Jo Jo Rangadhama

Composer : Shri Shripadarajaru

By Smt.Shubhalakshmi Rao

ಜೋ ಜೋ ಜೋ ಜೋ ರಂಗಧಾಮ
ಜೋ ಜೋ ಜೋ ಜೋ ರಣಭೀಮ || ಪ ||

ಜೋ ಜೋ ಭಕ್ತರ ಕಷ್ಟ ನಿರ್ಧೂಮ
ಜೋ ಜೋ ದಶರಥ ರಾಮ ನಿಸ್ಸೀಮ || ಅ.ಪ. ||

ಭೂಮಿಯ ಚಿನ್ನದ ತೊಟ್ಟಿಲ ಮಾಡಿ
ಸೋಮ ಸೂರ್ಯರೆಂಬ ಕಲಶವ ಹೂಡಿ
ನೇಮದಿ ವೇದಗಳ ಸರಪಣಿ ಮಾಡಿ
ಆ ಮಹಾಕಾಶಕ್ಕೆ ಕೊಂಡಿಗಳ ಹಾಕಿ || ೧ ||

ಸರಸಿಜೋದ್ಭವ ಸರಸ್ವತಿ ಭಾರತಿಯರು
ಗರುಡ ಶೇಷ ರುದ್ರರಿವರ ಸತಿಯರು
ಸುರರು ಕಿನ್ನರರು ಕಿಂಪುರುಷ ನಾರದರು
ಪರಿ ಪರಿ ಗೀತದಿ ತುತಿಸಿ ಪಾಡಿದರು || ೨ ||

ವಸುದೇವ ಸುತನಾದ ಮುದ್ದು ಮುರಾರಿ
ಅಸುರೆ ಪೂತನಿಯ ಪ್ರಾಣಾಪಹಾರಿ
ಅಸಮ ಸಾಹಸಮಲ್ಲದೈತ್ಯರ ವೈರಿ
ಶಿಶುವಾಗಿ ದೇವಕೀಗಾನಂದ ತೋರಿ || ೩ ||

ಜಗವನು ಹೊಟ್ಟೆಯೊಳಿಂಬಿಟ್ಟೆ ತ್ರುವ್ವಿ
ಜಗವೆಲ್ಲ ನಿರ್ಮಾಣ ಮಾಡಿದೆ ತ್ರುವ್ವಿ
ನಿಗಮ ಗೋಚರ ನಿತ್ಯಾನಂದನೆ ತ್ರುವ್ವಿ
ಮಗುವೆಂದು ನಾವ್ ತೂಗಬಲ್ಲೆವೆ ತ್ರುವ್ವಿ || ೪ ||

ತಮನ ಮರ್ದಿಸಿ ವೇದತತಿಗಳನು ತಂದೆ
ಸುಮನ ಸರಿಗಾಗಿ ಮಂದರ ಪೊತ್ತು ನಿಂದೆ
ಕ್ಷಮೆಗಾಗಿ ಪೋಗಿ ಹಿರಣ್ಯಕನ ಕೊಂದೆ
ನಮಿಸಿ ಕರೆದರೆ ಕಂಬದಿಂದ್ಹೊರಟು ಬಂದೆ || ೫ ||

ತರಳನಾಗಿ ಬಲಿಯ ದಾನವ ಬೇಡ್ದೆ
ಪರಶು ಧರಿಸಿ ಕ್ಷತ್ರಿಯರ ಸವರಿದೆ
ದುರುಳ ರಾವಣನ ಶಿರವ ಚೆಂಡಾಡಿದೆ
ಚರಿಸಿ ಮನೆಗಳ ಪಾಲು ಮೊಸರನ್ನು ಕುಡಿದೆ || ೬ ||

ಬುದ್ಧನಾಗಿ ಪತಿವ್ರತೆರನಾಳಿದೆಯಲ್ಲ
ಮುದ್ದು ತುರಗವನೇರಿ ಕಲ್ಕ್ಯಾದ್ಯಲ್ಲ
ಪದ್ಮನಾಭ ಸಿರಿ ಭಕ್ತ ವತ್ಸಲ ನಿದ್ರೆಯ
ಮಾಡಯ್ಯ ಶ್ರೀ ರಂಗವಿಠಲ || ೭ ||


jO jO jO jO raMgadhAma
jO jO jO jO raNaBIma || pa ||

jO jO Baktara kaShTa nirdhUma
jO jO daSaratha rAma nissIma || a.pa. ||

BUmiya cinnada toTTila mADi
sOma sUryareMba kalaSava hUDi
nEmadi vEdagaLa sarapaNi mADi
A mahAkASakke koMDigaLa hAki || 1 ||

sarasijOdBava sarasvati BAratiyaru
garuDa SESha rudrarivara satiyaru
suraru kinnararu kiMpuruSha nAradaru
pari pari gItadi tutisi pADidaru || 2 ||

vasudEva sutanAda muddu murAri
asure pUtaniya prANApahAri
asama sAhasamalla daityara vairi
SiSuvAgi dEvakIgAnaMda tOri || 3 ||

jagavanu hoTTeyoLiMbiTTe truvvi
jagavella nirmANa mADide truvvi
nigama gOcara nityAnaMdane truvvi
maguveMdu nAv tUgaballeve truvvi || 4 ||

tamana mardisi vEdatatigaLanu taMde
sumana sarigAgi maMdara pottu niMde
kShamegAgi pOgi hiraNyakana koMde
namisi karedare kaMbadiMd~horaTu baMde || 5 ||

taraLanAgi baliya dAnava bEDde
paraSu dharisi kShatriyara savaride
duruLa rAvaNana Sirava ceMDADide
carisi manegaLa pAlu mosarannu kuDide || 6 ||

buddhanAgi pativrateranALideyalla
muddu turagavanEri kalkyAdyalla
padmanABa siri Bakta vatsala nidreya
mADayya SrI raMgaviThala || 7 ||

Leave a Reply

Your email address will not be published. Required fields are marked *

You might also like

error: Content is protected !!