Composer : Shri Vijayadasaru
ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ |
ನಿರುತ ಅಂತರದೊಳು ಹರಿಗೆ ಸಮ್ಮೊಗನಾಗಿ
ಕರವ ಜೋಡಿಸಿ ಬಿನ್ನೈಪಾ ||
ಗುರುವೆ ಎನ್ನಯ ಮಾತು ಕೇಳೊ ದುರಿತ ರಾಶಿ |
ಪರಿಹಾರ ಮಾಡೊ (೧)
ಮಾರುತಿ ಸದಾಗತಿ ಭಾರತೀಪತಿ ಯತಿ |
ಮಾರರಾತಿಗೆ ನೀ ಗತಿ ||
ಮಾರುತ್ತರ ಕಾಣೆ ಮಾರುತಿ
ಮಾರಿಗಳಿಗೆ ನಿರುತ ಮಾರಕ ನೀನಹುದೋ (೨)
ವಾಯು ಎನಗೆ ಸಂಪೂರ್ಣಾಯು ಸರ್ವ |
ಸಾಯುಜ್ಯ ಸಾರೂಪ್ಯನೆ ||
ಕುಯುಕ್ತಿ ಜನರ ಗದಾಯುದ್ಧದಿಂದಟ್ಟಿ |
ಈ ಯುಗದೊಳು ಬಲವಾಗೋ (೩)
ಕಾಯಯ್ಯಾ ಕರುಣದಿ ಕಾಯ ನಿನ್ನದು ಗುಣ ನಿ |
ಕಾಯ ನಿರ್ದೋಷ ಕಾಯಾ ||
ಕಾಯಾ ಐದಳಮಾನ | ಕಾಯ್ದ ಕಲಿವೈರಿ |
ಕಾಯಜಪಿತನ ದೂತಾ (೪)
ಪಂಕಜನಾಭನ ಅಂಕದಲ್ಲಿಪ್ಪ
ಬಿಂಕವ ತಾಳದಿರೊ |
ಸಂಕರುಷಣ ನಮ್ಮ ವಿಜಯವಿಠ್ಠಲನ ಹೃ
ತ್ಪಂಕಜದೊಳು ತೋರಿಸೊ (೫)
SuBasuMdara kAyA viBuve suragururAyA |
niruta aMtaradoLu harige sammoganAgi
karava jODisi binnaipA ||
guruve ennaya mAtu kELo durita rASi |
parihAra mADo (1)
mAruti sadAgati BAratIpati yati |
mArarAtige nI gati ||
mAruttara kANe mAruti
mArigaLige niruta mAraka nInahudO (2)
vAyu enage saMpUrNAyu sarva |
sAyujya sArUpyane ||
kuyukti janara gadAyuddhadiMdaTTi |
I yugadoLu balavAgO (3)
kAyayyA karuNadi kAya ninnadu guNa ni |
kAya nirdOSha kAyA ||
kAyA aidaLamAna | kAyda kalivairi |
kAyajapitana dUtA (4)
paMkajanABana aMkadallippa
biMkava tALadiro |
saMkaruShaNa namma vijayaviThThalana hRu
tpaMkajadoLu tOriso (5)
Leave a Reply