Gopala paliso

Composer : Shri Vidyaratnakara Tirtharu

By Smt.Shubhalakshmi Rao

Shri Vidyaratnakara Tirtha:
दुर्वादिमत्तनागेंद्र विदारण मृगाधिप: ।
विद्यरत्नाकर गुरुसन्निधत्तां सदाहृदि ।
durvaadimattanaagEndra vidaaraNa mRugaadhipa: |
vidyaratnaakara gurusannidhattaam sadaahRudi |
Vrundavana @ Sosale
Ashrama Period – 1902-1915
Aradhane – Vaishaka Bahula Navami


ಗೋಪಾಲ ಪಾಲಿಸೊ ನಿನ್ನ ಪಾದ
ಸೇವಕನಿವನೆಂದು ನೀ ಭಾವಿಸಿ
ಗೋಪಾಲ ಪಾಲಿಸೊ [ಪ]

ನಾರಿಜನರುಟ್ಟ ಸೀರೆ ಸೆಳೆದು ತಾ
ಭಾರಿ ಮರವನ್ನೇರಿ ವಿನೋದವ
ತೋರಿದ ಸುರರಿಪು ವೈರಿಯೇ ಎನ್ನಯ
ಕೋರಿಕೆ ನಡಸಲಿನ್ಯಾರಿಗೆ ಬೇಡಲೊ (೧)

ತುಂಗ ಫಣಿಫಣ ಶೃಂಗದೊಳು ಚರ
ಣಂಗಳ ಕುಣಿಸಿ ಭುಜಂಗಮವರನಿಗೆ
ಭಂಗ ಪಡಿಸಿ ಕೃಪಾಪಾಂಗದಿ ಸಲಹಿದ
ಮಂಗಳ ಮಹಿಮ ರಥಾಂಗಧರ ಬಾಲ (೨)

ಬಂಧು ಬಳಗ ನೀನೆಂದು ತಿಳಿದು ಮ
ತ್ತೊಂದನೆಣಿಸದೆ ಇಂದಿರಾರಮಣನೆ
ಎಂದೆಂದಿಗೂ ಸಲಹೆಂದು ನಾ ಬೇಡುವೆ
ಮಂದರಧರ ಮುಚುಕುಂದವರದ ಸಿರಿ (೩)

ಖಿನ್ನ ನಿಜ ಜನರನ್ನು ಸಲಹುವ
ಪನ್ನಗ ಶಯನ ಪ್ರಸನ್ನ ಹೃದಯನಾಗಿ
ಎನ್ನ ಮನೋರಥವನ್ನು ಪೂರೈಸುವ
ರನ್ಯರು ಯಾರಯ್ಯ ಚಿನ್ಮಯ ಮೂರುತಿ (೪)

ಕಾಮಜನಕನೆ ನಾಮಗಿರಿ ಸಿರಿ
ಸ್ವಾಮಿ ನೃಸಿಂಹನೆ ಕಾಮಿತ ಕೊಡುವಂಥ
ಕಾಮಧೇನು ಚಿಂತಾಮಣಿ ಎನ್ನಯೋಗ
ಕ್ಷೇಮವು ನಿನ್ನದಯ್ಯ ಸೋಮಕುಲಾಧಿಪ (೫)


gOpAla pAliso ninna pAda
sEvakanivaneMdu nI BAvisi
gOpAla pAliso [pa]

nArijanaruTTa sIre seLedu tA
BAri maravannEri vinOdava
tOrida suraripu vairiyE ennaya
kOrike naDasalinyArige bEDalo (1)

tuMga PaNiPaNa SRuMgadoLu cara
NaMgaLa kuNisi BujaMgamavaranige
BaMga paDisi kRupApAMgadi salahida
maMgaLa mahima rathAMgadhara bAla (2)

baMdhu baLaga nIneMdu tiLidu ma
ttoMdaneNisade iMdirAramaNane
eMdeMdigU salaheMdu nA bEDuve
maMdaradhara mucukuMdavarada siri (3)

Kinna nija janarannu salahuva
pannaga Sayana prasanna hRudayanAgi
enna manOrathavannu pUraisuva
ranyaru yArayya cinmaya mUruti (4)

kAmajanakane nAmagiri siri
svAmi nRusiMhane kAmita koDuvaMtha
kAmadhEnu ciMtAmaNi ennayOga
kShEmavu ninnadayya sOmakulAdhipa (5)

Leave a Reply

Your email address will not be published. Required fields are marked *

You might also like

error: Content is protected !!