Composer : Shri Shripadarajaru
ವರದನು ಬರುವೊ ಚನ್ದ
ಗರುಡ ವಾಹನವೇರಿ ಅರುಣೋದಯದಲ್ಲಿ [ಪ]
ಅಭಯ ಕರವ ನೀಡಿ ಅಮರ ವಂದ್ಯನು ತಾನು
ದೇವಾದಿ ದೇವನಾದ ಕರಿರಾಜ ಕಂಚಿ [ಅ.ಪ]
ಗೋಪುರ ಬಾಗಿಳೋಳ್ ಕೋಟಿ ಜನರ ಮಧ್ಯ
ಕೋಮಳಾಂಗದ ಝಗಿ ಝಗಿ ಝಗಿಸುತ
ವಿಧ ವಿಧ ಪರಿಮಳ ಪುಷ್ಪ ಹಾರದಿಂದ
ಮಿಂಚಿನಂತೆ ಹೊಳೆಯುವ ವಜ್ರ ವೈಡೂರ್ಯದಿಂದ [೧]
ಸುತ್ತಿ ಬರುವ ರಥ ಬೀದಿಯೊಳ್ ಮನೋಹರ
ರಂಗವಲ್ಲಿಯನಿಟ್ಟು ತೋರಣಂಗಳ ಕಟ್ಟಿ
ಆಡಿ ಓಡಿ ಬರುವ ಗರುಡ ಗಮನ ರಂಗ
ವಿಠ್ಠಲ ದರುಶನ ವೈಭವ ಏನೆಂಬೆ [೨]
varadanu baruvo chanda
garuDa vAhanavEri aruNOdayadalli [pa]
abhaya karava neeDi amara vaMdyanu tAnu
dEvAdi dEvanAda karirAja kaMchi [a.pa]
gOpura bAgiLOL kOTi janara madhya
kOmaLAMgada jhagi jhagi jhagisuta
vidha vidha parimaLa puShpa hAradiMda
miMchinaMte hoLeyuva vajra vaiDUryadiMda [1]
sutti baruva ratha beediyoL manOhara
raMgavalliyaniTTu tOraNaMgaLa kaTTi
ADi ODi baruva garuDa gamana raMga
viThThala darushana vaibhava EneMbe [2]
Leave a Reply