Composer : Shri Shripadarajaru
Shri Sripadarajaru: 1404-1502
kAle phalati surudrumaH chintAmaNir api yAchane daataa |
varshati sakalamabhIShTaM darshana mAtrAt shrIpAdarAn muni: ||
Ashrama Gurugalu : Sri Svarnavarna Tirtharu
Ashrama Shishyaru: Sri Hayagreeva Tirtharu
Aradhane : Jyeshta Shukla Chaturdashi
Ankita: Ranga vittala
Vrundavana: Mulabagilu
ಇಟ್ಹಾಂಗೆ ಇರುವೆನೊ ಹರಿಯೇ ಎನ್ನ ದೊರೆಯೇ ||ಪ||
ಸೃಷ್ಟಿವಂದಿತ ಪಾದಪದುಮ ಶ್ರೀಹರಿಯೇ ||ಅ.ಪ||
ಸಣ್ಣ ಶಾಲ್ಯೋದನ ಬೆಣ್ಣೆ ಕಾಸಿದ ತುಪ್ಪ
ಚಿನ್ನದ ಹರಿವಾಣದಲಿ ಭೋಜನ
ಘನ್ನಮಹಿಮ ನಿನ್ನ ಕರುಣ ತಪ್ಪಿದ ಮ್ಯಾಲೆ ಕ-
ದನ್ನಕೆ ಬಾಯ್ಬಿಡಿಸುವಿ ಹರಿಯೇ ||೧||
ಕೆಂಪಿಲಿ ಪೊಳೆವ ಪೀತಾಂಬರ ಉಡಿಸುವಿ
ಸೊಂಪಿನಂಚಿನ ಶಾಲ್ ಹೊದಿಸುವಿಯೋ
ಕಪಿಲಹರೇ ನಿನ್ನ ಕೃಪೆಯು ತಪ್ಪಿದ ಮ್ಯಾಲೆ
ಕೌಪೀನ ದೊರೆಯದೊ ಪೀನಕಿ ವಂದ್ಯನೆ ||೨||
ಚಂದ್ರಶಾಲೆ ಚಂದ್ರಕಿರಣದಿಂದೊಪ್ಪುವ
ಚಂದದ ಮಂಚದೊಳ್ ಮಲಗಿಸುವಿ
ಮಂದರೋದ್ಧರ ನಿನ್ನ ಮಮತೆ ತಪ್ಪಲು ಧರ್ಮ-
ಮಂದಿರದಿ ತೋಳ್ತಲೆದಿಂಬು ಮಾಡಿಸುವಿ ||೩||
ನರಯಾನದೊಳು ಕ್ಷಣ ನರವರನೆನಿಸುವಿ
ವರಛತ್ರ ಚಾಮರ ಹಾಕಿಸುವಿ
ಕರುಣಾನಿಧೇ ನಿನ್ನ ಕರುಣ ತಪ್ಪಿದ ಮ್ಯಾಲೆ
ಚರಣಾಭರಣ ಪಾದ ರಕ್ಷೆಯು ದೊರೆಯದು ||೪||
ಗಂಗಾಜನಕ ಪಾಂಡುರಂಗ ನಿನ್ನಯ ಭಕ್ತ
ಸಂಗವಿರಲಿ ದುಷ್ಟ ಸಂಗ ಬ್ಯಾಡ
ಅಂಗನೆಯರ ಕೂಡಿ ಅನಂಗಬಾಣಕೆ ಸಿಲುಕಿ
ಭಂಗ ಪಟ್ಟೇನೊ ಕಾಯೊ ರಂಗವಿಠಲರೇಯ ||೫||
iT~hAMge iruveno hariyE enna doreyE ||pa||
sRuShTivaMdita pAdapaduma SrIhariyE ||a.pa||
saNNa SAlyOdana beNNe kAsida tuppa
cinnada harivANadali BOjana
Gannamahima ninna karuNa tappida myAle ka-
dannake bAybiDisuvi hariyE ||1||
keMpili poLeva pItAMbara uDisuvi
soMpinaMcina SAl hodisuviyO
kapilaharE ninna kRupeyu tappida myAle
kaupIna doreyado pInaki vaMdyane ||2||
caMdraSAle caMdrakiraNadiMdoppuva
caMdada maMcadoL malagisuvi
maMdarOddhara ninna mamate tappalu dharma-
maMdiradi tOLtalediMbu mADisuvi ||3||
narayAnadoLu kShaNa naravaranenisuvi
varaCatra cAmara hAkisuvi
karuNAnidhE ninna karuNa tappida myAle
caraNAbharaNa pAda rakSheyu doreyadu ||4||
gaMgAjanaka pAMDuraMga ninnaya Bakta
saMgavirali duShTa saMga byADa
aMganeyara kUDi anaMgabANake siluki
BaMga paTTEno kAyo raMgaviThalarEya ||5||
Leave a Reply