Sathyabodhara kanda yativarya

Composer : Shri Gurugovinda dasaru

By Smt.Shubhalakshmi Rao

Sri Satyasandha Tirtharu, 1783 – 1794
Vrundavana – Mahishi
Aradhane – Jyeshta Shukla Dvitiya
ವಿಷ್ಣೋ: ಪದಶ್ರಿದ್ಗೋವ್ರಾತೈ: ಸ್ವಾಂತಧ್ವಾಂತನಿವಾರಕ: |
ಶ್ರೀಸತ್ಯಸಂಧಸೂರ್ಯೋ ಯಂ ಭಾಸತಾಂ ನೋ ಹೃದಂಬರೇ ||
विष्णो: पदश्रिद्गोव्रातै: स्वांतध्वांतनिवारक: ।
श्रीसत्यसंधसूर्यो यं भासतां नो हृदंबरे ॥


ಸತ್ಯ ಬೋಧರ ಕಂಡ | ಯತಿವರ್ಯ
ಸತ್ಯಸಂಧ ಕೃತ್ಯ ನಿಮ್ಮದು ಆನಂದಾ [ಪ]

ಸ್ತುತ್ಯ ಯತ್ಯಾಶ್ರಮವ ವಹಿಸುತ
ಪ್ರತ್ಯಹರ್ ಸಚ್ಚಾಸ್ತ್ರ ಬೋಧಕ
ಪ್ರತ್ಯರ್ಥಿ ಮಾಯ್ಗಳ ಖಂಡಿಸುತ
ಭೃತ್ಯ ಜನಕಭೀಷ್ಟ ಗರೆವಾ [ಅ.ಪ]

ಗಂಗೆಮೀಯಲು ಸಾಧು ಸಂಗದಿ
ತೆರಳುತ್ತ ಅಂಗಜಾರಿಯ ಪುರದೀ |
ಮಂಗಳಾಂಗನು ಹರಿಪದಾಬ್ಜದಿ
ಬೃಂಗರೆನಿಸುತ ಪೂಜೆ ಗೈಯ್ಯಲು
ರಂಗ ಹರಿ ಪಾದಾರವಿಂದವ
ಕಂಗಳಿಂದಲಿ ಕಂಡ ಯತಿಯ [೧]

ಗಯ ಗಧಾದರ ನಂಘ್ರಿ ಪ್ರಿಯದಿಂದ
ಭಜಿಸಲು ನಯಸುತ್ತ ಪರಿವಾರವಾ |
ಮಾಯಿಗಳ ದುರ್ವಾದ ಖಂಡಿಸಿ
ಹೇಯಮತ ವಿಧ್ವಂಸ ಗೈಯ್ಯುತ
ರಾಯ ದಶರಥ ಸುತನು ರಾಮಗೆ
ಜಯದ ಪತ್ರಾರ್ಪಿಸಿದ ಮಹಿಮ [೨]

ವಿಷ್ಣುಪಾದವ ಮನ ಮುಟ್ಟಿ
ಭಜಿಸಲು ಪೋಗೆ ದುಷ್ಟರು ಗಯಾವಾಳರು |
ದಿಟ್ಟತನದಲಿ ಕದವಮುಚ್ಚಲು |
ಶ್ರೇಷ್ಠ ಯತಿಗಳ ಭಕ್ತಿಗೊಲಿಯುತ
ಥಟ್ಟನೇ ಕದ ತೆರೆಯಲಂದಿನ
ಅಟ್ಟಹಾಸದಿ ಪೂಜೆಗೈದ [೩]

ಭಾಳ ಲಜ್ಜೆಲಿ ಗಯವಾಳರು ಶರಣೆನ್ನೆ
ಲಾಲಿಸ್ಯವರ ಭಿನ್ನಪ |
ಮೂಲರಾಮರ ಸೇವೆಯನು
ಗಯೆವಾಳರೆಲ್ಲರು ಮಾಡಲೆನುತ
ಲೀಲೆಯಿಂ ಮುದ್ರಾಂಕ ಗೈದ
ಘಜಾಲವನು ತಾ ಕಳೆದ ಯತಿಯ [೪]

ತುಂಗ ವಿಕ್ರಮ ನಮ್ಮ ಸಂಗೀತ
ಲೋಲನ ಮಂಗಳುಡುಪಿಲಿ ದರ್ಶಿಸಿ |
ತುಂಗ ತಟವೆನೆ ಮಹಿಷಿ ಕ್ಷೇತ್ರದಿ
ಅಂಗ ವೃಂದಾವನವ ಪೊಗಿಸುತ
ರಂಗ ಗುರು ಗೋವಿಂದ ವಿಠಲನ
ಮಂಗಳ ಧ್ಯಾನದಲಿ ಇರುತಿಹ [೫]


satya bOdhara kaMDa | yativarya
satyasaMdha kRutya nimmadu AnaMdA [pa]

stutya yatyASramava vahisuta
pratyahar saccAstra bOdhaka
pratyarthi mAygaLa KaMDisuta
BRutya janakaBIShTa garevA [a.pa]

gaMgemIyalu sAdhu saMgadi
teraLutta aMgajAriya puradI |
maMgaLAMganu haripadAbjadi
bRuMgarenisuta pUje gaiyyalu
raMga hari pAdAraviMdava
kaMgaLiMdali kaMDa yatiya [1]

gaya gadhAdara naMGri priyadiMda
Bajisalu nayasutta parivAravA |
mAyigaLa durvAda KaMDisi
hEyamata vidhvaMsa gaiyyuta
rAya daSaratha sutanu rAmage
jayada patrArpisida mahima [2]

viShNupAdava mana muTTi
Bajisalu pOge duShTaru gayAvALaru |
diTTatanadali kadavamuccalu |
SrEShTha yatigaLa Baktigoliyuta
thaTTanE kada tereyalaMdina
aTTahAsadi pUjegaida [3]

bhALa lajjeli gayavALaru SaraNenne
lAlisyavara Binnapa |
mUlarAmara sEveyanu
gayevALarellaru mADalenuta
lIleyiM mudrAMka gaida
GajAlavanu tA kaLeda yatiya [4]

tuMga vikrama namma saMgIta
lOlana maMgaLuDupili darSisi |
tuMga taTavene mahiShi kShEtradi
aMga vRuMdAvanava pogisuta
raMga guru gOviMda viThalana
maMgaLa dhyAnadali irutiha [5]

Leave a Reply

Your email address will not be published. Required fields are marked *

You might also like

error: Content is protected !!