Composer : Shri Purandara dasaru
ವೀರ ಹನುಮ ಬಹು ಪರಾಕ್ರಮ
ಸುಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ |ಪ|
ರಾಮದೂತ ನೆನಿಸಿಕೊಂಡೆ ನೀ ,
ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ,
ಜಾನಕಿಗೆ ಮುದ್ರೆಯಿತ್ತು , ಜಗತಿಗೆಲ್ಲ ಹರುಷವಿತ್ತು
ಚೂಡಾ-ಮಣಿಯ ರಾಮಗಿತ್ತು ಲೊಕಕೆ ಮುದ್ದೆನಿಸಿ ಮೆರೆವ ||೧||
ಗೋಪಿ-ಸುತನ ಪಾದ ಪೂಜಿಸಿ,
ಗದೆಯ ಧರಿಸಿ ಬಕಾಸುರನ ಸಂಹರಿಸಿದೆ,
ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ್ನ ಕೊಂದು,
ಭೀಮನೆಂಬ ನಾಮ ಧರಿಸಿ ಸಂಗ್ರಾಮ ಧೀರನಾಗಿ ಜಗದಿ ||೨||
ಮಧ್ಯಗೇಹನಲ್ಲಿ ಜನಿಸಿ ನೀ,
ಬಾಲ್ಯದಲ್ಲಿ ಮಸ್ಕರಿಯ ರೂಪಗೊಂಡೆ ನೀ,
ಸತ್ಯವತಿಯ ಸುತನ ಭಜಿಸಿ ಸಮ್ಮುಖದಿ ಭಾಷ್ಯ ಮಾಡಿ,
ಸಜ್ಜನರ ಪೊರೆವ ಮುದ್ದು ಪುರಂದರ ವಿಠಲನ ದಾಸ ||೩||
veera hanuma bahu parAkrama
suj~jAnavittu pAlisenna jeevarOttama |pa|
rAmadUta nenisikoMDe nee ,
rAkShasara vanavanella kittu baMde nee,
jAnakige mudreyittu , jagatigella haruShavittu
chUDA-maNiya rAmagittu lokake muddenisi mereva ||1||
gOpi-sutana pAda poojisi,
gadeya dharisi bakAsurana saMhariside,
draupadiya moreya kELi matte keechakanna koMdu,
bheemaneMba nAma dharisi saMgraama dhIranAgi jagadi ||2||
madhyagEhanalli janisi nee,
bAlyadalli maskariya rUpagoMDe nee,
satyavatiya sutana bhajisi sammukhadi bhAShya mADi,
sajjanara poreva muddu puraMdara viThalana dAsa ||3||

Leave a Reply
You must be logged in to post a comment.