Composer : Shri Gurugovinda dasaru
ಈರಾ – ಹರಿಪದ ಸೇವಕ ಧೀರಾ |
ಹರಿರಿಪುವನ ಪಾವಕ ಘೋರಾ |
ಭಾರತೀಶ ಮಹ ಶೂರಾ [ಪ]
ಅರಿಕರಿ ಸಂಕುಲ ಕೇಸರಿ ರೂಪನೆ
ಶರಣೆನ್ನುವೆ ತವ ಚರಣಾಬ್ಜಗಳಿಗೆ [ಅ.ಪ]
ಪ್ರಾಣಾ-ಜಗಧರ ಕೂರ್ಮ ಸತ್ರಾಣ |
ಮಾನ ಪ್ರಮೇಯದಿ ನಿಪುಣ ಪಠಿಸಿ
ಮೆರೆದ ನವ ವ್ಯಾಕರಣ |
ಜಡ ಜೀವ ನಿಯಾಮಕ ಪ್ರಾಣ
ಜ್ಞಾನ ಜ್ಞೇಯ ಜ್ಞಾತ್ರ ಅಭಿಧಾನದ
ಕ್ಷೋಣೀಶಗೆ ಕರ್ತೃ ಕರ್ಮ – ಕರಣ [೧]
ಭೀಮಾ – ಕೌರವರಳಿದ ನಿಸ್ಸೀಮ |
ಪ್ರಥಮಾಂಗ ಹರಿಗೆ ಸುಧಾಮ
ಅಸಮ ನಿನ್ನೊಳು ಹರಿಪ್ರೇಮ |
ನಿನಗೊಂದಿಪೆ ಮುಂದಿನ ಬೊಮ್ಮ
ಶ್ಯಾಮಸುಂದರ ಹರಿ ಪ್ರೇಮ ಸಂಪೂರ್ಣ
ನಿಮ್ಮೋಲಗೆ ಬಯಸುವೆ ಭೂಷ ಲಲಾಮ [೨]
ಮಧ್ವಾ – ಬಹುಶ್ರುತಿ ಪ್ರತಿಪಾದ್ಯ |
ಮಧ್ವಾಖ್ಯ ಸತ್ಕೃತಿ ಸಿದ್ಧ ಶುದ್ದ
ಸತ್ವಾತ್ಮಕ ತನು ಬದ್ಧ |
ಬದ್ದತ್ವವು ನಾಮಮಾತ್ರ ಸಿದ್ದ ಅದ್ವಿತೀಯ
ಗುರು ಗೋವಿಂದ ವಿಠಲನ ಸಿದ್ಧಾಂತಿಸಿ
ಬಹು ಹಳಿದೆ ವಿರುದ್ಧ [೩]
eerA – haripada sEvaka dhIrA |
hariripuvana pAvaka GOrA |
BAratISa maha SUrA [pa]
arikari saMkula kEsari rUpane
SaraNennuve tava caraNAbjagaLige [a.pa]
prANA-jagadhara kUrma satrANa |
mAna pramEyadi nipuNa paThisi
mereda nava vyAkaraNa |
jaDa jIva niyAmaka prANa
j~jAna j~jEya j~jAtra aBidhAnada
kShONISage kartRu karma – karaNa [1]
BImA – kauravaraLida nissIma |
prathamAMga harige sudhAma
asama ninnoLu hariprEma |
ninagoMdipe muMdina bomma
SyAmasuMdara hari prEma saMpUrNa
nimmOlage bayasuve BUSha lalAma [2]
madhvA – bahuSruti pratipAdya |
madhvAKya satkRuti siddha Sudda
satvAtmaka tanu baddha |
baddatvavu nAmamAtra sidda advitIya
guru gOviMda viThalana siddhAMtisi
bahu haLide viruddha [3]
Leave a Reply