Composer : Shri Shripadarajaru
ಎಲ್ಲ್ಯಾಡಿ ಬಂದ್ಯೋ ಎನ್ನ ಕೃಷ್ನಯ್ಯ
ನೀನೆಲ್ಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ
ಬಾಲಯ್ಯ ನೀ ಎನ್ನ ಕಣ್ಣಮುಂದಾಡದೆ [ಪ]
ಆಲಯದೊಳಗೆ ನೀನಾಡದೆ ಚಿನಿ-ಪಾಲು
ಸಕ್ಕರೆ ನೀನೊಲ್ಲದೆ ಚಿಕ್ಕ ಬಾಲೆರಿಂದೊಡ
ಗೂಡಿ ಆಡದೆ ಮುದ್ದು ಬಾಲಯ್ಯ ನೀ
ಎನ್ನ ಕಣ್ಣ ಮುಂದಾಡದೆ [೧]
ಬಟ್ಟ್ಟಮುತ್ತಿನ ಬೊಗಸೆ ಕಂಗಳು
ಫಣೆಯೊ-ಳಿಟ್ಟ ಕಸ್ತೂರಿ ತಿಲಕದಂದವು
ದಿಟ್ಟತನದಿ ಕೂಡ್ಯಾಡಲು ಪುಟ್ಟ ಕೃಷ್ಣಯ್ಯ
ನೀ ಎನ್ನ ಕಣ್ಣ ಮುಂದಾಡದೆ [೨]
ಅಷ್ಟ ದಿಕ್ಕಿಲಿ ಅರಸಿ ಕಾಣದೆ ನಾ
ದೃಷ್ಟಿಗೆಟ್ಟೆನೊ ನಿನ್ನ ನೋಡದೆ ಇ-
ನ್ನೆಷ್ಟು ಹೇಳಲಿ ಕೇಳಬಾರದೆ ರಂಗ-
ವಿಠ್ಠಲ ನೀ ಎನ್ನ ಕಣ್ಣ ಮುಂದಾಡದೆ [೩]
ellyADi baMdyO enna kRuShnayya
nInellyADi baMdyO enna raMgayyA
bAlayya nI enna kaNNamuMdADade [pa]
AlayadoLage nInADade cini-pAlu
sakkare nInollade cikka bAleriMdoDa
gUDi ADade muddu bAlayya nI
enna kaNNa muMdADade [1]
baTTTamuttina bogase kaMgaLu
phaNeyo-LiTTa kastUri tilakadaMdavu
diTTatanadi kUDyADalu puTTa kRuShNayya
nI enna kaNNa muMdADade [2]
aShTa dikkili arasi kANade nA
dRuShTigeTTeno ninna nODade i-
nneShTu hELali kELabArade raMga-
viThThala nI enna kaNNa muMdADade [3]
Leave a Reply