Olideyatakamma lakumi

Composer : Shri Shripadarajaru

By Smt.Shubhalakshmi Rao

ಒಲಿದೆ ಯಾತಕಮ್ಮಾ ಲಕುಮಿ ವಾಸುದೇವಗೆ [ಪ]
ಶುದ್ಧ ನೀಲವರ್ಣದ ಮೈಯ ಕಪ್ಪಿನವನಿಗೆ ಹ್ಯಾಗೆ [ಅ.ಪ]

ಹುಟ್ಟಿದ ಮನೆಗಳ ಬಿಟ್ಟು ಕಳ್ಳ-
ದಿಟ್ಟತನದಿ ಗೋಕುಲದಲ್ಲಿ ಬೆಳೆದ |
ಚಟ್ಟಿ ಸಹಿತ ಹಾಲು ಕುಡಿದ-
ಅಲ್ಲಿ ದಿಟ್ಟ ಕಾಳಿಂಗನ ಹೆಡೆಯ ತುಳಿದವನಿಗೆ [೧]

ಗೊಲ್ಲರ ಮನೆಗಳ ಪೊಕ್ಕು-
ಅಲ್ಲಿ ಗುಲ್ಲು ಮಾಡದೆ ಮೊಸರೆಲ್ಲ ಸವಿದ|
ಮೆಲ್ಲನೆ ಸವಿಮಾತನಾಡಿ-ಅಲ್ಲಿ ಎಲ್ಲ
ಸಖಿಯರ ಅಭಿಮಾನಗೇಡಿಗೆ [೨]

ಮಾವನ ಮರ್ದಿಸಿದವಗೆ -ಅಲ್ಲಿ ಸೋಳ
ಸಾಸಿರ ಗೋಪೇರಿಗೆ ಮದುವೆ ಆದವಗೆ |
ಹಾವಿನ ಮ್ಯಾಲೊರಗಿದವಗೆ ಕಾವೇರಿ
ತೀರದ ರಂಗವಿಠ್ಠಲಗೆ [೩]


olide yAtakammA lakumi vAsudEvage [pa]
Suddha nIlavarNada maiya kappinavanige hyAge [a.pa]

huTTida manegaLa biTTu kaLLa-
diTTatanadi gOkuladalli beLeda |
caTTi sahita hAlu kuDida-
alli diTTa kALiMgana heDeya tuLidavanige [1]

gollara manegaLa pokku-
alli gullu mADade mosarella savida|
mellane savimAtanADi-alli ella
saKiyara aBimAnagEDige [2]

mAvana mardisidavage -alli sOLa
sAsira gOpErige maduve Adavage |
hAvina myAloragidavage kAvEri
tIrada raMgaviThThalage [3]

Leave a Reply

Your email address will not be published. Required fields are marked *

You might also like

error: Content is protected !!