Dambhakada bhakutiyanu

Composer : Shri Mohana dasaru

By Smt.Shubhalakshmi Rao

ಡಂಭಕದ ಭಕುತಿಯನು ಬಿಡು ಕಂಡ್ಯ ಮನವೆ [ಪ]
ಅಂಬುಜಾಕ್ಷನು ಒಲಿಯ ಅನಂತ ಕಾಲಕ್ಕು [ಅ.ಪ]

ಬಹಿರ ಅಂಗಡಿ ಹೂಡಿ ಜನರ ವಂಚಿಸಿದರೆ
ಅಹಿಕ ಫಲವಲ್ಲದೆ ಮೋಕ್ಷವುಂಟೆ ?
ವಿಹಿತಾ ವಿಹಿತವ ತಿಳಿದು ಸತ್ಕರ್ಮ ಕಿಂಚಿತು ಮಾಡೆ
ದಹಿಸುವುದು ಅಘರಾಶಿ ಅಹಿಶಾಯಿ ಒಲಿವ [೧]

ವರ ವೈಷ್ಣವರು ಬಂದು ನಿಲಲು ವಂದಿಸದಲೆ
ಹರಿ ಪೂಜೆ ಮಾಳ್ಪೆನೆಂದು ಕುಳಿತುಕೊಂಬೆ
ಅರಿಯದ ಊರೊಳಗೆ ಅಗಸರ ಮಾಳಿಯೇ
ಹಿರಿಯ ಮುತ್ತೈದೆಯು ಎಂದು ಕರೆಸುವಂತೆ [೨]

ಜಪವ ಮಾಡುವೆನೆಂದು ಮುಸುಕನಿಟ್ಟು ಕುಳಿತು
ತಪಿಸುವೆ ಒಳಗೆ ನೀ ಧನದಾಸೆಯಿಂದ
ಕುಪಿತ ಬುದ್ಧಿಯ ಬಿಟ್ಟು ಮೋಹನ್ನ ವಿಠ್ಠಲನ
ಗುಪಿತ ಮಾರ್ಗದಿ ಭಜಿಸಿ ಸುಪಥವನುಸರಿಸೆ [೩]


DaMBakada Bakutiyanu biDu kaMDya manave [pa]
aMbujAkShanu oliya anaMta kAlakku [a.pa]

bahira aMgaDi hUDi janara vaMcisidare
ahika Palavallade mOkShavuMTe ?
vihitA vihitava tiLidu satkarma kiMcitu mADe
dahisuvudu aGarASi ahiSAyi oliva [1]

vara vaiShNavaru baMdu nilalu vaMdisadale
hari pUje mALpeneMdu kuLitukoMbe
ariyada UroLage agasara mALiyE
hiriya muttaideyu eMdu karesuvaMte [2]

japava mADuveneMdu musukaniTTu kuLitu
tapisuve oLage nI dhanadAseyiMda
kupita buddhiya biTTu mOhanna viThThalana
gupita mArgadi Bajisi supathavanusarise [3]

Leave a Reply

Your email address will not be published. Required fields are marked *

You might also like

error: Content is protected !!