Composer : Shri Tande Venkatesha Vittala
ಮನ್ನಿಸೋ ಮೋಹನ್ನ ಗುರುವೇ
ಧನ್ಯಾಪನ್ನ ಜನಾಮರತರುವೇ |ಪ|
ಶೂನ್ಯಮತಾರಣ್ಯ ವಹ್ನಿ ಸಮೀರ ಮ
ಹೋನ್ನತಿಯನ್ನು ತಿಳಿಸಿ ಎನ್ನನುದ್ಧರಿಸೋ [ಅ.ಪ]
ಭೃಗುಮುನಿ ಪಾದಾಬ್ಜ ಭ್ರಮರ -ಸೂತ್ರ
ನಿಗಮಾರ್ಥವಾಚನ ಚತುರ
ಬಿಗಡ ಮಾಂಡವ್ಯಾದಿ ಬಗೆ ಬಗೆ ರೂಪಾಂತ್ಯ
ಯುಗದಿ ಹರಿದಾಸ ಪೀಳಿಗೆಯಾಳುದ್ಭವಿಸಿ
ಅಘಕುಲಾಚಲ ಮಘವನೆನಿಪಹಿ
ನಗ ನಿವಾಸನ ಯುಗಳ ಪದದೊಗು
ಮಿಗೆಯ ಮಹಿಮಾದಿಗಳ ಕಾವ್ಯದಿ
ನೆಗಳಿ ತೋರ್ದುದ ಪೊಗಳಲಳವೇ |೧|
ಭಾವಜನಿಭರೂಪೋತ್ಕರನೇ -ಬುಧ ಸಂ
ಭಾವಿತ ಪದಯುಗ್ಮಧರನೇ
ಕೇವಲ ಸದ್ಭಕ್ತಿ ಭಾವದಿ ವಿಜಯಾಖ್ಯ
ದೇವಮುನಿಗಳ ಪಾದ ಸೇವಿಸುತನಿಶಾ
ಭೂವಧೂವಲ್ಲಭನ ಸರಸ ಗು
ಣಾವಳಿಗಳನು ಕವನರೂಪದಿ
ಕೋವಿದರು ಸಲೆಮೆಚ್ಚಿ ಕೀರ್ತಿಸಿ
ಪಾವನಾತ್ಮಕನಾಗಿ ಮೆರೆದೇ |೨|
ಅಕ್ಷರೇಡ್ಯನ ಪಾದಪದುಮಾ ಅಪ
ರೋಕ್ಷೀ ಕರಿಸಿಕೊಂಡ ಮಹಿಮಾ
ಈ ಕ್ಷಿತಿಯೊಳು ದಾಸವೃಕ್ಷವು ನಿಮ್ಮಯಾ
ಪೇಕ್ಷೆಯಿಂದಲೆ ಇನಿತು ಆಕ್ಷಯವಾಗಿದೆ
ದೀಕ್ಷೆಯುತರಿಗೆ ನಿಮ್ಮನುಗ್ರಹ
ಮೋಕ್ಷ ಕಾರಣವಹುದು ದಿಟ ಉತ್
ಪ್ರೇಕ್ಷೆಯಿಲ್ಲವೋ ತಂದೆ ವೆಂಕಟೇಶ
ವಿಠ್ಠಲನ ಪಾದಸಾಕ್ಷಿ ನುಡಿದೇ |೩|
mannisO mOhanna guruvE
dhanyApanna janAmarataruvE |pa|
SUnyamatAraNya vahni samIra ma
hOnnatiyannu tiLisi ennanuddharisO [a.pa]
BRugumuni pAdAbja Bramara -sUtra
nigamArthavAcana catura
bigaDa mAMDavyAdi bage bage rUpAMtya
yugadi haridAsa pILigeyALudBavisi
aGakulAcala maGavanenipahi
naga nivAsana yugaLa padadogu
migeya mahimAdigaLa kAvyadi
negaLi tOrduda pogaLalaLavE |1|
BAvajaniBarUpOtkaranE -budha saM
BAvita padayugmadharanE
kEvala sadBakti BAvadi vijayAKya
dEvamunigaLa pAda sEvisutaniSA
BUvadhUvallaBana sarasa gu
NAvaLigaLanu kavanarUpadi
kOvidaru salemecci kIrtisi
pAvanAtmakanAgi meredE |2|
akSharEDyana pAdapadumA apa
rOkShI karisikoMDa mahimA
I kShitiyoLu dAsavRukShavu nimmayA
pEkSheyiMdale initu AkShayavAgide
dIkSheyutarige nimmanugraha
mOkSha kAraNavahudu diTa ut
prEkSheyillavO taMde veMkaTESa
viThThalana pAdasAkShi nuDidE |3|
Leave a Reply