Composer : Shri Purandara dasaru
ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ
ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣ (೧)
ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನಗಿರಿಯಲಿ ನಿಂದ
ಕೊಳಲು ಧ್ವನಿಯದೋ ಚಂದ ನಮ್ಮ ಕುಂಡಲರಾಯ ಮುಕುಂದ (೨)
ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದ
ನೀಟುಗಾರ ಗೋವಿಂದ ಅಲ್ಲಿ ಜೇನು ಸಕ್ಕರೆಯನು ತಿಂದ (೩)
ಮೂಡಲ ಗಿರಿಯಲಿ ನಿಂತ ಮುದ್ದು ವೆಂಕಟಪತಿ ಬಲವಂತ
ಈಡಿಲ್ಲ ನಿನಗೆ ಶ್ರೀಕಾಂತ ಈ ಈರೇಳು ಲೋಕಕನಂತ (೪)
ಆಡಿದರೆ ಸ್ಥಿರವಪ್ಪ ಅಬದ್ಧಗಳಾಡಲು ಒಪ್ಪ
ಬೇಡಿದ ವರಗಳನಿಪ್ಪ ನಮ್ಮ ಮೂಡಲಗಿರಿಯ ತಿಮ್ಮಪ್ಪ (೫)
ಅತಿರಸ ಅಪ್ಪವು ಮೆದ್ದ ಸ್ವಾಮಿ ಅಸುರರ ಕಾಲಲಿ ಒದ್ದ
ಸತಿಯರ ಕೂಡ್ಯಾಡುತಲಿದ್ದ ಸ್ವಾಮಿ ಸಕಲ ದುರ್ಜನರನು ಗೆದ್ದ (೬)
ಬಗೆ ಬಗೆ ಭಕ್ಷ್ಯ ಪರಮಾನ್ನ ನಾನಾ ಬಗೆ ಸಕಲ ಶಾಲ್ಯನ್ನ
ಬಗೆ ಬಗೆ ಸೊಬಗು ಮೋಹನ್ನ ನಮ್ಮ ನಗುಮುಖದ ಸುಪ್ರಸನ್ನ (೭)
ಕಾಶಿ ರಾಮೇಶ್ವರದಿಂದ ಅಲ್ಲಿ ಕಾಣಿಕೆ ಬರುವುದು ಚಂದ
ದಾಸರ ಕೂಡೆ ಗೋವಿಂದ ಅಲ್ಲಿ ದಾರಿ ನಡೆಯುವುದೆ ಚೆಂದ (೮)
ಎಲ್ಲಾ ದೇವರ ಗಂಡ ಅವ ಚಿಲ್ಲರೆ ದೈವದ ಮಿಂಡ
ಬಲ್ಲಿದವರಿಗೆ ಉದ್ದಂಡ ಶಿವ ಬಿಲ್ಲ ಮುರಿದ ಪ್ರಚಂಡ (೯)
ಕಾಸು ತಪ್ಪಿದರೆ ಬಡ್ಡಿ ಬಡ್ಡಿ ಕಾಸು ಬಿಡದೆ ಗಂಟು ಕಟ್ಟಿ
ದಾಸನೆಂದರೆ ಬಿಡ ಗಟ್ಟಿ ನಮ್ಮ ಕೇಸಕ್ಕಿ ತಿಮ್ಮಪ್ಪ ಶೆಟ್ಟಿ (೧೦)
ದಾಸರ ಕಂಡರೆ ಪ್ರಾಣ ತಾ ಧರೆಯೊಳಧಿಕ ಪ್ರವೀಣ
ದ್ವೇಷಿಯ ಗಂಟಲ ಗಾಣ ನಮ್ಮ ದೇವಗೆ ನಿತ್ಯ ಕಲ್ಯಾಣ (೧೧)
ಮೋಸ ಹೋಗುವನಲ್ಲಯ್ಯ ಒಂದು ಕಾಸಿಗೆ ಒಡ್ಡುವ ಕಯ್ಯ
ಏಸು ಮಹಿಮೆಗಾರನಯ್ಯ ನಮ್ಮ ವಾಸುದೇವ ತಿಮ್ಮಯ್ಯ (೧೨)
ಚಿತ್ತಾವಧಾನ ಪರಾಕು ನಿನ್ನ ಚಿತ್ತದ ದಯ ಒಂದೇ ಸಾಕು
ಸತ್ಯವಾಹಿನಿ ನಿನ್ನ ವಾಕು ನೀನು ಸಕಲ ಜನರಿಗೆ ಬೇಕು (೧೩)
ಅಲ್ಲಲ್ಲಿ ಪರಿಷೆಯ ಗುಂಪು ಮತ್ತಲ್ಲಲ್ಲಿ ತೋಪಿನ ತಂಪು
ಅಲ್ಲಲ್ಲಿ ಸೊಗಸಿನ ಸೊಂಪು ಮತ್ತಲ್ಲಲ್ಲಿ ಪರಿಮಳಕಂಪು (೧೪)
ಅಲ್ಲಲ್ಲಿ ಜನಗಳ ಕೂಟ ಮತ್ತಲ್ಲಲ್ಲಿ ಬ್ರಾಹ್ಮಣರೂಟ
ಅಲ್ಲಲ್ಲಿ ಪಿಡಿದ ಕೋಲಾಟ ಮತ್ತಲ್ಲಿಂದ ಊರಿಗೆ ಓಟ (೧೫)
ಪಾಪ ವಿನಾಶಿನಿ ಸ್ನಾನ ಹರಿ ಪಾದೋದಕವೆ ಪಾನ
ಕೋಪ ತಾಪಗಳ ನಿಧಾನ ನಮ್ಮ ಪುರಂದರ
ವಿಠಲನ ಧ್ಯಾನ (೧೬)
tirupati veMkaTaramaNa ninagEtake bAradu karuNa
naMbide ninnaya caraNa paripAlisabEkO karuNa (1)
aLagiriyiMdali baMda svAmi aMjanagiriyali niMda
koLalu dhvaniyadO caMda namma kuMDalarAya mukuMda (2)
bETeyADuta baMda svAmi beTTada mEle niMda
nITugAra gOviMda alli jEnu sakkareyanu tiMda (3)
mUDala giriyali niMta muddu veMkaTapati balavaMta
IDilla ninage SrIkAMta ee IrELu lOkakanaMta (4)
ADidare sthiravappa abaddhagaLADalu oppa
bEDida varagaLanippa namma mUDalagiriya timmappa (5)
atirasa appavu medda svAmi asurara kAlali odda
satiyara kUDyADutalidda svAmi sakala durjanaranu gedda (6)
bage bage BakShya paramAnna nAnA bage sakala SAlyanna
bage bage sobagu mOhanna namma nagumuKada suprasanna (7)
kASi rAmESvaradiMda alli kANike baruvudu caMda
dAsara kUDe gOviMda alli dAri naDeyuvude ceMda (8)
ellA dEvara gaMDa ava cillare daivada miMDa
ballidavarige uddaMDa Siva billa murida pracaMDa (9)
kAsu tappidare baDDi baDDi kAsu biDade gaMTu kaTTi
dAsaneMdare biDa gaTTi namma kEsakki timmappa sheTTi (10)
dAsara kaMDare prANa tA dhareyoLadhika pravINa
dvEShiya gaMTala gANa namma dEvage nitya kalyANa (11)
mOsa hOguvanallayya oMdu kAsige oDDuva kayya
Esu mahimegAranayya namma vAsudEva timmayya (12)
cittAvadhAna parAku ninna cittada daya oMdE sAku
satyavAhini ninna vAku nInu sakala janarige bEku (13)
allalli pariSheya guMpu mattallalli tOpina taMpu
allalli sogasina soMpu mattallalli parimaLakaMpu (14)
allalli janagaLa kUTa mattallalli brAhmaNarUTa
allalli piDida kOlATa mattalliMda Urige OTa (15)
pApa vinASini snAna hari pAdOdakave pAna
kOpa tApagaLa nidhAna namma puraMdara
viThalana dhyAna (16)
Leave a Reply