Bettada Shrungava hatti

Composer : Shri Vidyaratnakara Tirtharu

By Smt.Shubhalakshmi Rao

Shri Vidyaratnakara Tirtha:
दुर्वादिमत्तनागेंद्र विदारण मृगाधिप: ।
विद्यरत्नाकर गुरुसन्निधत्तां सदाहृदि ।
durvaadimattanaagEndra vidaaraNa mRugaadhipa: |
vidyaratnaakara gurusannidhattaam sadaahRudi |
Vrundavana @ Sosale
Ashrama Period – 1902-1915
Aradhane – Vaishaka Bahula Navami


ಬೆಟ್ಟದ ಶೃಂಗವ ಹತ್ತಿ ಧುಮುಕುವೆ ನಾನು
ಕೃಷ್ಣನೇ ಸರ್ವೋತ್ತಮ ಮತ್ತಾರೊಬ್ಬರಿಲ್ಲವೆಂದು [ಪ]

ಪಂಕಜಾಸನಾಹಿಪ ಶಂಕರಾದಿಗಳು ಹರಿಗೆ
ಕಿಂಕರರು ಮತ್ತು ಇವಗೆ ಪುತ್ರ ಪೌತ್ರರು
‘ಏಕೋ ನಾರಾಯಣ ಆಸೀನ್ನಬ್ರಹ್ಮೇ’ತಿ ಶ್ರುತಿಯೊಂದೇ
ಸಾಕೊ ಮತ್ತಿನ್ಯಾಕೆ ಸಂಶಯ ಹರಿ ನೀನೆ ಗತಿಯೆಂದು [೧]

‘ಯಂ ಕಾಮಯೇ’ ಎಂಬ ಶ್ರುತಿ ಪಂಕಜಾಸನಾನಿಲ
ಶಂಕರರೆಲ್ಲರೂ ಹರಿಕಿಂಕರಿಸಿರಿಗೆ
ಕಿಂಕರರೆಂಬುದ ನಿಶ್ಶಂಕವಾಗಿ ಪೇಳಲು
ಶಂಕೆ ಯಾಕೊ ಸಲಹೊ ಶ್ರೀ ಪಂಕಜಲೋಚನನೆಂದು [೨]

ಜಾನಕೀ ವಿಯುಕ್ತನಾಗಿ ಕ್ಲೇಶಗಳಪಟ್ಟಿರುವ
ಮತ್ತು ಜರಾಸಂಧಗಂಜಿ ಬೆಟ್ಟವೇರಿದನು
ಇತ್ಯಾದಿ ಭ್ರಾಂತಿ ಯಾಕೊ ನಿರವದ್ಯ ನಿರನಿಷ್ಟ
ಎಂಬೊ ಶ್ರುತಿಯನ್ನೆ ನೋಡಿ ನಿರ್ದೋಷನಿವನೆಂದು [೩]

ದೇವದತ್ತ ಯಜ್ಞದತ್ತ ಮೊದಲಾದ ಜನರಂತೆ
ಪುರುಷನಾದ ಮೇಲೆ ಇವನಲ್ಪಗುಣನು
ಎಂಬ ದುರ್ಮತಿಯ ಬಿಟ್ಟು ಗುಣಶ್ರುತ ಸವಿರುದ್ಧ
ಎಂಬೋ ಶ್ರುತ್ಯರ್ಥವ ತಿಳಿದು ಹರಿಗುಣಪೂರ್ಣನೆಂದು [೪]

ಸೋಮಕುಲಶೇಖರನೆ ಭಾಮಾವಲ್ಲಭ ಬಲ
ರಾಮನಿಗೆ ಸಹೋದರ ಸಾಮಗಪ್ರಿಯ
ಶ್ರೀಮನ್ನಾಮಗಿರಿ ಶ್ರೀ ಸ್ವಾಮಿ ನೃಹರಿಯೆ ವಿದ್ಯಾ
ರತ್ನಾಕರ ಯೋಗಿಯನ್ನು ಹರಿ ನೀನೆ ರಕ್ಷಿಸೆಂದು [೫]


beTTada SRuMgava hatti dhumukuve nAnu
kRuShNanE sarvOttama mattArobbarillaveMdu [pa]

paMkajAsanAhipa SaMkarAdigaLu harige
kiMkararu mattu ivage putra pautraru
`EkO nArAyaNa AsInnabrahmE’ti SrutiyoMdE
sAko mattinyAke saMSaya hari nIne gatiyeMdu [1]

`yaM kAmayE’ eMba Sruti paMkajAsanAnila
SaMkararellarU harikiMkarisirige
kiMkarareMbuda niSSaMkavAgi pELalu
SaMke yAko salaho SrI paMkajalOcananeMdu [2]

jAnakI viyuktanAgi klESagaLapaTTiruva
mattu jarAsaMdhagaMji beTTavEridanu
ityAdi BrAMti yAko niravadya niraniShTa
eMbo Srutiyanne nODi nirdOShanivaneMdu [3]

dEvadatta yaj~jadatta modalAda janaraMte
puruShanAda mEle ivanalpaguNanu
eMba durmatiya biTTu guNaSruta saviruddha
eMbO Srutyarthava tiLidu hariguNapUrNaneMdu [4]

sOmakulaSEKarane BAmAvallaBa bala
rAmanige sahOdara sAmagapriya
SrImannAmagiri SrI svAmi nRuhariye vidyA
ratnAkara yOgiyannu hari nIne rakShiseMdu [5]

Leave a Reply

Your email address will not be published. Required fields are marked *

You might also like

error: Content is protected !!