Composer : Shri Vishwendra Tirtharu
ಜಯ ಜಯ ಜಯ ಮಧ್ವಶಾಸ್ತ್ರ ವ್ಯಾಖ್ಯಾನಾತಿಗೇಯ [ಪ]
ಮಂಗಲವೇಡೆಯೊಳುದುಭವಿಸುತ ಜಗ-ನ್
ಮಂಗಲಕರವಾದ ಟೀಕೆಯ ರಚಿಸಿ
ಮಂಗಲಮೂರುತಿ ರಾಮನ ಭಜಿಸುತಾ-
ನಂಗನ ಜಯಿಸಿದ ಮುನಿಕುಲ ತಿಲಕ [೧]
ವಿದ್ಯಾರಣ್ಯನೆಂಬ ಖಾಂಡವ ವನವನೆ
ಯಾದವೇಶನ ಸಖನಂತೆ ನೀ ದಹಿಸಿ
ಮಧ್ವಶಾಸ್ತ್ರವೆಂಬ ರತ್ನವ ಜನರಿಗೆ
ಸುಧೆಯಂತೆ ಕುಡಿಸಿದ ಯತಿವಂಶ ರತ್ನ [೨]
ಮಾಧ್ವಗ್ರಂಥವ ನೀನು ಬಂಧುವೆಂದೆಣಿಸುತ
ರಾಜೇಶ ಹಯಮುಖ ಶ್ರೀರಾಮಚಂದ್ರ
ಪಾಂದಾಂಬುಹವನ್ನೆ ಬಿಡದೆ ಸೇವಿಸುತಲಿ
ವಾದೀಭಗಳಿಗೆ ಮೃಗೇಂದ್ರನಾಗಿರುವಿ [೩]
jaya jaya jaya madhvaSAstra vyAKyAnAtigEya [pa]
maMgalavEDeyoLuduBavisuta jaga-n
maMgalakaravAda TIkeya racisi
maMgalamUruti rAmana BajisutA-
naMgana jayisida munikula tilaka [1]
vidyAraNyaneMba KAMDava vanavane
yAdavESana saKanaMte nI dahisi
madhvaSAstraveMba ratnava janarige
sudheyaMte kuDisida yativaMSa ratna [2]
mAdhvagraMthava nInu baMdhuveMdeNisuta
rAjESa hayamuKa SrIrAmacaMdra
pAMdAMbuhavanne biDade sEvisutali
vAdIBagaLige mRugEMdranAgiruvi [3]
Leave a Reply