Composer : Shri Vidyaratnakara Tirtharu
Shri Vidyaratnakara Tirtha:
दुर्वादिमत्तनागेंद्र विदारण मृगाधिप: ।
विद्यरत्नाकर गुरुसन्निधत्तां सदाहृदि ।
durvaadimattanaagEndra vidaaraNa mRugaadhipa: |
vidyaratnaakara gurusannidhattaam sadaahRudi |
Vrundavana @ Sosale
Ashrama Period – 1902-1915
Aradhane – Vaishaka Bahula Navami
ನಂದತೀರ್ಥರಾನಂದದಿ ಭಜಿಸಿರೋ
ಬಂದು ಸಲಹಬೇಕೆಂದು ಬೇಡುತಾ || ಪ ||
ಶ್ರದ್ಧೆ ರಮಣನು ಮಧ್ಯಗೇಹರ
ಶುದ್ಧ ಕುಲದೊಳು ಉದ್ಭವಿಸಿದ || ೧ ||
ಗೋಪ್ರದಾಯಕ ವಿಪ್ರವರ್ಯಗೆ
ಕ್ಷಿಪ್ರದಲ್ಲಿ ಸುಪ್ರಜ್ಞೆಯಿತ್ತ ಆ || ೨ ||
ದೂಷ್ಯವಾದ ದುರ್ಭಾಷ್ಯ ಖಂಡಿಸಿ
ಶಿಷ್ಯರಿಗೆ ಸದ್ಭಾಷ್ಯ ಪೇಳಿದ || ೩ ||
ಅಚ್ಯುತೇಕ್ಷರ ತುಚ್ಛಮತದೊಳು
ಇಚ್ಚೆ ತಪ್ಪಿಸಿ ಸ್ವಚ್ಛರೆನಿಸಿದ || ೪ ||
ಆ ಯವನನೃಪತಿಯ ಭವನಕೆ ಪೋಗಿ
ಅವನ ಅರ್ಧರಾಜ್ಯವನೆ ತಂದ ಆ || ೫ ||
ದೇವಗಂಗೆಯು ಪಾವನಾಂಶನ
ಸೇವೆ ಮಾಡಿ ತಾ ಪಾವನಳಾದ ಆ || ೬ ||
ನಾಮಗಿರಿ ಸಿರಿಸ್ವಾಮಿ ನೃಹರಿಯ
ಪ್ರೇಮಬಲದಿ ನಿಸ್ಸೀಮರಾ ಆ || ೭ ||
naMdatIrtharAnaMdadi BajisirO
baMdu salahabEkeMdu bEDutA || pa ||
Sraddhe ramaNanu madhyagEhara
Suddha kuladoLu udBavisida || 1 ||
gOpradAyaka vipravaryage
kShipradalli supraj~jeyitta A || 2 ||
dUShyavAda durBAShya KaMDisi
SiShyarige sadBAShya pELida || 3 ||
acyutEkShara tucCamatadoLu
icce tappisi svacCarenisida || 4 ||
A yavananRupatiya Bavanake pOgi
avana ardharAjyavane taMda A || 5 ||
dEvagaMgeyu pAvanAMSana
sEve mADi tA pAvanaLAda A || 6 ||
nAmagiri sirisvAmi nRuhariya
prEmabaladi nissImarA A || 7 ||
Leave a Reply