Composer : Shri Shripadarajaru
ಕಂಜನೇತ್ರೇ ಶುಭ ಮಂಜುಳ ಗಾತ್ರೆ, ಕುಂಜರದಂತೆ
ಗಮನೆ, ರಂಜಿತಾಂಗಿ ನಿರಂಜನಾಂಗಿ ||ಪ||
ಧರೆಯ ಮ್ಯಾಲೆ ಹಿರಿಯಳು ನಾ-ನಿರಲು
ಲಜ್ಜೆ ತೊರೆದು ನೀನು
ಸರಸವಾಡೋರೆ ಮುರಹರನ ಕರೆದು
ಭಾಮಿನಿ ,ಸುಗುಣೆ ಕಾಮಿನಿ (೧)
ಪತಿಯ ಪ್ರೀತಿ ಎನ್ನ ಮ್ಯಾಲೆ
ಅತಿಶಯದಿ ಇರಲು ಜ್ಯೇಷ್ಠ
ಸತಿಯಳೇನೇ ನೀನು ನೋಡು ಮತಿಯ
ರುಗ್ಮಿಣಿ, ಸುಪದ್ಮ ಗಂಧಿನಿ (೨)
ಒಂದು ಕಾಲದಲ್ಲಿ ದಾಸಿ-ಯಿಂದ
ಪತಿಯು ಸರಸ ವಾಡಲು ಬಂದಳೇನೇ
ಅರಸಿ ಸಮ-ಳೆಂದು ಭಾಮಿನಿ
ಸುಗುಣೆ ಕಾಮಿನಿ (೩)
ದಾಸಿ ಸಮಳು ನಾನು ಅಲ್ಲ
ದೋಷ ಮಾತನಾಡ ಬೇಡ
ಶ್ರೀಶನ ದಯರಾಶಿ ಇರಲು ದಾಸಿಯೆ
ರುಗ್ಮಿಣಿ ಸುಪದ್ಮ ಗಂಧಿನಿ (೪)
ಸಾರೆ ಕೃತ್ಯವಾರೆ ಮಾಡಿ
ದ್ವಾರಾವತಿಯಿಂದ ಎನ್ನ
ಸಾರೆ ಬಂದ ಪ್ರೀತಿಯು ಅ-ಪಾರೆ
ಭಾಮಿನಿ, ಸುಗುಣೆ ಕಾಮಿನಿ(೫)
ಕಡಲ ಶಾಯಿ ತಡೆದರಿನ್ನು
ದಿಡುಗು ದೇಹ ಬಿಡುವೆನೆಂಬೊ
ನುಡಿಯ ಕೇಳಿ ಪಿಡಿದನೆ, ಬಿಡದೆ
ರುಗ್ಮಿಣಿ, ಸುಪದ್ಮ ಗಂಧಿನಿ (೬)
ಮಂದರಧರನು ಪ್ರೀತಿ-ಯಿಂದ
ನಿನ್ನ ಪಡೆದನೇನೆ, ಒಂದು
ಮಣಿಯ ಕಾರಣದಿ ಬಂದೆ
ಭಾಮಿನಿ, ಸುಗುಣೆ ಕಾಮಿನಿ (೭)
ಸುಮ್ಮನೆ ಬಂದವಳಿಗೆ ಬ್ರಹ್ಮ-
ಲಗ್ನದಿ ಬಂದೆನಗೆ ಸಾಮ್ಯವೇನೆ
ಯಾಕೆ ನಿನಗೆ, ಹೆಮ್ಮೆ ರುಗ್ಮಿಣಿ
ಸುಪದ್ಮ ಗಂಧಿನಿ (೮)
ಮಾನಾದಿ ಭಕ್ತಿಯು ಕನ್ಯಾ-ದಾನವು
ಲೋಕದೊಳಗುಂಟು
ಏನು ನಿನ್ನ ತಾತ ಕೊಟ್ಟ
ದೀನ ಭಾಮಿನಿ, ಸುಗುಣೆ ಕಾಮಿನಿ (೯)
ಎನ್ನ ಹಂಗದೆಂದು ಪ್ರಸನ್ನ
ಕೇಳಿ ಶತಧನ್ವನ ಬೆನ್ನಟ್ಟಿ
ಕೊಂದನೇ ನೀ-ಚೆನ್ನ ರುಗ್ಮಿಣಿ
ಸುಪದ್ಮ ಗಂಧಿನಿ (೧೦)
ವೀರ ಅರಸರ ಸ್ವಭಾವ
ಚೋರರ ಕೊಲ್ಲ ಬೇಕೆಂಬೋ ಸಾರ
ಪ್ರೀತಿಯದರಿಂದ ತೋರಿ ಭಾಮಿನಿ
ಸುಗುಣೆ ಕಾಮಿನಿ (೧೧)
ಇಂದ್ರಾದಿ ದೇವತೆಗಳೊಳು
ಸಾಂದ್ರ ಯುದ್ಧವನ್ನೆ ಮಾಡಿ
ವೀಂದ್ರ ಎನಗೆ ಪಾರಿಜಾತತಂದ
ರುಗ್ಮಿಣಿ ಸುಪದ್ಮ ಗಂಧಿನಿ (೧೨)
ವರದ ರಂಗ ಕರದೊಳೆನ್ನ
ಸುರ ಪುಷ್ಪವಿರಲು ನಿನ್ನ
ತ್ವರೆ ಕ್ಲೇಶ ನೋಡಿ ತಂದ
ತರುವ ಭಾಮಿನಿ, ಸುಗುಣೆ ಕಾಮಿನಿ (೧೩)
ನಿಜಳೆಂದು ರಂಗನು ಎನ್ನ
ವಿಜಯ ಯಾತ್ರೆಯಲ್ಲಿ ತನ್ನ
ಭುಜಗಳಿಂ-ದಾಲಂಗಿಸಿದ ಸುಜನೆ
ರುಗ್ಮಿಣಿ, ಸುಪದ್ಮ ಗಂಧಿನಿ (೧೪)
ಅರಸರ ಸ್ವಭಾವ ತಮ್ಮ
ಅರಸೇರ ಮನೆಯೊಳಗಿಟ್ಟು
ಸರಸ ದಾಸೇರಿಂದ್~ ಹೋಗೋದು
ಸ್ಮರಿಸೆ ಭಾಮಿನಿ ,ಸುಗುಣೆ ಕಾಮಿನಿ (೧೫)
ಸಾರವಚನ ಕೇಳಿ ಭಾಮೆ
ಮೋರೆ ಕೆಳಗೆ ಮಾಡುತಿರಲು ನಾರಿ ರುಕ್ಮಿಣಿ
ಭಾಮೆಯರನ್ನು ವೀರ ಕರೆದನು
ತಾ ಸೇರಿ ಮೆರೆದನು (೧೬)
ಮಂಗಳಾಂಗ ಮಹಿಮ
ಕೇಶವಾ-ಲಿಂಗಿಸಿದ ಭೈಷ್ಮಿಯನ್ನು
ತುಂಗ ಗುಣ ಗೋಪೀ ರಮಣ
ರಂಗವಿಠಲನು ಅನಂಗ ಜನಕನು (೧೭)
kaMjanEtrE SuBa maMjuLa gAtre, kuMjaradaMte
gamane, raMjitAMgi niraMjanAMgi ||pa||
dhareya myAle hiriyaLu nA-niralu
lajje toredu nInu
sarasavADOre muraharana karedu
BAmini, suguNe kAmini (1)
patiya prIti enna myAle
atiSayadi iralu jyEShTha
satiyaLEnE nInu nODu matiya
rugmiNi, supadma gaMdhini (2)
oMdu kAladalli dAsi-yiMda
patiyu sarasa vADalu baMdaLEnE
arasi sama-LeMdu BAmini
suguNe kAmini (3)
dAsi samaLu nAnu alla
dOSha mAtanADa bEDa
SrISana dayarASi iralu dAsiye
rugmiNi, supadma gaMdhini (4)
sAre kRutyavAre mADi
dvArAvatiyiMda enna
sAre baMda prItiyu a-pAre
BAmini, suguNe kAmini(5)
kaDala SAyi taDedarinnu
diDugu dEha biDuveneMbo
nuDiya kELi piDidane, biDade
rugmiNi supadma gaMdhini (6)
maMdaradharanu prIti-yiMda
ninna paDedanEne, oMdu
maNiya kAraNadi baMde
BAmini, suguNe kAmini (7)
summane baMdavaLige brahma-
lagnadi baMdenage sAmyavEne
yAke ninage, hemme rugmiNi
supadma gaMdhini (8)
mAnAdi Baktiyu kanyA-dAnavu
lOkadoLaguMTu
Enu ninna tAta koTTa
dIna BAmini, suguNe kAmini (9)
enna haMgadeMdu prasanna
kELi Satadhanvana bennaTTi
koMdanE nI-cenna rugmiNi
supadma gaMdhini (10)
vIra arasara svaBAva
cOrara kolla bEkeMbO sAra
prItiyadariMda tOri BAmini
suguNe kAmini (11)
iMdrAdi dEvategaLoLu
sAMdra yuddhavanne mADi
vIMdra enage pArijAtataMda
rugmiNi, supadma gaMdhini (12)
varada raMga karadoLenna
sura puShpaviralu ninna
tvare klESa nODi taMda
taruva BAmini, suguNe kAmini (13)
nijaLeMdu raMganu enna
vijaya yAtreyalli tanna
BujagaLiM-dAlaMgisida sujane
rugmiNi, supadma gaMdhini (14)
arasara svaBAva tamma
arasEra maneyoLagiTTu
sarasa dAsEriMd~ hOgOdu
smarise BAmini, suguNe kAmini (15)
sAravacana kELi BAme
mOre keLage mADutiralu nAri rukmiNi
BAmeyarannu vIra karedanu
tA sEri meredanu (16)
maMgaLAMga mahima
kESavA-liMgisida BaiShmiyannu
tuMga guNa gOpI ramaNa
raMgaviThalanu anaMga janakanu (17)
Leave a Reply