Composer : Shri Jagannatha dasaru
Shri Krishnadwaipayana Tirtharu
(Vrindavana at Kusumurthy – near Bheema river)
Aradhana – Jyeshta Shukla Pournima
ಕೃಷ್ಣದ್ವೈಪಾಯನ ಗುರುರಾಯ ಮನೋ
ಭೀಷ್ಟದಾಯಕ ಕರುಣದಿ ಪಿಡಿ ಕೈಯಾ ||ಪ||
ರಾಮಕೃಷ್ಣ ಪವನಾತ್ಮಜಾ ಪಾದ
ತಾಮರಸವ ಧೇನಿಸುವ ಪರಿವ್ರಾಜಾ
ಭೀಮತೀರಗ ಪಿಪ್ಪಲ ಕುಜಾ ಮೂಲ
ಸೀಮೆಯೊಳಗೆ ರಾಜಿಸುವ ಯತಿರಾಜ ||೧||
ಭೇದ ಮತಾಂಬುಧಿ ಚಂದಿರಾ
ಗುರುವೇದವ್ಯಾಸ ಮುನಿವರ ಸುಕುಮಾರಾ
ಸಾಧು ಸದ್ಗುಣಗಣ ಸಾಗರನಾದ
ಬಾದರಾಯಣನಾ ನಾಮದಲಿಪ್ಪ ಧೀರಾ ||೨||
ದೇವ ಜಗನ್ನಾಥವಿಠಲನ ಪಾದ
ಸೇವಕ ಬೇಡುವೆ ಹರಿಮೂರ್ತಿ ಧ್ಯಾನಾ
ಕೇವಲ ಭಕುತಿ ನಿರ್ಮಲ ಜ್ಞಾನ ಕೊಟ್ಟು
ಪಾವನ್ನ ಮಾಡಿ ಪಾಲಿಸೋ ಪ್ರತಿದಿನ ||೩||
kRuShNadvaipAyana gururAya manO
BIShTadAyaka karuNadi piDi kaiyA ||pa||
rAmakRuShNa pavanAtmajA pAda
tAmarasava dhEnisuva parivrAjA
BImatIraga pippala kujA mUla
sImeyoLage rAjisuva yatirAja ||1||
BEda matAMbudhi caMdirA
guruvEdavyAsa munivara sukumArA
sAdhu sadguNagaNa sAgaranAda
bAdarAyaNanA nAmadalippa dhIrA ||2||
dEva jagannAthaviThalana pAda
sEvaka bEDuve harimUrti dhyAnA
kEvala Bakuti nirmala j~jAna koTTu
pAvanna mADi pAlisO pratidina ||3||
Leave a Reply