Composer : Shri Vyasatatvajnaru
ಜಯ ಮುನಿಯ ಭಜಿಸಿ | ಸಿರಿ ಪತಿಯ
ದಯವ ಬಯಸುವ ಧೀರರು [ಪ]
ಒಂದೊಂದು ವಚನಗಳು ಗುರುತರಾ
ನಂದತೀರ್ಥರ ಭಾವಕೆ
ಹೊಂದಿಸುವ ಯುಕುತಿ ಬಾಣ | ತೆಗೆಯಲವು
ಕುಂದಿಲ್ಲ ಧೀಷುಧಿಗಳು [೧]
ವಂದಿಸುವ ಜನ ಬೇಡಿದ ಫಲಗಳಿಗೆ
ಮಂದಾರು ತರು ಸನ್ನಿಭ | ತಾವು
ವಂದಿಸುವ ಶಿಷ್ಯರಿಗೆ | ಹೃದಯದಲ್ಲಿ
ಕುಂದ ಕುಸುಮದ ಮಾಲಿಕೆ | ತಾವು [೨]
ಗೆಲಿದು ಪ್ರತಿವಾದಿ ಹೃದಯ | ಗಿರಿಗಳಿಗೆ
ಕುಲಿಶಗಳಂತಿಹವೆ ಅವರ ವಚನ
ಫಲಿಸುವ ಶ್ರೀ ವಾಸುದೇವ | ವಿಠಲನ
ಸಲೆ ಕೃಪೆಯೆಂದು ತಿಳಿಯೊ | ಪ್ರಾಣಿ [೩]
jaya muniya Bajisi | siri patiya
dayava bayasuva dhIraru [pa]
oMdoMdu vacanagaLu gurutarA
naMdatIrthara BAvake
hoMdisuva yukuti bANa | tegeyalavu
kuMdilla dhIShudhigaLu [1]
vaMdisuva jana bEDida PalagaLige
maMdAru taru sanniBa | tAvu
vaMdisuva SiShyarige | hRudayadalli
kuMda kusumada mAlike | tAvu [2]
gelidu prativAdi hRudaya | girigaLige
kuliSagaLaMtihave avara vacana
Palisuva SrI vAsudEva | viThalana
sale kRupeyeMdu tiLiyo | prANi [3]
Leave a Reply