Composer : Shri Shripadarajaru
ಬದರಿ ನಾರಾಯಣನ ಎದುರು ನೋಡಲು ಹೋಗೆ
ಇದು ಮಾರ್ಗ ಇದು ಮಾರ್ಗ ಸುಲಭ ನಮಗೆ [ಪ]
ಅಜ್ಞಾನ ಛಳಿಗಾಳಿ ಅತಿಯಾದ ಮಂಜು ಮಳೆ |
ಸುಜ್ಞಾನ ಸೂರ್ಯೋದಯದಿ ನೀ ಕಳಿ ||
ಮಗ್ನವಾಗದೆ ಮನೆ ಮಾಳಿಗೆ ಖೋಲಿಯಲಿ
ಯಜ್ಞ ಪುರುಷನ ದಯದಲಿ ವೊದಲು ||೧||
ಹಿರಿಯರಾಶೀರ್ವಾದ ಚರಣ ಸೇವೆಯೆ ಮದ್ದು |
ಹಿರಿಯರಾದವರದು ಜರಿ ಶಾಲು ಹೊದ್ದು ||
ಪರಮ ಶಿವ ಭಕ್ತಿಯೆಂಬ ಸುರುಳಿ ಹೋಳಿಗೆ ಮೆದ್ದು
ಜರಸಂಧಗರಿ ಎಂಬ ಕೋಲ ಪಿಡಿದೆದ್ದು ಮುದ್ದು ||೨||
ಅಕ್ಷಯ ತದಿಗೆಯ ದಿನ ಲಕ್ಷ ನಾಮಧಿಕನ್ನ
ಲಕ್ಷಣದಿ ದರುಶನ ಇದು ಚೆನ್ನ ||
ಪಕ್ಷಿರಾಜಾಗಮನ ಕುಕ್ಷಿಯೊಳು ಜಗವನ್ನ
ರಕ್ಷಿಸುವ ರುಕ್ಮಿಣಿರನ್ನ ಪ್ರಸನ್ನ ||೩||
ಉದ್ಧವ ಕುಬೇರ ನಾರದ ಗರುಡ ಗಜವದನ |
ನರ ನಾರಾಯಣರು ಲಕುಮಿ ಸಹಿತ ||
ಮಧ್ವ ಮತದಾ ಮುಕುಟ ಶಿಖರ ಮಾಣಿಕವೆನಿಪ
ಮಧ್ವಂಭಜ ಪೂಜಿತ ಖ್ಯಾತ ||೪||
ಗಂಗೆಯಲಿ ಮೈತೊಳೆದು ಗಂಗೆ ದೇವಿಗೆ ನಮಿಸಿ |
ಗಂಗೆ ದೇವಿಯ ಪೂರ್ಣ ಕರುಣ ಪಡೆದೂ ||
ಗಂಗೆ ಪಿತ ರಂಗವಿಠ್ಠಲನ ಮನದಲಿ ನೆನೆದು
ಗಂಗೆ ಬರುತಿಹ ದಾರಿ ಹಿಡಿದು ನಡೆದೂ ||೫||
badari nArAyaNana eduru nODalu hOge
idu mArga idu mArga sulaBa namage [pa]
aj~jAna ChaLigALi atiyAda maMju maLe |
suj~jAna sUryOdayadi nee kaLi ||
magnavAgade mane mALige khOliyali
yaj~ja puruShana dayadali vodalu ||1||
hiriyarASIrvAda caraNa sEveye maddu |
hiriyarAdavaradu jari SAlu hoddu ||
parama Siva BaktiyeMba suruLi hOLige meddu
jarasaMdhagari eMba kOla piDideddu muddu ||2||
akShaya tadigeya dina lakSha nAmadhikanna
lakShaNadi daruSana idu cenna ||
pakShirAjAgamana kukShiyoLu jagavanna
rakShisuva rukmiNiranna prasanna ||3||
uddhava kubEra nArada garuDa gajavadana |
nara nArAyaNaru lakumi sahita ||
madhva matadA mukuTa SiKara mANikavenipa
madhvaMbhaja pUjita KyAta ||4||
gaMgeyali maitoLedu gaMge dEvige namisi |
gaMge dEviya pUrNa karuNa paDedU ||
gaMge pita raMgaviThThalana manadali nenedu
gaMge barutiha dAri hiDidu naDedU ||5||
Leave a Reply