Kande kandeno kangalali

Composer : Shri Vijayadasaru

By Smt.Shubhalakshmi Rao

Shri Vadeendra Tirtharu : 1728-1750
Ashrama Gurugalu – Sri Upendra Tirtharu
Ashrama Shishyaru – Sri Varadendra Tirtharu
Vrundavana @ MANTRALAYA
ವಂದಾರುಜನಸಂದೋಹಮಂದಾರತರುಸನ್ನಿಭಮ್ |
ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಮ್
vaMdaarujanasaMdOhamaMdaaratarusannibham |
vRuMdaarakagurupraKyaM vaMdE vaadIMdradEshikam


ಕಂಡೆ ಕಂಡೆನೊ ಕಂಗಳಲಿ ಭೂ |
ಮಂಡಲದೊಳು ಮೆರೆವ ಯತಿಗಳ
ಮಂಡಲಾಬ್ಧಿಗೆ ಸೋಮನೆನಿಪ ಅ |
ಖಂಡ ಮಹಿಮಾ ವಾದೇಂದ್ರ ಗುರುಗಳ [ಪ]

ನಸುನಗಿಯ ಮೊಗ | ಪಸರಿಸಿದಾ
ದ್ವಾದಶನಾಮಗಳು ಶ್ರೀ
ಮುದ್ರೆ ಮುದದಿಂದ |
ನೊಸಿಲಿಲೊಪ್ಪುವ ಗಂಧ ಅಕ್ಷತಿ
ಎಸೆವ ಸಣ್ಣಂಗಾರ ಕಿವಿಯಲಿ
ಹಸನಾದ ಎಳೆ ತುಲಸಿ ಶೋಭಿಸಿ |
ಬೆಸಸುವ ಒಂದೊಂದು ಮಾತಾ |
ಲಿಸಿದರದು ವೇದಾರ್ಥತುಲ್ಯಾ |
ಲಸವ ಗೈಯಿಸದೆ ಬರುವ ಗುರುಗಳ (೧)

ಮೊಸಳಿವಾಯಪಲಕ್ಕಿ ಸುತ್ತಾ ಭಾ |
ರಿಸುವ ನಾನ ವಾದ್ಯಾದಾ ಘೋಷಾ |
ಪುಸಿಕರೆದೆದಲ್ಲಣರು ಎಂಬಾ |
ದಶ ದಿಕ್ಕಿನೊಳು ಕೀರ್ತಿ ತುಂಬಿರೆ |
ಶಿಶುವು ಮೊದಲಾದವರು ತಮ ತಮ |
ಬೆಸನೆ ಪೇಳಲು ಕೇಳಿ ಅವರು |
ಬ್ಬಸವ ಕಳದಿಷ್ಟಾರ್ಥ ತೋರುವ
ಋಷಿಕುಲೋತ್ತಮರಾದ ಗುರುಗಳ (೨)

ಶ್ವಶನ ಮತ ವಾರಿಧಿಗೆ ಪೂರ್ಣ |
ಶಶಿ ಎನಿಸಿಕೊಂಬ ಧೀರುದಾರರೆ |
ಅಸಮ ತತ್ವ ಪ್ರಮೆಯದಲಿ ನಿರ್ಮಿಸಿದನೆ |
ಲೋಕೇಶ ಇವರನ್ನ ವಸುಧಿ ಅಮರರು |
ಪ್ರಸರ ಎಡಬಲ ಎಸದು ತುತಿಸಲು ಹಿಗ್ಗಿ ಕರುಣಾ |
ರಸಭರಿತರಾಗಿ ನೋಡುತ್ತ ಮಾ |
ಸನದಿ ಹರಿಪದ ಭಜಿಪ ಗುರುಗಳ (೩)

ಕುಸುಮಶರನ ಬಾಣವನು ಖಂಡ್ರಿಸಿ
ಬಿಸುಟ ಸಂಪನ್ನ ವಿದ್ಯಾ |
ವಸುವಿನಲಿ ಆವಾಗ ತಲೆ ತೂ |
ಗಿಸುವರು ಪಂಡಿತರ ಮೆಚ್ಚಿಸಿ |
ವಶವೆ ಪೊಗಳಲು ಎನಗೆ ಇವರ ದ |
ರುಶನದಿಂದಲಿ ಗತಿಗೆ ಪಥನಿ |
ವಿಷದೊಳಗೆ ಇದು ಸಿದ್ಧವೆಂದು ವಂ |
ದಿಸಿದಿರೊ ಮರೆಯದೆ ಈ ಗುರುಗಳಾ (೪)

ಮಿಸುಣಿಪ ಮಂಟಪದೊಳಗೆ ರಂ |
ಜಿಸುವ ರಾಮನ ಕುಳ್ಳಿರಿಸಿ ಅ |
ರ್ಚಿಸುವ ಚಿತ್ತೇಕಾಗ್ರದಲಿ ವೊ |
ಲಿಸುವ ತಂತ್ರ ಸಾರೋಕ್ತ ಬಗೆಯನು |
ಕುಶಲರಾದ ಉಪೇಂದ್ರ ಮುನಿಕರ |
ಬಿಸಜದಿಂದಲಿ ಜನಿಸಿ ಭಕುತಿಲಿ |
ಅಸುರರಿಪು ಸಿರಿ ವಿಜಯವಿಠ್ಠಲನ್ನ |
ಪೆಸರುಗಳು ಎಣಿಸುವ ಗುರುಗಳ (೫)


kaMDe kaMDeno kaMgaLali BU |
maMDaladoLu mereva yatigaLa
maMDalAbdhige sOmanenipa a |
KaMDa mahimA vAdEMdra gurugaLa [pa]

nasunagiya moga | pasarisidA
dvAdaSanAmagaLu SrI
mudre mudadiMda |
nosililoppuva gaMdha akShati
eseva saNNaMgAra kiviyali
hasanAda eLe tulasi SOBisi |
besasuva oMdoMdu mAtA |
lisidaradu vEdArthatulyA |
lasava gaiyisade baruva gurugaLa (1)

mosaLivAyapalakki suttA BA |
risuva nAna vAdyAdA GOShA |
pusikarededallaNaru eMbA |
daSa dikkinoLu kIrti tuMbire |
SiSuvu modalAdavaru tama tama |
besane pELalu kELi avaru |
bbasava kaLadiShTArtha tOruva
RuShikulOttamarAda gurugaLa (2)

SvaSana mata vAridhige pUrNa |
SaSi enisikoMba dhIrudArare |
asama tatva prameyadali nirmisidane |
lOkESa ivaranna vasudhi amararu |
prasara eDabala esadu tutisalu higgi karuNA |
rasaBaritarAgi nODutta mA |
sanadi haripada Bajipa gurugaLa (3)

kusumaSarana bANavanu KaMDrisi
bisuTa saMpanna vidyA |
vasuvinali AvAga tale tU |
gisuvaru paMDitara meccisi |
vaSave pogaLalu enage ivara da |
ruSanadiMdali gatige pathani |
viShadoLage idu siddhaveMdu vaM |
disidiro mareyade I gurugaLA (4)

misuNipa maMTapadoLage raM |
jisuva rAmana kuLLirisi a |
rcisuva cittEkAgradali vo |
lisuva taMtra sArOkta bageyanu |
kuSalarAda upEMdra munikara |
bisajadiMdali janisi Bakutili |
asuraripu siri vijayaviThThalanna |
pesarugaLu eNisuva gurugaLa (5)

Leave a Reply

Your email address will not be published. Required fields are marked *

You might also like

error: Content is protected !!