Composer : Shri Amba bai
Shri Brahmanya Tirtharu:
Vrundavana – Abbur
ಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |
ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||
Kamsadhwamsi padaambhOja samsaktO hamsapungava: |
brahmaNya gururaajaakYO vartataam mama maanasE ||
Aradhana – Vaishaka Krishna Ekadashi
Ashrama Gurugalu – Sri Purushottama Tirtharu
Ashrama Shishyaru – Sri Vyasarajaru
ಬೇಗ ಪಾಲಿಸೊ ಬ್ರಹ್ಮಣ್ಯತೀರ್ಥ |
ಕರುಣಿಸು ಇಷ್ಟಾರ್ಥ [ಪ.]
ಯೋಗಿವರ ಶ್ರೀ ಅಬ್ಬೂರು ನಿಲಯ |
ಸದ್ಭಕ್ತರಿಗತಿ ಪ್ರಿಯ [ಅ.ಪ.]
ಸತ್ವಗುಣನೆ ಸರ್ವೋತ್ತಮ ಹರಿ ಪ್ರಿಯ |
ಪಾವನ ಶುಭಕಾಯ
ಚಿತ್ತದಲಿ ಹರಿ ಚಿಂತನೆ ಮಾಡುತಲಿ |
ವರಗಳ ನೀಡುತಲಿ
ಆತ್ಯಧಿಕದ ಕಣ್ವ ನದಿಯ ತೀರ ವಾಸ |
ನಿನ್ನಲಿ ಹರಿ ವಾಸ
ಮತ್ತೆ ವ್ಯಾಸರಾಯರಿಗತಿಶಯ ಗುರುವೆ |
ಸುಜನರುಗಳ ಪೊರೆವೆ [೧]
ಆಗಲೆ ಜನಿಸಿದ ಶಿಶುವ ತಾಯಿ ಕೊಡಲು |
ಪ್ರೇಮದಿ ನೀ ಕೊಳಲು
ಸಾಗಿ ಬಂದು ಗುಹೆಯೊಳಗೆ ಇಟ್ಟು ಪೊರೆದೆ |
ಗೋಕ್ಷೀರವನೆರೆದೆ
ಆಗಮಗಳ ಕಲಿಸಲು ಮೌಂಜಿಯ ಕಟ್ಟಿ |
ಶ್ರೀಪಾದರಲಿ ಬಿಟ್ಟೆ
ಯೋಗಿ ವ್ಯಾಸರಾಯರು ಎಂದ್ ಹೆಸರಿಟ್ಟು |
ಸನ್ಯಾಸವನೆ ಕೊಟ್ಟು [೨]
ಪಾಪಿ ಜನರ ಪಾವನಗೈಯುತಲಿ |
ಶ್ರೀನಿಧಿ ಧ್ಯಾನದಲಿ
ಕಾಪಾಡು ಸದ್ಭೃತ್ಯರ ದಯದಿಂದ |
ತಪಸಿನ ಶಕ್ತಿಂದ
ಶ್ರೀಪತಿಯೊಲುಮೆಯ ಶೀಘ್ರದಿ ಪಡೆಯುತಲಿ |
ಶಿಷ್ಟರ ಪೊರೆಯುತಲಿ
ಗೋಪಾಲಕೃಷ್ಣವಿಠ್ಠಲನನು
ಹೃದಯದಲಿ | ನಿತ್ಯದಿ ಕಾಣುತಲಿ [೩]
bEga pAliso brahmaNyatIrtha |
karuNisu iShTArtha [pa.]
yOgivara SrI abbUru nilaya |
sadBaktarigati priya [a.pa.]
satvaguNane sarvOttama hari priya |
pAvana SuBakAya
cittadali hari ciMtane mADutali |
varagaLa nIDutali
Atyadhikada kaNva nadiya tIra vAsa |
ninnali hari vAsa
matte vyAsarAyarigatiSaya guruve |
sujanarugaLa poreve [1]
Agale janisida SiSuva tAyi koDalu |
prEmadi nI koLalu
sAgi baMdu guheyoLage iTTu porede |
gOkShIravanerede
AgamagaLa kalisalu mauMjiya kaTTi |
SrIpAdarali biTTe
yOgi vyAsarAyaru eMd hesariTTu |
sanyAsavane koTTu [2]
pApi janara pAvanagaiyutali |
SrInidhi dhyAnadali
kApADu sadBRutyara dayadiMda |
tapasina SaktiMda
SrIpatiyolumeya SIGradi paDeyutali |
SiShTara poreyutali
gOpAlakRuShNaviThThalananu
hRudayadali | nityadi kANutali [3]
Leave a Reply