದಿ ತ್ರಿಪ್ರಮಾಣವ,
ನಿಜಾಶ್ರಿತರಿಗೆ ಪೇಳಿದೆ ಅನುವ | ೨ |

ವೇದಾಂಬುಧಿಯೊಳು ಸುಧೆದೆಗೆದು
ರಾಮ ಪಾದಕರ್ಪಿಸಿ ಬುಧ ಜನಕೆರೆದು |
ಕೈದುಗಳಂತೆ ಪ್ರಮೇಯಾರ್ಥವಿಡಿದೆ |
ಜಯನಾದದಿಂ ದುರ್ವಾದಿಗಳ ಕೊಚ್ಚಿದೆ | ೩ |

ಮರುತ ಮತದ ವಿಭುಧರ ನೆರಹಿಸಿ |
ಮೂರೇಳರಿ ಬಲವ ಜರಿ-ದಟ್ಟಿದೆ |
ಅವರಬಿರುದು ಸೀಳಿದೆ ಈ ಧರೆಯ
ವೈಷ್ಣವರ ಭಯವ ಕಳೆದೆ | ೪ |

ಈ ಕ್ಷೋಣಿಯೊಳು ಪ್ರತಿ ವರ್ಜಿತನೆ
ಶ್ರೀ ಅಕ್ಷಯಪ್ರಜ್ಞ ಕೃಪಾನ್ವಿತನೆ |
ಅಕ್ಷೋಭ್ಯತೀರ್ಥರ ತನಯನೇ |
ವಿಶ್ವ ಕುಕ್ಷಿ ಪ್ರಸನ್ನವೆಂಕಟ ಪ್ರಿಯನೆ | ೫ |


SaraNu SaraNu jaya munirAya svAmi,
SaraNAgata tAtvika priya | pa |

SrI madhvaguru dayavanu paDedu |
adE mahimana maneyoLu baMdu |
nEmadi turyASrama valide I
BUmiyoLage iMdrana pariyalli | 1 |

ashRuta praBe budharoLu bIri
nAnA, SRutiyartha prakaTadOri |
SASvatadyakShAdi tripramANava,
nijASritarige pELide anuva | 2 |

vEdAMbudhiyoLu sudhedegedu
rAma pAdakarpisi budha janakeredu |
kaidugaLaMte pramEyArthaviDide |
jayanAdadiM durvAdigaLa koccide | 3 |

maruta matada vibhudhara nerahisi |
mUrELari balava jari-daTTide |
avarabirudu sILide ee dhareya
vaiShNavara Bayava kaLede | 4 |

I kShONiyoLu prati varjitane
SrI akShayapraj~ja kRupAnvitane |
akShOByatIrthara tanayanE |
viSva kukShi prasannaveMkaTa priyane | 5 |

Leave a Reply

Your email address will not be published. Required fields are marked *

You might also like

error: Content is protected !!