Composer : Shri Shrida vittala
ರಥವೋಗದಾ ಮುನ್ನ ಗೋಕುಲಕೆ ಮನ್ಮನೋ-
ರಥ ಹೋಗಿರುವುದೇನೆಂಬೇ ||ಪ||
ಅತಿ ಕೌತುಕವದಾಯ್ತು ಖಳರಾಯನೊಲಿದು ಯದು-
ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ [ಅ.ಪ]
ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ-
ಪತಿ ಸೇವೆ ತಾನಾಗಿ ದೊರೆತೂ
ಶತ ಸಹಸ್ರಾನಂತ ಜನುಮಗಳ ಸತ್-
ಕೃತಕೆ ಫಲವಾಯಿತೆಂದರಿತೂ
ಗತ ಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿ
ಪಥದೊಳಗೆ ತಾವೆ ಮುಂದುವರಿದೂ
ಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆ
ಪ್ರತಿ ಇಲ್ಲವೀ ಶುಭೋದಯಕೆ ಸೂರ್ಯೋದಯಕೆ (೧)
ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು-
ನಾಪುಳಿನದಲಿ ಮೆರೆವ ಚರಣಾ
ಗೋಪೀಯರ ಪೀನ ಕುಚ ಕುಂಕುಮಾಂಕಿತ ಚರಣಾ
ತಾಪತ್ರಯಾವಳಿವ ಚರಣಾ
ಗೋಪುರದ ಶಿಲತೃಣಾಂಕುರುಹ ತೋರುವ ಚರಣಾ
ಆಪದ್ಬಾಂಧವನ ಚರಣಾ
ನಾ ಪೇಳಲೇನು ಭಕುತರ ವತ್ಸಲಾನುಕರು-
ಣಾ ಪೂರ್ಣಾ ಎನಗಭಯಕೊಡುವಾ ಪಿಡಿಲಾ (೨)
ನೋಡುವೆನು ನೀರದ ಶ್ಯಾಮಸುಂದರನ ಕೊಂ-
ಡಾಡುವೆನು ಕವಿಗೇಯನೆಂದೂ
ಮಾಡುವೆನು ಸಾಷ್ಟಾಂಗ ದಂಡ ಪ್ರಣಾಮ ಕೊಂ-
ಡಾಡುವೆನು ಕೈ ಮುಗಿದು ನಿಂದೂ
ಬೇಡುವೆನು ಭುವನೈಕದಾತನೆಂದಲ್ಲಿ ಕೊಂ
ಡಾಡುವೆನು ದಾಸ್ಯ ಬೇಕೆಂದೂ
ಈಡಿಲ್ಲದಿಂದಿನಾ ಮನಕೆನ್ನ ಬಯಕೆ ಕೈ-
ಗೂಡುವುದು ನಿಸ್ಸಂದೇಹ ದೈವ ಸಹಾಯ (೩)
ಇರುವನೋ ಏಕಾಂತದೊಳಗಿರುವ ಕೇಳದಿರು
ಬರುವನೋ ಬಂದವನ ಕಂಡೂ
ಕರೆವನೋ ಕಿರಿಯಯ್ಯ ಬಾರೆಂದು ಬಿಗಿದಪ್ಪಿ
ಬೆರೆವನೋ ಬೆರಸಿಯದನುಂಡೂ
ಒರೆವನೋ ಒಡಲ ಧರ್ಮವನೆಲ್ಲ
ವರಗಿನೇ ಜರಿಯನೋ
ಜಗದೀಶ ಹಗೆಯವನೆನುತ ಬಗೆಯ (೪)
ಗೋಧೂಳಿಲಗ್ನಕೆ ಗೋಕುಲಕೆ ಬಂದು ಬೆರ-
ಗಾಗಿ ಹೆಜ್ಜೆಗಳ ನೋಡಿ
ಭೂದೇವಿಗಾಭರಣವೆನುತ ತೇರಿಳಿದು ಶ್ರೀ
ಪಾದರಜದೊಳಗೆ ಪೊರಳಾಡೀ
ಗೋದೋಹನದೊಳಗಿದ್ದ ರಾಮಕೃಷ್ಣರ ಕಂಡು
ನಾ ಧನ್ಯ ಧನ್ಯನೆಂದಾಡೀ
ಶ್ರೀದವಿಠಲ ಎರಗುವನಿತರೊಳು ಬಿಗಿದಪ್ಪಿ
ಸಾದರಿಸಿದನು ಇದೆ ಸದನದಲ್ಲಿ ಸ್ವಪ್ನದಲ್ಲಿ (೫)
rathavOgadA munna gOkulake manmanO-
ratha hOgiruvudEneMbE ||pa||
ati kautukavadAytu KaLarAyanolidu yadu-
patiya karetaruvudeMdenage pELiralikke [a.pa]
patitarge nAma durlaBavalA enage SrI-
pati sEve tAnAgi doretU
Sata sahasrAnaMta janumagaLa sat-
kRutake PalavAyiteMdaritU
gata kilbiShanAdeneMbudakidE sAkShi
pathadoLage tAve muMduvaridU
mitiyilladale mahA SakunaMgaLAgutive
prati illavI SuBOdayake sUryOdayake (1)
SrI padmajAdigaLu sEvisuva caraNa yamu-
nApuLinadali mereva caraNA
gOpIyara pIna kuca kuMkumAMkita caraNA
tApatrayAvaLiva caraNA
gOpurada SilatRuNAMkuruha tOruva caraNA
ApadbAMdhavana caraNA
nA pELalEnu Bakutara vatsalAnukaru-
NA pUrNA enagaBayakoDuvA piDilA (2)
nODuvenu nIrada SyAmasuMdarana koM-
DADuvenu kavigEyaneMdU
mADuvenu sAShTAMga daMDa praNAma koM-
DADuvenu kai mugidu niMdU
bEDuvenu BuvanaikadAtaneMdalli koM
DADuvenu dAsya bEkeMdU
IDilladiMdinA manakenna bayake kai-
gUDuvudu nissaMdEha daiva sahAya (3)
iruvanO EkAMtadoLagiruva kELadiru
baruvanO baMdavana kaMDU
karevanO kiriyayya bAreMdu bigidappi
berevanO berasiyadanuMDU
orevanO oDala dharmavanella
varaginE jariyanO
jagadISa hageyavanenuta bageya (4)
gOdhULilagnake gOkulake baMdu bera-
gAgi hejjegaLa nODi
BUdEvigABaraNavenuta tEriLidu SrI
pAdarajadoLage poraLADI
gOdOhanadoLagidda rAmakRuShNara kaMDu
nA dhanya dhanyaneMdADI
SrIdaviThala eraguvanitaroLu bigidappi
sAdarisidanu ide sadanadalli svapnadalli (5)
Leave a Reply