Vandisuve guru Satyasandha

Composer : Shri Jagannatha dasaru

By Smt.Shubhalakshmi Rao

Sri Satyasandha Tirtharu, 1783 – 1794
Vrundavana – Mahishi
Aradhane – Jyeshta Shukla Dvitiya
ವಿಷ್ಣೋ: ಪದಶ್ರಿದ್ಗೋವ್ರಾತೈ: ಸ್ವಾಂತಧ್ವಾಂತನಿವಾರಕ: |
ಶ್ರೀಸತ್ಯಸಂಧಸೂರ್ಯೋ ಯಂ ಭಾಸತಾಂ ನೋ ಹೃದಂಬರೇ ||
विष्णो: पदश्रिद्गोव्रातै: स्वांतध्वांतनिवारक: ।
श्रीसत्यसंधसूर्यो यं भासतां नो हृदंबरे ॥


ವಂದಿಸುವೆ ಗುರು ಸತ್ಯಸಂಧ ಮುನಿಯಾ
ವೃಂದಾವನಕೆ ಹರುಷದಿಂದ ಎಂದೆಂದು [ಪ]

ಗಂಗಾ ಪ್ರಯಾಗ ಗಯಾ ಶ್ರೀಶೈಲಹೋಬಲ ಭು
ಜಂಗಾದ್ರಿ ಮೊದಲಾದ ಕ್ಷೇತ್ರಗಳನು
ಇಂಗಿತಜ್ಞರ ಸಹಿತ ಸಂಬಂಧಿಸಿ ವರಮಹಿಷಿ
ತುಂಗಾತಟದಿ ವಾಸವಾಗಿಪ್ಪ ಯತಿವರಗೆ [೧]

ಭೂದೇವನುತ ಸತ್ಯಬೋಧ ಮುನಿವರ ಕರ
ವೇದಿಕದೊಳುದ್ಭವಿಸಿದ ಕಲ್ಪವೃಕ್ಷ
ಸಾಧುಜನರಿಗೆ ಬೇಡಿದಿಷ್ಟಾರ್ಥಗಳ
ಮೋದದಿ ಕೊಡುವ ಮಹಿಮರನು ಕಂಡು [೨]

ಶ್ರೀ ಮನೋರಮನ ಅತಿವಿಮಲತರ ಶಾಸ್ತ್ರ
ನಾಮಾವಳಿಗೆ ಸುವ್ಯಾಖ್ಯಾನ ರಚಿಸಿ
ಧೀಮಂತ ಜನರಿಗುಪದೇಶಿಸಿದ ನಿರಂತರ
ಧಾಮ ಜಗನ್ನಾಥ ವಿಠ್ಠಲನೊಲುಮೆ ಪಡೆದವರಿಗೆ [೩]


vaMdisuve guru satyasaMdha muniyA
vRuMdAvanake haruShadiMda eMdeMdu [pa]

gaMgA prayAga gayA SrISailahObala Bu
jaMgAdri modalAda kShEtragaLanu
iMgitaj~jara sahita saMbaMdhisi varamahiShi
tuMgAtaTadi vAsavAgippa yativarage [1]

BUdEvanuta satyabOdha munivara kara
vEdikadoLudBavisida kalpavRukSha
sAdhujanarige bEDidiShTArthagaLa
mOdadi koDuva mahimaranu kaMDu [2]

SrI manOramana ativimalatara SAstra
nAmAvaLige suvyAKyAna racisi
dhImaMta janarigupadESisida niraMtara
dhAma jagannAtha viThThalanolume paDedavarige [3]

Leave a Reply

Your email address will not be published. Required fields are marked *

You might also like

error: Content is protected !!