Composer : Shri Shrida vittala
ನೋಡೆ ನೋಡೆ ಎನ್ನ ಮುಖವ ನೋಡತಕ್ಕದೆ
ನೋಡದಿರುವುದುಚಿತವೇ ಯವೆಯನಿಕ್ಕದೆ ||ಪ||
ಯವೆಯನಿಕ್ಕದೆ ನೋಡಲೇನೊ ಮೀನಳಲ್ಲ ಎನ್ನ
ಧವನ ಬಿಟ್ಟು ದೂರ ಹೊಂದುವ ಗರತಿಯಲ್ಲ ||೧||
ಭಾರ ಹೊರುವಳಲ್ಲ ಯಾಕಿಷ್ಟು ದೂರ ಬಂದಿ
ಭಾರಿ ಕೊಡದ ಹೊತ್ತು ನೀ ತರುವ ನೀರಾ ||೨||
ಹೊತ್ತ ನೀರಾ ತಡದೆ ಎಲಾ ಮಂದರಾಚಲ
ಚಿತ್ತ ಚೋರ ಎನ್ನೊಳೆಷ್ಟು ಮಾಡುವಿ ಛಲಾ ||೩||
ಛಲವು ಬಿಟ್ಟರೆ ಇನ್ನು ನಿನಗೆ ಬೆಲೆಯು ಇಲ್ಲ
ತಲೆಯ ತಗ್ಗಿಸಿ ನೆಲವ ನೋಡಿ ನಡಿವೆಯಲ್ಲಾ ||೪||
ನಡೆಯ ಲೇಸು ತಲೆಯ ತಗ್ಗಿಸಿ ನೋಡಿ ಪೊತ್ತ
ಕೊಡದ ಹೊರೆಯ ಹೊಡಧ್ಯಾತಕೆನ್ನ ಕಾಡಿ ||೫||
ನಿನ್ನ ಕಾಡಿ ಕೂಡ ಬಂದವನೊಳೆಷ್ಟು ಬಿಂಕ-
ವನ್ನು ತೋರಿ ಬರಿದೆ ಮಾಡುವರೆ ಸಿಟ್ಟು ||೬||
ಸಿಟ್ಟುಮಾಡಲಿಕ್ಕೆ ನಾರಸಿಂಹಳೇನೊ ನಿನ್ನ
ಸಿಟ್ಟಿಗಂಜಿ ವಂಡಂಬಡುವಳಲ್ಲ ನಾನು ||೭||
ನೀನೆ ವಡಂಬಡುವದಕ್ಕೆ ಮಾನಿನಿ ಮಣಿ
ಯೇನುಬೇಡಿದರು ಕೊಡುವೆ ನಿನಗೆ ನಾನೆ ಹೊಣೆ ||೮||
ಬಾಳಲಾರೆ ಬೇಡಿಕೊಂಡಿ ತಿರುಕರಂತೆ ಛೀ
ಬಾಳುಗೇಡಿ ಎನ್ನೊಳ್ಯಾತಕಿನ್ನು ಭ್ರಾಂತೆ ||೯||
ಭ್ರಾಂತಿ ಬಿಡದೆ ಬಾಲೆ ನಿನ್ನ ಬೆರೆಯಿದಲ್ಲದೆ ಇಷ್ಟು
ಪಂಥ ಮಾಡುವರೆ ಲೇಶ ಕರುಣವಿಲ್ಲದೆ ||೧೦||
ಕರುಣವಿಲ್ಲದೆ ಹೆಂಗೊರಳ ಕೊಯಿದಿಯಂತೊ ಎನ್ನ
ಹರಣದೊಡೆಯನಾಹೆನೆಂಬ ಹವಣೆ ಸಾಕೊ ||೧೧||
ಸಾಕು ಹವಣೆ ನಿನ್ನ ಸಂಗ ಸುಖವನಿತ್ತು ಎನ್ನ
ಯಾತಕತ್ತು ಅಂಜಿಸುವಿ ಕಂಗಳೊತ್ತು ||೧೨||
ಅತ್ತು ಕಂಗಳೊತ್ತಲೇಸೆ ಪತ್ನಿ ವಿರಹವೆ
ಚಿತ್ತಚೋರ ಶಿಲೆಯಮ್ಯಾಲೆ ಬರದ ಬರಹವೆ ||೧೩||
ಶಿಲೆಯಮ್ಯಾಲೆ ಬರೆಯಮ್ಯಾಲೆ ಶಿಲ್ಪಿ ನಾನು ಎನ್ನ
ನೆಲೆಯು ಕೇಳಿ ಕಂಡು ಬಲ್ಲರಿಯೆ ನೀನು ||೧೪||
ಕಂಡು ಕೇಳಿ ಬಲ್ಲೆ ಕೃಷ್ಣ ಕಳ್ಳನೆಂಬುದಾ ಇಕೋ
ಗಂಡರುಳ್ಳ ಗರತೆರಿಂದ ಬೇಸಿಕೊಂಬುದಾ ||೧೫||
ಗರತೇರಿಂದ ಬೈಸಿಕೊಂಬುವದೆ ಲಾಭ ಅನ್ಯ
ಪುರುಷನೆಂದು ನಾಚಿ ಮಾಡಬ್ಯಾಡ ಲೋಭಾ ||೧೬||
ನಾಚಲ್ಯಾಕೆ ನಾ ದಿಗಂಬರಳೆ ಹೋಗೋ ದುರಾ-
ಲೋಚನೆಯ ಬಿಟ್ಟು ಧೈರ್ಯವಂತನಾಗು ||೧೭||
ಧೈರ್ಯವಂತನಾಹೆನೇಕಾಂತ ನದ ನದಿ ಸ್ವಲ್ಪ
ಧೈರ್ಯವನ್ನುಮಾಡಿ ನೋಡು ಮದನ ಕದನದಿ ||೧೮||
ಕದನಕೆ ಕಾಲ್ಗೆದರುವಂಥ ಕಲ್ಕಿ ನೀನು ಅಂತು
ಹದನನಗಲಿಕೊಂಬೆ ನಿಲ್ಲಲನಕ ನಿಲ್ಲೊ ||೧೯||
ನಿಲ್ಲು ನಿಲ್ಲೆಂದರೆ ನಿಂತ ಶ್ರೀದವಿಠಲ
ವೊಡಂಬಟ್ಟ ಕೊಟ್ಟ ಸ್ವಪ್ರಸಾದ ||೨೦||
nODe nODe enna muKava nODatakkade
nODadiruvuducitavE yaveyanikkade ||pa||
yaveyanikkade nODalEno mInaLalla enna
dhavana biTTu dUra hoMduva garatiyalla ||1||
BAra horuvaLalla yAkiShTu dUra baMdi
BAri koDada hottu nI taruva nIrA ||2||
hotta nIrA taDade elA maMdarAcala
citta cOra ennoLeShTu mADuvi CalA ||3||
Calavu biTTare innu ninage beleyu illa
taleya taggisi nelava nODi naDiveyallA ||4||
naDeya lEsu taleya taggisi nODi potta
koDada horeya hoDadhyAtakenna kADi ||5||
ninna kADi kUDa baMdavanoLeShTu biMka-
vannu tOri baride mADuvare siTTu ||6||
siTTumADalikke nArasiMhaLEno ninna
siTTigaMji vaMDaMbaDuvaLalla nAnu ||7||
nIne vaDaMbaDuvadakke mAnini maNi
yEnubEDidaru koDuve ninage nAne hoNe ||8||
bALalAre bEDikoMDi tirukaraMte CI
bALugEDi ennoLyAtakinnu BrAMte ||9||
BrAMti biDade bAle ninna bereyidallade iShTu
paMtha mADuvare lESa karuNavillade ||10||
karuNavillade heMgoraLa koyidiyaMto enna
haraNadoDeyanAheneMba havaNe sAko ||11||
sAku havaNe ninna saMga suKavanittu enna
yAtakattu aMjisuvi kaMgaLottu ||12||
attu kaMgaLottalEse patni virahave
cittacOra SileyamyAle barada barahave ||13||
SileyamyAle bareyamyAle Silpi nAnu enna
neleyu kELi kaMDu ballariye nInu ||14||
kaMDu kELi balle kRuShNa kaLLaneMbudA ikO
gaMDaruLLa garateriMda bEsikoMbudA ||15||
garatEriMda baisikoMbuvade lABa anya
puruShaneMdu nAci mADabyADa lOBA ||16||
nAcalyAke nA digaMbaraLe hOgO durA-
lOcaneya biTTu dhairyavaMtanAgu ||17||
dhairyavaMtanAhenEkAMta nada nadi svalpa
dhairyavannumADi nODu madana kadanadi ||18||
kadanake kAlgedaruvaMtha kalki nInu aMtu
hadananagalikoMbe nillalanaka nillo ||19||
nillu nilleMdare niMta SrIdaviThala
voDaMbaTTa koTTa svaprasAda ||20||
Leave a Reply