Vamana Charitre

Composer : Shri Shripadarajaru

ಅದಿತಾದೇವಿಯು ಪಯೋವತವ ಮಾಡಿದಳಾಕೆ |
ಪತಿಯ ಆಜ್ಞೆಯ ಕೇಳಿಕೊಂಡು ||
ಪೃಥಿವಿಯನೆಲ್ಲಾ ಕ್ರಮಿಸುವ ಸ್ವಾಮಿ ತಾ |
ಸುತನಾಗಿ ಅಲ್ಲೆ ಜನಿಸಿದ || ೧ ||

ಜಾತ ಕರ್ಮವ ಮಾಡಿ ಮಧುವಿಟ್ಟು ಮುದದಿಂದ |
ಪುಣ್ಯಾಹವಾಚನ ಮಾಡಿಕೊಂಡ ||
ಕೋಟಿ ಗೋದಾನ ಕೊಟ್ಟು ಕಶ್ಯಪ ತಾನು |
ಶ್ರೀಕೃಷ್ಣಾಗ್ ಅರ್ಪಿತವೆಂದ || ೨ ||

ದಶರಾತ್ರಿ ಕಳೆಯಲು ಅಸುರ ಸಂಹಾರಗ |
ಶಶಿಮುಖಿಯರೆಲ್ಲ ನೆರೆದು |
ಎಸೆವೊ ಚಿನ್ನದ ತೊಟ್ಟಿಲೊಳಿಟ್ಟು ತೂಗುತ |
ಹೆಸರು ಇಟ್ಟರು ವಾಮನನಂತ || ೩ ||

ಆನ್ನಪ್ರಾಶನ ಮಾಡಿ ಚೌಲಕರ್ಮವ- |
ಮಾಡಿ ತನ್ನ ಬಂಧುಗಳನೆಲ್ಲ ಕರೆಸಿ |
ಹನ್ನೆರಡು ವರುಷ ತಪವಿದ್ದು ಪಡೆದ |
ಮೋಹನ್ನಗ ಮುಂಜಿ ಕಟ್ಟಿದರು || ೪ ||

ಉಪನಯನವನು ವಾಮನಗ ಕಶ್ಯಪ
ಮಾಡೆ ಸತಿ, ಸರಸ್ವತಿ, ಭಾರತಿಯರು ||
ಅತಿ ಭಕ್ತಿಯಿಂದ ಉಂಗುರವ ಭಿಕ್ಷವನಿಟ್ಟರು |
ಮುತ್ತಿನಾರತಿ ಎತ್ತಿದರೆ ಹರುಷದಲಿ || ೫ ||

ದಂಡ ಕಮಂಡಲ ಯಜ್ಯೋಪವೀತವು |
ಮುಂಚೆ ಕೃಷ್ಣಾಜಿನ ಧರಿಸಿ |
ಅಂದಿಗೆ ಕಿರುಗೆಜ್ಜೆ ಸರಪಳಿಯು ಘಿಲು ಘಿಲು ಎನುತಲಿ |
ಬಂದ ವಾಮನ ಬಲಿರಾಜನ ಸಭೆಯಲ್ಲಿ || ೬ ||

ಕೋಟಿ ಸೂರ್ಯ ಚಂದ್ರ ಕಾಂತಿ ಶೋಭಿಸುವಂಥ
ನೋಟದಿ ಮುತ್ತಿನ ಮುಖವು ||
ನೋಟದಿ ಕರುಣಾ ರಸಸೂಸಿ ಹೊಳೆವಂಥ |
ಪ್ರಖ್ಯಾತ ಬಂದಾ ರಾಜ ಸಭೆಗೆ || ೭ ||

ತಾಳ ಮದ್ದಲೆ ಭೇರಿ ಡಮರೆಂಬೊ ನಾಟ್ಯವ |
ಅಡಿದರು ಊರ್ವಶಿ, ರಂಭೆ |
ಚತುರ್ಮುಖ ಬ್ರಹ್ಮ ಸ್ತೋತ್ರವ ಮಾಡಿ- |
ಬರುತಿರೆ ಪರಮ ಪುರುಷನು ಈತನೆಂದು || ೮ ||

ಧರೆಯೊಳಗುತ್ತಮ ಸುಂದರ ಪುರುಷ |
ಬೆರಗಾಗಿ ನಿಂತು ನೋಡಿದರೆ ||
ಮುತ್ತಿನ ಮಣಿಯ ತಂದಿಟ್ಟನು ಬಲಿರಾಯ |
ಇತ್ತ ಬನ್ನಿರಿ ಕುಳ್ಳಿರೆಂದಾ || ೯ ||

ಎತ್ತ ಕಡೆಯಿಂದ ಬಂದೀರಿ ಏನು ಕಾರಣ |
ಕೈ ಎತ್ತಿ ಹಸ್ತವ ಮುಗಿದಾ, ಬಹಳ ||
ದೂರದಿಂದ ಬಂದೇನು ಬಲಿರಾಯ |
ನಿನ್ನ ಮೂರುತಿ ಕೀರುತಿ ಕೇಳಿ || ೧೦ ||

ಮೂರು ಪಾದದ ಭೂಮಿ ದಾನವ ಕೊಡು |
ಎಂದು ಬೇಡಿ ಕೊಂಡನು ಬ್ರಹ್ಮಚಾರಿ ||
ಏನು ಬೇಡುವೆಯೋ ಬಡ ಬ್ರಾಹ್ಮಣನೇ |
ಕನಕವ ಬೇಡು ನಾ ದಾನ ಕೊಡುವೇ || ೧೧ ||

ಸೂಚನೆ ಮಾಡಿದರು ಶುಕ್ರಾಚಾರ್ಯರು |
ಬಲು ಜೋಕೆ ಎಂದು ಹೇಳಿದರು |
ಎಷ್ಟು ಹೇಳಿದರೂ ಇವ ಬಿಟ್ಟು ಹೋಗುವನಲ್ಲ |
ಸಿಟ್ಟಲೆ ಶಾಪವ ಕೊಡುವ || ೧೨ ||

ಕೊಟ್ಟೆನು ಯದುಕುಲ ತಿಲಕಗೆ-
ದಾನವ, ಕೊಟ್ಟ ಮಾತಿಗೆ ತಪ್ಪದ್-ಹಾಂಗೆ
ಮುತ್ತಿನ ಗಿಂಡಿಲಿ ಉದಕವ ತಾರೆಂದು |
ತನ್ನ ವಲ್ಲಭೆಗೆ ಹೇಳಿದನು ||೧೩ ||

ಅಂದ ಮಾತನು ಕೇಳಿ ತಂದಳು
ಉದಕವ ವಿಂಧ್ಯಾವಳಿ ಸಭೆಯಲ್ಲಿ
ಪನ್ನಂಗ ಶಯನನ ಪಾದಪದ್ಮವ- |
ತೊಳೆದು ಧನ್ಯರಾದೆವು ಎಂದೆನಲು || ೧೪||

ಉತ್ತಮ ಪುರುಷನ ಪಾದ ಪದ್ಮವ ತೊಳೆಯಲು
ಸುರನದಿ ಸುತ್ತಿ ಹರಿಯಿತು ನಾಲ್ಕು ಬ್ರಹ್ಮಾಂಡ |
ಇನ್ನೊಂದು ಪಾದವ ಇಡಲಿಕ್ಕೆ ಸ್ಥಳವಿಲ್ಲ |
ಇನ್ನೆಲ್ಲಿ ಇಡಲಿ ಹೇಳೆಂದಾ ||೧೫ ||

ನೆತ್ತಿಯ ಮೇಲಿಟ್ಟು ನಿಜವುಳ್ಳ- |
ಪಾದವ ಒತ್ತಿದ ಪಾತಾಳದಲ್ಲಿ ||
ಚೆನ್ನೀಗ ಹರಿಯ ಪಾದವ ಕಂಡು |
ಅನ್ಯಾಯವೆಂಬರು ಜನರು ||೧೬ ||

ನಾಭಿ ಕಮಲದಿಂದ ಬ್ರಹ್ಮದೇವರ- |
ಪಡೆದ ಪಾದದಿಂದ ಭಾಗೀರಥಿ ಪಡೆದ ||
ಕೋರೆದಾಡೆಯಿಂದ ತುಂಗಭದ್ರೆಯ ಪಡೆದ |
ನಾರಾಯಣಗೆ ಎದುರಿಲ್ಲ || ೧೭ ||

ತಾಕ್ರಮಿಸಿದ ಮೂರು ಸುತಳ ಲೋಕವನ್ನು |
ತ್ರಿವಿಕ್ರಮ ರೂಪಾಗಿ ನಿಂತ ||
ಅಷ್ಟೈಶ್ವರ್ಯ ಸೌಭಾಗ್ಯ ಸಂಪತ್ತು |
ಎಂಬೋ ಪಟ್ಟಣವನ್ನು ನಿರ್ಮಿಸಿದಾ || ೧೮ ||

ಪಟ್ಟ ಶಾಸನ ಘಟನೆ ಮಾಡಿದ ಬಲಿರಾಯಗ |
ಕೊಟ್ಟನು ಸುತಳ ಲೋಕವನು ||
ಬಲಿರಾಯನುದ್ಧರಿಸಿದ ರಂಗವಿಠ್ಠಲನ |
ಅನುದಿನ ನೆನೆಕಂಡ್ಯ ಮನವೆ || ೧೯ ||


aditAdEviyu payOvRatava mADidaLAke |
patiya Aj~jeya kELikoMDu ||
pRuthiviyanellA kramisuva svAmi tA |
sutanAgi alle janisida || 1 ||

jAta karmava mADi madhuviTTu mudadiMda |
puNyAhavAcana mADikoMDa ||
kOTi gOdAna koTTu kaSyapa tAnu |
SrIkRuShNAg arpitaveMda || 2 ||

daSarAtri kaLeyalu asura saMhAraga |
SaSimuKiyarella neredu |
esevo cinnada toTTiloLiTTu tUguta |
hesaru iTTaru vAmananaMta || 3 ||

AnnaprASana mADi caulakarmava- |
mADi tanna baMdhugaLanella karesi |
hanneraDu varuSha tapaviddu paDeda |
mOhannaga muMji kaTTidaru || 4 ||

upanayanavanu vAmanaga kaSyapa –
mADe sati, sarasvati, BAratiyaru ||
ati BaktiyiMda uMgurava BikShavaniTTaru |
muttinArati ettidare haruShadali || 5 ||

daMDa kamaMDala yajyOpavItavu |
muMce kRuShNAjina dharisi |
aMdige kirugejje sarapaLiyu ghilu ghilu enutali |
baMda vAmana balirAjana saBeyalli || 6 ||

kOTi sUrya caMdra kAMti SOBisuvaMtha
nOTadi muttina muKavu ||
nOTadi karuNA rasasUsi hoLevaMtha |
praKyAta baMdA rAja saBege || 7 ||

tALa maddale BEri DamareMbo nATyava |
aDidaru UrvaSi, raMBe |
caturmuKa brahma stOtrava mADi- |
barutire parama puruShanu ItaneMdu || 8 ||

dhareyoLaguttama suMdara puruSha |
beragAgi niMtu nODidare ||
muttina maNiya taMdiTTanu balirAya |
itta banniri kuLLireMdA || 9 ||

etta kaDeyiMda baMdIri Enu kAraNa |
kai etti hastava mugidA, bahaLa ||
dUradiMda baMdEnu balirAya |
ninna mUruti kIruti kELi || 10 ||

mUru pAdada BUmi dAnava koDu |
eMdu bEDi koMDanu brahmacAri ||
Enu bEDuveyO baDa brAhmaNanE |
kanakava bEDu nA dAna koDuvE || 11 ||

sUcane mADidaru SukrAcAryaru |
balu jOke eMdu hELidaru |
eShTu hELidarU iva biTTu hOguvanalla |
siTTale Saapava koDuva || 12 ||

koTTenu yadukula tilakage-
dAnava, koTTa mAtige tappad-hAMge
muttina giMDili udakava tAreMdu |
tanna vallaBege hELidanu ||13 ||

aMda mAtanu kELi taMdaLu
udakava viMdhyAvaLi saBeyalli
pannaMga Sayanana pAdapadmava- |
toLedu dhanyarAdevu eMdenalu || 14||

uttama puruShana pAda padmava toLeyalu
suranadi sutti hariyitu nAlku brahmAMDa |
innoMdu pAdava iDalikke sthaLavilla |
innelli iDali hELeMdA ||15 ||

nettiya mEliTTu nijavuLLa- |
pAdava ottida pAtALadalli ||
cennIga hariya pAdava kaMDu |
anyAyaveMbaru janaru ||16 ||

nABi kamaladiMda brahmadEvara- |
paDeda pAdadiMda BAgIrathi paDeda ||
kOredADeyiMda tuMgaBadreya paDeda |
nArAyaNage edurilla || 17 ||

tAkramisida mUru sutaLa lOkavannu |
trivikrama rUpAgi niMta ||
aShTaiSvarya sauBAgya saMpattu |
eMbO paTTaNavannu nirmisidA || 18 ||

paTTa SAsana GaTane mADida balirAyaga |
koTTanu sutaLa lOkavanu ||
balirAyanuddharisida raMgaviThThalana |
anudina nenekaMDya manave || 19 ||

Leave a Reply

Your email address will not be published. Required fields are marked *

You might also like

error: Content is protected !!