Composer : Shri Jagannatha dasaru
ಬಿನ್ನೈಪೆ ನಿನಗಾನು ಭೀಮಸೇನ |ಪ|
ಬನ್ನಬಡುತಿಹ ಜನರ ಭಯವ ಪರಿಹರಿಸೆಂದು |ಅ.ಪ|
ನೀಚರಿಂದಲಿ ಬಂದ ಭಯಗಳಿಂದಲಿ ಜನರು
ಯೋಚಿಸುವರೆಮಗಾರು ಗತಿಯೆನುತಲಿ
ಕೀಚಕಾಂತಕ ನಿನ್ನ ಕೀರ್ತಿ ಬಹುವಿಧ ಕೇಳಿ
ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ||೧||
ರೋಚನೇಂದ್ರನೆ ಭವ ವಿಮೋಚಕನು ನೀನೆ ಸಚ
ರಾಚರಕೆ ಸಂತತ ಪುರೋಚನಾರೆ
ಪ್ರಾಚೀನ ಕರ್ಮಾಬ್ಧಿ ವೀಚಿಯೊಳು ಮುಳುಗಿಹನೆ
ಖೇಚರೇಂದ್ರಾಹಿಪ ತ್ರಿಲೋಚನರ ಗುರುವೆಂದು ||೨||
ಖಚರೋತ್ತಮನೆ ನಿನ್ನ ಸುಚರಿತ್ರೆಗಳ ಕೇಳಿ
ರಚನೆಗೈಯ್ಯ ಬಲ್ಲೆನೆ ಅಚಲ ಸತ್ವ
ಪ್ರಚಲಿಸುತ್ತಿಹ ಮನೋವಚನ ಕಾಯವ ಘಟೋ
ತ್ಕಚ ಜನಕ ಸಜ್ಜನರ ಪ್ರಚಯ ಮಾಡುವುದೆಂದು ||೩||
ಈ ಚತುರ್ದಶ ಭುವನದಾಚಾರ್ಯ ದೇಶ ಕಾ
ಲೋಚಿತ ಧರ್ಮಗಳ ಸೂಚಿಸೆಮಗೆ
ಪಾಚಕನೆ ನಿನ್ನಡಿಗೆ ಚಾಚುವೆನು ಶಿರ ಸವ್ಯ
ಸಾಚಿ ಸೋದರನೆ ದಯದಿ ಗೋಚರಿಸಿ ಸಲಹೆಂದು ||೪||
ವಾಚಾಮಗೋಚರ ಜಗನ್ನಾಥ ವಿಠ್ಠಲನ
ಶ್ರೀ ಚರಣ ಭಜಕ ನಿಶಾಚರಾರೆ
ಮೈಚರ್ಮ ಸುಲಿದು ದುಶ್ಯಾಸನನ ರಕುತ ಪರಿ
ಷೇಚನೆಯ ಮಾಡಿದೆ ಮಹೋಚಿತವಿದೆಂದರಿದು||೫||
binnaipe ninagAnu BImasEna |pa|
bannabaDutiha janara Bayava parihariseMdu |a.pa|
nIcariMdali baMda BayagaLiMdali janaru
yOcisuvaremagAru gatiyenutali
kIcakAMtaka ninna kIrti bahuvidha kELi
yAcisuve ninagAnu ellaranu salaheMdu ||1||
rOchanEMdrane Bava vimOcakanu nIne saca
rAcarake saMtata purOcanAre
prAcIna karmAbdhi vIciyoLu muLugihane
KEcarEMdrAhipa trilOcanara guruveMdu ||2||
KacarOttamane ninna sucaritregaLa kELi
racanegaiyya ballene acala satva
pracalisuttiha manOvacana kAyava GaTO
tkacha janaka sajjanara pracaya mADuvudeMdu ||3||
I caturdaSa BuvanadAcArya dESa kA
lOcita dharmagaLa sUcisemage
pAcakane ninnaDige cAcuvenu Sira savya
sAci sOdarane dayadi gOcarisi salaheMdu ||4||
vAcAmagOcara jagannAtha viThThalana
SrI caraNa Bajaka niSAcarAre
maicarma sulidu duSyAsanana rakuta pari
ShEcaneya mADide mahOcitavideMdaridu||5||
Leave a Reply