Composer : Shri Vidyaratnakara Tirtharu
Shri Vidyaratnakara Tirtha:
दुर्वादिमत्तनागेंद्र विदारण मृगाधिप: ।
विद्यरत्नाकर गुरुसन्निधत्तां सदाहृदि ।
durvaadimattanaagEndra vidaaraNa mRugaadhipa: |
vidyaratnaakara gurusannidhattaam sadaahRudi |
Vrundavana @ Sosale
Ashrama Period – 1902-1915
Aradhane – Vaishaka Bahula Navami
ಕೃಪೆಯಿಟ್ಟು ಸಲಹೆನ್ನ ಹರಿಯೇ ನರಹರಿಯೇ
ದ್ವಿಪವರವರದನೇ ಬಾರಯ್ಯ ಧೊರೆಯೇ || ಪ ||
ದುರಿತಹರವರ ಚರಣಕಮಲನೇ
ಧರಣಿಧರವನು ಕರಸರೋಜದಿ
ಧರಿಸಿ ಸುಜನರ ಪೊರೆದ ಮುರಳೀ
ಧರನೇ ಮೋದವ ಪಡಿಸಿದಂತೆ || ಅ.ಪ||
ನಂದನಂದನ ನಿನ್ನ ಚರಣ ಒಂದೇ ಶರಣ
ಎನಗೆಂದು ನಂಬಿರುವುದೇ ಒಳ್ಳೇ ಆಭರಣ
ಇಂದಿರೇಶನೆ ಮಾಡೋ ಕರುಣ ಸಿಂಧುಶಯನ
ಸುಂದರೀಮಣಿ ಸಹಿತದಲಿ ನೀ
ಬಂದು ಎನ್ನಯ ಮಂದಿರದಲಿ
ನಿಂದು ಎನ್ನವನೆಂದು ಭಾವಿಸಿ
ನಂದಪಡಿಸೈ ನಂದಬಾಲನೇ || ೧ ||
ದೀನಪಾಲನೆ ಭೂಮಿಭಾರಹಾನಿಕರ ಪಂಚ
ಸೂನಶರನಪಿತ ವಿಗತವಿಕಾರ
ಶ್ರೀನಾಥ ಸುಜನಮಂದಾರ ಮೀನಾಕಾರ
ನಾನು ನಿನ್ನವನಯ್ಯ ಎನ್ನಯ
ಮಾನ ಮತ್ತಪಮಾನ ನಿನ್ನದು
ಹೀನಮತಿ ಇವನೆಂದು ತಿಳಿದುದಾ
ಸೀನ ಮಾಡದೆ ಸಾನುರಾಗದಿ || ೨ |
ಸೋಮ ಕುಲಾಂಬುಧಿ ಸೋಮ ರಾರಾಮ
ಬಲರಾಮ ಸಹಜನೇ ಸುರರಿಪು ಭೀಮ
ವಾಮಲೋಚನೇರಿಗೆ ಕಾಮ ಪ್ರೇಮಧಾಮ
ಕಾಮಜನಕನೆ ಸಾಮಗಪ್ರಿಯ
ನಾಮಗಿರಿ ಶ್ರೀರಾಮ ನರಹರೇ
ಕಾಮಿತಾರ್ಥವನೀವ ಸುರತರು
ಕಾಮಧೇನು ಚಿಂತಾಮಣಿಯೇ ನೀ || ೩ ||
kRupeyiTTu salahenna hariyE narahariyE
dvipavaravaradanE bArayya dhoreyE || pa ||
duritaharavara caraNakamalanE
dharaNidharavanu karasarOjadi
dharisi sujanara poreda muraLI
dharanE mOdava paDisidaMte || a.pa||
naMdanaMdana ninna caraNa oMdE SaraNa
enageMdu naMbiruvudE oLLE ABaraNa
iMdirESane mADO karuNa siMdhuSayana
suMdarImaNi sahitadali nI
baMdu ennaya maMdiradali
niMdu ennavaneMdu BAvisi
naMdapaDisai naMdabAlanE || 1 ||
dInapAlane BUmiBArahAnikara paMca
sUnaSaranapita vigatavikAra
SrInAtha sujanamaMdAra mInAkAra
nAnu ninnavanayya ennaya
mAna mattapamAna ninnadu
hInamati ivaneMdu tiLidudA
sIna mADade sAnurAgadi || 2 |
sOma kulAMbudhi sOma rArAma
balarAma sahajanE suraripu BIma
vAmalOcanErige kAma prEmadhAma
kAmajanakane sAmagapriya
nAmagiri SrIrAma naraharE
kAmitArthavanIva surataru
kAmadhEnu ciMtAmaNiyE nI || 3 ||
Leave a Reply